
ಹೇಗಿತ್ತು ರಾಯಲ್ ಜರ್ನಿ? ಚಿತ್ರತಂಡ ಹೇಳಿದ ಕ್ರೇಜಿ ಕಹಾನಿ.. ಪಕ್ಕಾ ಮಾಸ್ ಮಸಾಲ ಕಹಾನಿ!
ದಿನಕರ್ ತೂಗುದೀಪ್ ಬಹು ವರ್ಷಗಳ ನಂತರ ನಿರ್ದೇಶನ ಮಾಡಿರುವ ‘ರಾಯಲ್’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ವಿರಾಟ್ ಮತ್ತು ಸಂಜನಾ ನಾಯಕ, ನಾಯಕಿಯರಾಗಿ ನಟಿಸಿರುವ ‘ರಾಯಲ್’ ಚಿತ್ರವನ್ನು ಚಿತ್ರರಂಗದ ಹಿರಿಯ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿದ್ದಾರೆ.
ದಿನಕರ್ ತೂಗುದೀಪ್ ಬಹು ವರ್ಷಗಳ ನಂತರ ನಿರ್ದೇಶನ ಮಾಡಿರುವ ‘ರಾಯಲ್’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ವಿರಾಟ್ ಮತ್ತು ಸಂಜನಾ ನಾಯಕ, ನಾಯಕಿಯರಾಗಿ ನಟಿಸಿರುವ ‘ರಾಯಲ್’ ಚಿತ್ರವನ್ನು ಚಿತ್ರರಂಗದ ಹಿರಿಯ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿದ್ದಾರೆ. ರಘು ದೀಕ್ಷಿತ್, ಛಾಯಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ವೇಳೆ ರಾಯಲ್ ಚಿತ್ರತಂಡ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ವಿರಾಟ್, ‘ಈ ಚಿತ್ರದಲ್ಲಿ ಮಾಸ್ ಎನರ್ಜೆಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ. ದಿನಕರ್ ಅದ್ದೂರಿಯಾಗಿ ಸಿನಿಮಾ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ದಿನಕರ್ ತೂಗುದೀಪ್, ‘ಇಡೀ ಕುಟುಂಬ ಕುಳಿತು ನೋಡಬಹುದಾದ ಸುಂದರ ಸಿನಿಮಾ’ ಎಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.