Auto Expo 2023 ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಲೆಕ್ಸಸ್ ಇವಿ ಅನಾವರಣ!

ಆಕರ್ಷಕ ವಿನ್ಯಾಸದೊಂದಿದೆ, ಆತ್ಯಾಧುನಿಕ ತಂತ್ರಜ್ಞಾನ, ಸುಲಭ ಚಾರ್ಜಿಂಗ್, ಗರಿಷ್ಠ ಮೈಲೇಜ್ ಸೇರಿದಂತೆ ಹತ್ತು ಹಲವು ವಿಶೇಷತೆಗಳು ಐಷಾರಾಮಿ ಲೆಕ್ಸಸ್ ಇವಿ ಕಾನ್ಸೆಪ್ಟ್ ಕಾರು ಅನಾವರಣಗೊಂಡಿದೆ.
 

Share this Video
  • FB
  • Linkdin
  • Whatsapp

ನವದೆಹಲಿ(ಜ.13): ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ ವಿಶ್ವದ ಗಮನಸೆಳೆಯುತ್ತಿದೆ. ಜಗತ್ತಿನ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಗಳು ತಮ್ಮ ಹೊಚ್ಚ ಹೊಸ ಕಾರುಗಳನ್ನು ಇಲ್ಲಿ ಪರಿಚಯಿಸಿದೆ. ಇದರಲ್ಲಿ ಐಷಾರಾಮಿ ಲೆಕ್ಸಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಕೂಡ ಒಂದಾಗಿದೆ. ಲೆಕ್ಸಸ್ LF30 ಹಾಗೂ LF-Z ಎಲೆಕ್ಟ್ರಿಕ್‌ಫೈಡ್ ಕಾನ್ಸೆಪ್ಟ್ ಕಾರು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದೆ. ಗ್ಲಾಸ್ ಕಾಕ್‌ಪಿಟ್, ಆಟೋಮೇಟೆಡ್ ಡ್ರೈವಿಂಗ್ ಟೆಕ್ನಾಲಜಿ ಸೇರಿ ಹಲವು ವಿಶೇಷತೆ ಈ ಕಾರಿನಲ್ಲಿದೆ. ಇನ್ನು ಈ ಕಾರು ಡ್ರೈವಿಂಗ್ ಹಾಗೂ ಪ್ರಯಾಣ ಅತ್ಯಂತ ಆರಾಮದಾಯಕವಾಗಿದ್ದು, ಎಲೆಕ್ಟ್ರಿಕ್ ಮೋಟಾರ್ 4 ವ್ಹೀಲ್ ಡ್ರೈವ್ ಸಾಮರ್ಥ್ಯ ಹೊಂದಿದೆ. ಈ ಕಾರಿನ ವಿನ್ಯಾಸ ಹಾಗೂ ಇತರ ಮಾಹಿತಿಗಳನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video