ರೋಡ್‌ಗಿಳಿದರೆ ರೂಲ್ಸ್ ಬ್ರೇಕ್ ಮಾಡುವ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು

ಹೈದರಾಬಾದ್ (Hyderabad) ಟ್ರಾಫಿಕ್ ಪೊಲೀಸರ (Traffic Police) ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು. ಯಾಕಂದ್ರೆ ಹೈದರಾಬಾದ್ನಲ್ಲಿ ಯಾವ ಸ್ಟಾರ್‌ಗಿರಿಯೂ ನಡೆಯಲು ಬಿಡುತ್ತಿಲ್ಲ. ಯಾವ ಸ್ಟಾರೇ ಆಗಿರಲಿ, ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡಿದ್ರೆ ಮುಗೀತು. ದಂಡ ಕಟ್ಟದೇ ಮುಂದೆ ಹೋಗೋ ಹಾಗಿಲ್ಲ. 

First Published Apr 18, 2022, 1:58 PM IST | Last Updated Apr 18, 2022, 1:58 PM IST

ಹೈದರಾಬಾದ್ (Hyderabad) ಟ್ರಾಫಿಕ್ ಪೊಲೀಸರ (Traffic Police) ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು. ಯಾಕಂದ್ರೆ ಹೈದರಾಬಾದ್ನಲ್ಲಿ ಯಾವ ಸ್ಟಾರ್‌ಗಿರಿಯೂ ನಡೆಯಲು ಬಿಡುತ್ತಿಲ್ಲ. ಯಾವ ಸ್ಟಾರೇ ಆಗಿರಲಿ, ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡಿದ್ರೆ ಮುಗೀತು. ದಂಡ ಕಟ್ಟದೇ ಮುಂದೆ ಹೋಗೋ ಹಾಗಿಲ್ಲ. ನಾವು ಸ್ಟಾರ್ಸ್, ಕಾರಿನೊಳಗೆ ನಾವಿದ್ದೇವೆ ಅಂತ ಗೊತ್ತಾಗಬಾರದು ಅಂತ ಕಾರಿನ ಗಾಜಿಗೆ ಟಿಂಟೆಡ್ ಹಾಕಿಕೊಂಡು ಹೈದರಾಬಾದ್ದ ರಸ್ತೆಗಿಳಿದ್ರೆ, ಹುಶಾರ್ ಫೈನ್ ಕಟ್ಟಲೇಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಹಾಗೆ ಹೈದರಾಬಾದ್ನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಫೈನ್ ಕಟ್ಟಿದ ಬಿಗ್ ಸ್ಟಾರ್ಗಳ ಲೀಸ್ಟ್ ದೊಡ್ಡದೇ ಇದೆ.

ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ಕಾಲಿವುಡ್ ಸ್ಟಾರ್ ವಿಶಾಲ್..?

ನಾವು ಸ್ಟಾರ್ಸ್ ಅಂತ ಬೀಗುತ್ತಾ ತಮ್ಮ ಕಾರಿಗೆ ಟೆಂಟೆಡ್ ಗ್ಲಾಸ್ ಹಾಕಿಕೊಂಡು ತಿರುಗಾಡೋ ಟಾಲಿವುಡ್ ಸ್ಟಾರ್ಸ್ ವಿರುದ್ಧ ಹೈದರಾಬಾದ್ ಟ್ರಾಫಿಕ್ ಪಡೆ ಸಮರಕ್ಕಿಳಿದೆ. ಟಾಲಿವುಡ್ (Tollywood) ಟಾಪ್ ಸ್ಟಾರ್‌ಗಳಾದ ಜ್ಯೂನಿಯರ್ ಎನ್‌ಟಿಆರ್ (Jr NTR) ಹಾಗೂ ಅಲ್ಲು ಅರ್ಜುನ್ (Allu Arjun) ತಮ್ಮ ಕಾರಿಗೆ ಟಿಂಟಡ್ ಗ್ಲಾಸ್ (Tinted Glass) ಹಾಕಿಸಿಕೊಂಡು ತಿರುಗುತ್ತಿದ್ರು. ಟಿಂಟೆಡ್ ಗ್ಲಾಸ್ ಬಳಸಬಾರದು ಅಂತ ಟ್ರಾಫಿಕ್ ನಿಯಮ (Traffic Rules) ಇದೆ. ಹೀಗಾಗಿ ಹೈದರಾಬಾದ್ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದ ಅಲ್ಲು ಅರ್ಜುನ್ ಹಾಗು ಜ್ಯೂ. ಎನ್‌ಟಿಆರ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 700 ರೂ.ದಂಡ ಕಟ್ಟಿ ತಮ್ಮ ಕಾರನ್ನ ಬಿಡಿಸಿಕೊಂಡಿದ್ದಾರೆ. 

 ಅಕ್ಕಿನೇನಿ ಕುಟುಂಬದ ಕುಡಿ ಅಕ್ಕಿನೇನಿ ನಾಗ ಚೈತನ್ಯ ಕಾರನ್ನು ಹೈದರಾಬಾದ್ ಟ್ರಾಫಿಕ್ ಪೊಲೀಸರು ತಡೆದಿದ್ದಾರೆ. ಅವರ ಕಾರಿಗೆ ಟಿಂಟೆಡ್ ಗ್ಲಾಸ್‌ ಹಾಕಿರುವ ಕಾರಣ ಪೊಲೀಸರು ತಡೆದು ನಟನಿಗೆ 700 ರೂ. ದಂಡ ಹಾಕಿದ್ದಾರೆ. ನಂತರ ನಾಗಚೈತನ್ಯರ ಕಾರಿನ ಕಿಟಕಿಗಳ ಟಿಂಟೆಡ್ ಗ್ಲಾಸ್ ಅನ್ನು ತೆಗೆದು 700 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದಾರೆ.  ಅಷ್ಟೆ ಅಲ್ಲ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕೂಡ ಇದೇ ತರ ಸಿಕ್ಕಿಬಿದ್ದು ದಂಡ ಕಟ್ಟಿದವರೆ. ಇವರ ಜತೆ ನಟ ಮಂಚು ಮನೋಜ್ ಕೂಡ ಇದೇ ವಿಚಾರಕ್ಕೆ ದಂಡ ಕಟ್ಟಿದ್ದಾರೆ. 

 

Video Top Stories