Asianet Suvarna News Asianet Suvarna News

ಲಡಾಖ್‌ನಲ್ಲಿ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್!

ಕಾಲಿವುಡ್ ಸೂಪರ್ ಸ್ಟಾರ್ ತಲಾ ಅಜಿತ್‌ರದ್ದು ಸಿಕ್ಕಾಪಟ್ಟೆ ಕ್ರೇಜಿ ವ್ಯಕ್ತಿತ್ವ. ಅಜಿತ್ ಅಭಿನಯದಲ್ಲಿ ಎಷ್ಟು ಫೇಮಸ್ಸೋ ತನ್ನ ಕ್ರೇಜಿ ಲೈಫ್ ಸ್ಟೈಲ್‌ನಲ್ಲೂ ಅಷ್ಟೇ ಸಿಂಪಲ್. ಯಾವ್ದೇ ಅಟಿಟ್ಯೂಡ್ ಇಲ್ಲದೆ ಸರಳವಾಗಿರೋ ಅಜಿತ್ ಆಗಾಗ ಎಲ್ಲರ ಮೆಚ್ಚುಗೆಗೂ ಪಾತ್ರರಾಗ್ತಾರೆ.

ಕಾಲಿವುಡ್ ಸೂಪರ್ ಸ್ಟಾರ್ ತಲಾ ಅಜಿತ್‌ರದ್ದು ಸಿಕ್ಕಾಪಟ್ಟೆ ಕ್ರೇಜಿ ವ್ಯಕ್ತಿತ್ವ. ಅಜಿತ್ ಅಭಿನಯದಲ್ಲಿ ಎಷ್ಟು ಫೇಮಸ್ಸೋ ತನ್ನ ಕ್ರೇಜಿ ಲೈಫ್ ಸ್ಟೈಲ್‌ನಲ್ಲೂ ಅಷ್ಟೇ ಸಿಂಪಲ್. ಯಾವ್ದೇ ಅಟಿಟ್ಯೂಡ್ ಇಲ್ಲದೆ ಸರಳವಾಗಿರೋ ಅಜಿತ್ ಆಗಾಗ ಎಲ್ಲರ ಮೆಚ್ಚುಗೆಗೂ ಪಾತ್ರರಾಗ್ತಾರೆ. ತಲಾ ಅಜಿತ್‌ಗೆ ಸಿನಿಮಾ ಮಾತ್ರವಲ್ಲ ಬೇರೆ ಹವ್ಯಾಸಗಳು ಇವೆ.  ಅದರಲ್ಲೂ ಅಜಿತ್‌ಗೆ ಬೈಕ್ ರೈಡಿಂಗ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್. ಹೀಗೆ ಬೈಕ್ ರೋಡ್ ಟ್ರಿಪ್ ಮಾಡುವಾಗ ತಲಾ ಅಜಿತ್‌ಗೆ ಆಕ್ಸಿಡೆಂಟ್ ಕೂಡ ಆಗಿತ್ತು. ಆದ್ರೆ ಅದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಈ ಸೂಪರ್ ಹೀರೋ ಲಡಾಕ್‌ನಲ್ಲಿ ಬೈಕ್ ಟ್ರಿಪ್ ಮಾಡಿದ್ದಾರೆ. ಈ ಬೈಕ್ ಟ್ರಿಪ್‌ನಲ್ಲಿ ನಡೆದ ಘಟನೆಯೊಂದು ಈಗ ಅಜಿತ್ ಮೇಲಿನ ಕ್ರೇಜ್ಅನ್ನ ಮತ್ತಷ್ಟು ಹೆಚ್ಚಿಸಿದೆ. ಅದೇನ್ ಗೊತ್ತ.? ಕರ್ನಾಟಕ ಮೂಲಕ  ಮಂಜು ಕಶ್ಯಪ್ ಅನ್ನೋ ಬೈಕರ್ ಒಬ್ರು ಲಡಾಕ್‌ನಲ್ಲಿ ಬೈಕ್ ರೋಡ್ ಟ್ರಿಪ್ ಮಾಡುತ್ತಿದ್ರು. ಆಗ ಮಂಜು ಕಶ್ಯಪ್ ಅವರ ಬೈಕ್ ಹಾಳಾಗಿದೆ. ರಸ್ತೆ ಬದಿ ನಿಲ್ಲಿಸಿಕೊಂಡು ಸಹಾಯಕ್ಕೆ ಕೇಳುತ್ತಿದ್ದ ಮಂಜು ಕಶ್ಯಪ್ ಅವರಿಗೆ ತಲಾ ಅಜಿತ್ ಎದುರಾಗಿದ್ದಾರೆ. ಅದೇ ದಾರಿಯಲ್ಲಿ ಬರುತ್ತಿದ್ದ ನಟ ಅಜಿತ್ ತಕ್ಷಣ ಬೈಕ್‌ ನಿಲ್ಲಿಸಿ ಕನ್ನಡಿಗ ಮಂಜು ಅವರ ಬೈಕ್ಅನ್ನ ರಿಪೇರಿ ಮಾಡಿ ಒಂದು ರೌಂಡ್ ಓಡಿಸಿದ್ದಾರೆ. ಅಷ್ಟೆ ಅಲ್ಲ ಅಲ್ಲೇ ರಸ್ತೆ ಬದಿಯಲ್ಲಿದ್ದ ಚಿಕ್ಕ ಪೆಟ್ಟಿ ಅಂಗಡಿಯಲ್ಲಿ ಅಜಿತ್ ಟೀ ಕುಡಿದು ಮುಂದೆ ಸಾಗಿದ್ದಾರೆ. ಈ ವಿಚಾರವನ್ನ ಮಂಜು ಕಶ್ಯಪ್ ಅವರು ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories