ಸ್ವಯಂ ಉದ್ಯೋಗದಲ್ಲಿ ಸಕ್ಸಸ್ ಆದ ಮಹಿಳೆ: ವರದಾನವಾದ ಕೇಂದ್ರ ಸರ್ಕಾರದ PMEGP ಸ್ಟಾರ್ಟ್ ಅಪ್ !

ಮಹಿಳಾ ಸಶಕ್ತೀಕರಣಕ್ಕಾಗಿರುವ ಪಿಎಂ-ಇಜಿಪಿ ಯೋಜನೆ
ಕಿರು ಕೈಗಾರಿಕೆಗಳಿಗೆ 25 ಲಕ್ಷ ರೂ.ವರೆಗೆ ಸಾಲ ಸೌಲಭ್ಯ 
ಹರ್ಬಲ್ ಬ್ಯೂಟಿ ಪಾರ್ಲರ್ ನಿರ್ಮಿಸಿ ಸ್ವಾವಲಂಬನೆ ಬದುಕು

First Published Aug 12, 2023, 10:42 AM IST | Last Updated Aug 12, 2023, 11:12 AM IST

ಯಾದಗಿರಿ: ನಾವೆಲ್ಲ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾಲಘಟ್ಟದಲ್ಲಿದ್ದೇವೆ. ನಮ್ಮ ದೇಶ ಕೂಡ ಅತೀ ವೇಗದಲ್ಲಿ ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ಆದ್ರೆ ಸಮಸಮಾಜ ನಿರ್ಮಾಣ ಆಗಬೇಕು. ಮಹಿಳೆಯರು ಸಮಾಜದಲ್ಲಿ ಪುರುಷರಿಗೆ ಸರಿಸಮಾನರಾಗಿ ಬದುಕಬೇಕು ಎಂಬುದು ಎಲ್ಲರ ಆಶಯ. ಅದಕ್ಕಾಗಿ ಸರ್ಕಾರ ಮಹಿಳೆಯರನ್ನು(Women) ಸಶಕ್ತಿಕರಣಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ನರೇಂದ್ರ ಮೋದಿಯವರು(PM Modi) ಪ್ರಧಾನ ಮಂತ್ರಿಯಾದ ಮೇಲೆ ಹೊಸ ಹೊಸ ಸ್ಟಾರ್ಟ್ ಅಪ್ ಗಳನ್ನು ದೇಶಾದ್ಯಂತ ಬಹಳಷ್ಟು ಚುರುಕಾಗಿ ಜಾರಿಗೆ ತಂದಿದ್ದಾರೆ. ಸ್ಟಾರ್ಟ್ ಅಪ್ ನಿಂದ ಹಲವರ ಬದುಕು ಬದಲಾಗಿದೆ. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯಾದ ಪಿಎಂ-ಇಜಿಪಿ ಯೋಜನೆಯು ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗ ಯುವಕ-ಯುವತಿಯರು ಸ್ವಯಂ ಉದ್ಯೋಗದ ಮೂಲಕ ಉತ್ತೇಜನ ನೀಡಲಾಗ್ತದೆ. ಈ ಯೋಜನೆಯಡೀ ಗರಿಷ್ಠ 10 ಲಕ್ಷ ಹಾಗೂ ಕಿರು ಕೈಗಾರಿಕೆಗಳಿಗೆ 25 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಸಿಗಲಿದೆ.

ಶೇ.25 ಸಬ್ಸಿಡಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಈ ಪಿಎಂ-ಇಜಿಪಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗ್ತದೆ. ಆಗ ಅರ್ಜಿ ಹಾಕಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಈ ಪಿಎಂ-ಇಜಿಪಿ ಯೋಜನೆಯಿಂದ ಯಾದಗಿರಿ ನಗರದ ನಿವಾಸಿ ಶಿರೀಶಾ ಎಂಬ ಗೃಹಿಣಿ 4 ವರ್ಷದ ಹಿಂದೆ ಏನಾದ್ರು ಮಾಡಬೇಕು ಅಂತ ಸಾಕಷ್ಟು ರೀತಿಯಲ್ಲಿ ಪ್ರಯತ್ನಪಡ್ತಾರೆ. ಆಕೆಯಲ್ಲಿ ತನ್ನದೆಯಾದ ಕಲೆ ಇರ್ತದೆ. ಆದ್ರೆ ಕೈಯಲ್ಲಿ ದುಡ್ಡು ಇರಲ್ಲ. ಒಂದು ದಿನ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ(Pradhan Mantri Udyog Srijan Yojana) ಬಗ್ಗೆ ತಿಳಿದುಕೊಳ್ತಾರೆ‌. ಆಕೆಯ ಈ ಯೋಜನೆಯಿಂದ ಸಾಲ ಸೌಲಭ್ಯ ಪಡೆಯುತ್ತಾರೆ. ಪಿಎಂ-ಇಜಿಪಿ ಯೋಜನೆಯ ಸಾಲ ಸೌಲಭ್ಯದಿಂದ ಹೊಸ ಬದುಕು ಸೃಷ್ಟಿಯಾಗುತ್ತದೆ.

ಇದನ್ನೂ ವೀಕ್ಷಿಸಿ:  ಕನ್ನಡಿಗರ ಮನಗೆದ್ದ ಖ್ಯಾತ ಗಾಯಕ: ಕನ್ನಡ ಕೋಗಿಲೆ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ !

Read More...