Actress Hema: ನನ್ನನ್ನು ಯಾಕೆ ಹೀಗೆ ತೋರಿಸ್ತೀರಾ? ನಾನು ಕೊಲೆ ಮಾಡಿದ್ದೀನಾ?: ನಟಿ ಹೇಮಾ ಮಾಧ್ಯಮದವರ ಮೇಲೆ ಗರಂ

ಆನೇಕಲ್ ಕೋರ್ಟ್‌ಗೆ ಸಿಸಿಬಿ ಪೊಲೀಸರು ನಟಿ ಹೇಮಾರನ್ನು ಕರೆತಂದಿದ್ದು, ಈ ವೇಳೆ ಅವರು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.
 

Share this Video
  • FB
  • Linkdin
  • Whatsapp

ಆನೇಕಲ್: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ರೇವ್ ಪಾರ್ಟಿ ಪ್ರಕರಣಕ್ಕೆ(Electronic City Rave Party case) ಸಂಬಂಧಿಸಿದಂತೆ ತೆಲುಗು ನಟಿ ಹೇಮಾ(Actress Hema) ಆನೇಕಲ್ ಕೋರ್ಟ್‌ಗೆ (Anekal Court) ಹಾಜರು ಪಡಿಸಲಾಯಿತು. ಆನೇಕಲ್ ಕೋರ್ಟ್‌ಗೆ ಸಿಸಿಬಿ ಪೊಲೀಸರು(CCB police) ಕರೆದು ತಂದರು. ಮತ್ತೆ ಮಾಧ್ಯಮದವರ ಮೇಲೆ ನಟಿ ಹೇಮಾ ಹರಿಹಾಯ್ದಿದ್ದಾರೆ. ಯಾಕೆ ನನ್ನನ್ನು ಹೀಗೆ ತೋರಿಸ್ತೀರಾ? ನಾನು ಕೊಲೆ ಮಾಡಿದ್ದೀನಾ ಎಂದು ಕೂಗಾಡಿದ್ದಾರೆ. ಮಧ್ಯರಾತ್ರಿಯಲ್ಲಿ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಪೊಲೀಸರ ವಾಹನದಿಂದ ಇಳಿಯುತ್ತಿದ್ದಂತೆ ಮಾಧ್ಯಮದವರ ಮೇಲೆ ಫುಲ್ ಗರಂ ಆಗಿದ್ದಾರೆ. ಪಿಪಿ ವಾದಕ್ಕೆ ಹೇಮಾ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, ಸಂತೋಷ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಲಾಗಿದೆ. ನ್ಯಾಯಾಲಯ ಖಾಸಗಿ ಆಸ್ಪತ್ರೆ ವರದಿಗೆ ಮನ್ನಣೆ ನೀಡಬಾರದು. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಹಾಗಾಗಿ ಸಿಸಿಬಿ ಕಸ್ಟಡಿಗೆ ನೀಡಬಾರದು ಎಂದು ನ್ಯಾಯಾಧೀಶರಿಗೆ ಮನವಿ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ:  Satish Jarakiholi: ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದ್ರೆ ಈ ರೀತಿಯ ಫಲಿತಾಂಶ ನಿರೀಕ್ಷಿತ: ಸತೀಶ್ ಜಾರಕಿಹೊಳಿ

Related Video