ಆಸ್ಕರ್ ರೇಸ್‌ನಲ್ಲಿ 'ನಾಟು ನಾಟು': ಹಾಲಿವುಡ್ ಹಾಡುಗಳ ಜೊತೆ RRR ಫೈಟ್

ಎಸ್.ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ರೇಸ್'ಗೆ ಬಂದಿದ್ದು, ನಾಲ್ಕು ಹಾಡುಗಳ ಜೊತೆ ಕಾಂಪಿಟೇಶನ್ ಮಾಡುತ್ತಿದೆ.
 

Share this Video
  • FB
  • Linkdin
  • Whatsapp

ನಿರ್ದೇಶಕ ರಾಜಮೌಳಿ ಆ್ಯಂಡ್ ಟೀಂ ನಾಟು ನಾಟು ಹಾಡಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆಯಲು ವೇದಿಕೆ ಏರೋಕೆ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. RRR ಸಿನಿಮಾದ ಹಾಡು ಪ್ರಶಸ್ತಿ ಗೆಲ್ಲಲು ಹಾಲಿವುಡ್'ನ ನಾಲ್ಕು ಹಾಡುಗಳ ಜೊತೆ ಕಾಂಪಿಟೇಶನ್ ಮಾಡ್ಬೇಕು. ಟೆಲ್ ಇಟ್ ಲೈಕ್ ಎ ವುಮನ್ ಸಿನಿಮಾ ಹಾಡು, ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್, ರಿಹಾನಾ ಅವರ ಲಿಫ್ಟ್ ಮಿ ಅಪ್ ಮತ್ತು ದಿಸ್ ಈಸ್ ಎ ಲೈಫ್ ಹಾಡುಗಳ ಜೊತೆ ನಾಟು ನಾಟು ಸಾಂಗ್ ರೇಸ್'ಗೆ ಇಳಿದಿದೆ. ಇನ್ನು RRR ಸಿನಿಮಾದ ಸಾಧನೆಗೆ ಫುಲ್ ಖುಷ್ ಆಗಿರೋ ನಿರ್ದೇಶಕ ರಾಜಮೌಳಿ, ತಮ್ಮ ಇಡೀ ಸಿನಿಮಾ ತಂಡಕ್ಕೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿರೋ ನಾಟು ನಾಟು ಹಾಡು, ಇದೀಗ ಆಸ್ಕರ್ ಕೂಡ ಮುಡಿಗೇರಿಸಿಕೊಳ್ಳುತ್ತೆ ಅಂತ ಹೇಳಲಾಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video