ರಶ್ಮಿಕಾ ಬಿಟ್ಟು ಮತ್ತೊಬ್ಬ ಕನ್ನಡತಿ ಜೊತೆ ದೇವರಕೊಂಡ ರೊಮ್ಯಾನ್ಸ್

ಭರಾಟೆ ನಟಿಗೆ ವಿಜಯ್ ದೇವರಕೊಂಡ  ಜತೆ ನಟಿಸಲು ಆಫರ್ ಬಂದಿದ್ದು, ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ರೊಮ್ಯಾನ್ಸ್ ಮಾಡಲು ವಿಜಯ್ ದೇವರಕೊಂಡ ರೆಡಿಯಾಗಿದ್ದಾರೆ.

First Published Mar 6, 2023, 1:08 PM IST | Last Updated Mar 6, 2023, 1:08 PM IST

ಭರಾಟೆ ನಟಿಗೆ ವಿಜಯ್ ದೇವರಕೊಂಡ  ಜತೆ ನಟಿಸಲು ಆಫರ್ ಬಂದಿದ್ದು. ಶ್ರೀಲೀಲಾ ಇದು ಸೇರಿ ಒಂಬತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರಂತೆ.  ನಟಿ  ಶ್ರೀಲೀಲಾ ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನೂರಿ ಕಾಂಬಿನೇಷನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರಂತೆ.ಈ ಚಿತ್ರವನ್ನು ಸಿತಾರಾ ಎಂಟರ್ಟೈನ್ಮೆಂಟ್ಸ್ ನಿರ್ಮಿಸಲಿದ್ದು, ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ. ಶ್ರೀಲೀಲಾ ರವಿತೇಜಾ  ಜೊತೆ ಧಮಾಕದಲ್ಲಿ ಕುಣಿದು ಕುಪ್ಪಳಿಸಿದೆ ಫುಲ್‌  ಫೇಮಸ್ ಆಗಿದ್ದಾರೆ. ಒಟ್ಟಿನಲ್ಲಿ ವಿಜಯ್ ದೇವರಕೊಂಡ  ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಇನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕಾಂಬಿನೇಷನ್ ಹಿಟ್ ಆದಂತೆ ಶ್ರೀಲೀಲಾ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ ಹಿಟ್ ಆಗಲಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ . 

Video Top Stories