90 ಲಕ್ಷ ವೆಚ್ಚದ ಯುದ್ಧ; 'ಶ್ರೀ ಭರತ ಬಾಹುಬಲಿ'ಯಾಗಿ ಚರಣ್ ರಾಜ್ ಪುತ್ರ!
ಬಹುಭಾಷಾ ನಟ ಚರಣ್ ರಾಜ್ ಅವರ ಪುತ್ರ 'ಶ್ರೀ ಭರತ ಬಾಹುಬಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. '90 ML' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟಿರುವ ತೇಜ್ ಕನ್ನಡ ಚಿತ್ರರಂಗದಲ್ಲೂ ಬೆಳೆಯಬೇಕು ಎಂಬುವುದು ತಂದೆಯಾಗಿ ಚರಣ್ ಬಯಸುತ್ತಾರೆ. ಅಷ್ಟೇ ಅಲ್ಲದೇ ತೇಜ್ ಕನ್ನಡ ಕಲಿಯುತ್ತಿದ್ದಾನೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮಂಜು ಮಾಂಡವ್ಯ ಆ್ಯಕ್ಷನ್ ಕಟ್ ಅಂದ್ಮೇಲೆ ಚಿತ್ರ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಚಿತ್ರದ ವಿಶೇಷತೆಯೇ ಮಲ್ಲ ಯುದ್ಧದ ದೃಶ್ಯ. ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ಯುದ್ಧದ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದು, ಜಾನ್ ಕೋಕೇನ್ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜನವರಿಗೆ 17ರಂದು ತೇಜ್ ಅಭಿನಯದ ಮೊದಲ ಚಿತ್ರ ತೆರೆ ಕಾಣುತ್ತಿದ್ದು ಚಿತ್ರ ಹಿಟ್ ಆಗಲಿ ಎಂಬುವುದು ಸುವರ್ಣನ್ಯೂಸ್.ಕಾಮ್ ಆಶಯ.