
Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ಗೆ ಅದ್ಯಾಕೋ ಟೈಮೇ ಸರಿಯಿದ್ದಂತಿಲ್ಲ. ಇತ್ತೀಚಿಗೆ ನಿರ್ದೇಶಕ ಎ.ಆರ್ ಮುರುಗದಾಸ್ ಸಲ್ಮಾನ್ ನೆಟ್ಟಗೆ ಸೆಟ್ಗೆ ಬರಲ್ಲ ಅಂತ ಆರೋಪ ಮಾಡಿದ್ರು. ಈಗ ದಬಾಂಗ್ ನಿರ್ದೇಶಕ ಸಲ್ಮಾನ್ಗೆ ನಟನೆ ಮೇಲೆ ಇಂಟ್ರೆಸ್ಟ್ ಇಲ್ಲ. ಅವನೊಬ್ಬ ಗೂಂಡಾ ಅಂದಿದ್ದಾರೆ.
ಇತ್ತೀಚಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಗ್ರಹಚಾರ ನೆಟ್ಟಗಿಲ್ಲ. ಸಿನಿಮಾಗಳು ಮೊದಲಿನಂತೆ ಗೆಲ್ತಾ ಇಲ್ಲ. ಕಾಂಟ್ರವರ್ಸಿಗಳು ಬೆನ್ನುಬಿಡ್ತಾ ಇಲ್ಲ. ಕೆಲವೇ ದಿನಗಳ ಹಿಂದೆ ನಿರ್ದೇಶಕ ಎ.ಆರ್ ಮುರುಗದಾಸ್ ಸಲ್ಮಾನ್ ಮೇಲೆ ಗಂಭೀರ ಆರೋಪ ಮಾಡಿದ್ರು. ಸಿಕಂದರ್ ಸಿನಿಮಾದ ಸೆಟ್ಗೆ ಸಲ್ಮಾನ್ ಬರ್ತಾ ಇದ್ದಿದ್ದೇ ರಾತ್ರಿ 8 ಗಂಟೆಗೆ. ಸೋ ಸಿನಿಮಾ ಸರಿಯಾಗಿ ಮಾಡ್ಲಿಕ್ಕೆ ಆಗಲಿಲ್ಲ. ಈ ಸೋಲಿಗೆ ಸಲ್ಮಾನ್ ನೇರ ಕಾರಣ ಅಂತ ಮುರುಗದಾಸ್ ಆರೋಪ ಮಾಡಿದ್ರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ