ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು
ಕೂದಲ ಕಟ್ ಮಾಡಿಸೋದನ್ನು ನಿಲ್ಲಿಸಿ ರಚಿತಾ ರಾಮ್...ನಿಮ್ಮ ಬ್ಯೂಟಿಗೆ ಆಡ್ ಆನ್ ಅದೇ ಎಂದ ನೆಟ್ಟಿಗರು.....
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಚಿತಾ ರಾಮ್ ಅಭಿಮಾನಿಗಳ ಕ್ರಿಯೇಟ್ ಮಾಡಿರುವ ಅಕೌಂಟ್‌ನಿಂದ ಈ ವಿಡಿಯೋ ವೈರಲ್ ಆಗಿದ್ದು. ಶಾರ್ಟ್ ಹೇರ್ ಮಾಡಿಸಿಕೊಂಡಿರುವುದಕ್ಕೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಆರೇಂಜ್ ಬಣ್ಣದ ಟೀ-ಶರ್ಟ್ ಧರಿಸಿರುವ ರಚಿತಾ ರಾಮ್‌ಗೆ ಅಸಿಸ್ಟೆಂಟ್ ಮಹಿಳೆ ಹೇರ್‌ಸ್ಟೈಲ್ ಮಾಡಿದ್ದಾರೆ. ಕೂದಲು ಸಿಕ್ಕಾಪಟ್ಟೆ ಶಾರ್ಟ್ ಆಗಿರುವುದಕ್ಕೆ ರಚ್ಚು ಮುಖದಲ್ಲಿ ನಗು ನೋಡಬಹುದು.
ಅಯ್ಯೋ ರಚ್ಚು ನೀವು ಇಷ್ಟು ಶಾರ್ಟ್ ಹೇರ್ ಕಟ್ ಮಾಡಿಸಬೇಡಿ. ನಮ್ಮ ಬುಲ್ ಬುಲ್ ಬ್ಯೂಟಿಗೆ ಉದ್ದವಾದ ಹೇರ್ ನಿಜಕ್ಕೂ ಸೂಪರ್ ಆಗಿ ಕಾಣಿಸುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಕಳೆದ ಸಲ ಮಂಗಳೂರು ಹೇರ್‌ಸ್ಟೈಲಿಸ್ಟ್ ಬಳಿ ಕೂದಲ ಕಟ್ ಮಾಡಿಸಿದ್ದರು. ರಚ್ಚು ಹೊಸ ಲುಕ್ ಎಂದು ಆಗ ವೈರಲ್ ಆಗಿತ್ತು, ಈಗ ಇನ್ನೂ ಶಾರ್ಟ್ ಹೇರ್ ಲುಕ್‌ನಲ್ಲಿದ್ದಾರೆ.
ಕೆಲವು ದಿನಗಳ ಹಿಂದೆ ರಚಿತಾ ರಾಮ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದರು. ನೀನಾಸಂ ಸತೀಶ್ ಜೊತೆ ಅಯೋಗ್ಯ 2 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಚಿತ್ರದ ಮುಹೂರ್ತಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ಕೊಟ್ಟಿದ್ದರು.
ಅಯೋಗ್ಯ -2 ಚಿತ್ರದ ಮೂಲಕ ರಚಿತಾ ರಾಮ್‌ಗೆ ಲೇಡಿ ಸೂಪರ್ ಸ್ಟಾರ್ ಎಂದು ನಿರ್ದೇಶಕ ಮಹೇಶ್ ಮತ್ತು ನಟ ನೀನಾಸಂ ಸತೀಶ್ ಬಿರುದು ನೀಡಿದ್ದಾರೆ. 10 ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ರಚ್ಚುಗೆ ಈ ಟೈಟಲ್ ಪರ್ಫೆಕ್ಟ್.