
ಮೋಹನ್ ಬಾಬು ಮನೆ ರಣರಂಗ...ಅಪ್ಪ-ಮಗನ ಮಾರಾಮಾರಿ; ವಿಲನ್ ಆದ ಹೀರೋ!
ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಮೋಹನ್ ಬಾಬು.ಮನೆ ಗೇಟ್ ಮುರಿದು ಒಳಪ್ರವೇಶಿಸಿದ ಮಂಚು ಮನೋಜ್ ಆಸ್ತಿ ವಿವಾದ.. ಬೀದಿಗೆ ಬಂದ ಮಂಚು ಫ್ಯಾಮಿಲಿ ಜಗಳ.
ತೆಲುಗಿನ ಚಿತ್ರರಂಗದ ತಾರಾ ಕುಟುಂಬ ಮಂಚು ಫ್ಯಾಮಿಲಿ ಈಗ ಕಿತ್ತಾಡಿಕೊಂಡು ಬೀದಿಗೆ ಬಂದಿದೆ. ಮೋಹನ್ ಬಾಬು ಮನೆ ಮುಂದೆಯೇ ಮಾರಾಮಾರಿ ನಡೆದಿದೆ. ಈ ನಡುವೆ ಮೋಹನ್ ಬಾಬು ಮಾಧ್ಯಮದವರ ಮೇಲೆಯೂ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಮನೆಮುಂದೆ ಅಪ್ಪ-ಮಗನ ಮಾರಾಮಾರಿ.. ವಿಲನ್ ಆದ ಹೀರೋ. ಮಂಚು ಫ್ಯಾಮಿಲಿ ಅಂದ್ರೆ ತೆಲುಗು ಚಿತ್ರರಂಗದ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದು. ಅಸಲಿಗೆ ಮೋಹನ್ ಬಾಬುರ ಇಬ್ಬರು ಪುತ್ರರ ನಡುವೆ ಆಸ್ತಿ ವಿಚಾರಕ್ಕೆ ಕಲಹ ಉಂಟಾಗಿದೆ. ಈ ನಡುವೆ ಮೋಹನ್ ಬಾಬು, ವಿಷ್ಣು ಪರ ನಿಂತುಕೊಂಡಿದ್ದಾರೆ. ಮಂಚು ಮನೋಜ್ ಪತ್ನಿ ಜೊತೆ ಸೇರಿ ಅಪ್ಪ ಮತ್ತು ಸೋದರ ಮೇಲೆ ಕಾನೂನು ಹೋರಾಟ ಶುರುಮಾಡಿದ್ದಾರೆ. ಅಪ್ಪ-ಮಕ್ಕಳು ಪರಸ್ಪರರ ಮೇಲೆ ಪೊಲೀಸ್ ದೂರು ಕೊಟ್ಟುಕೊಂಡಿದ್ದಾರೆ.
Add Asianetnews Kannada as a Preferred Source

ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು