ಕನ್ನಡಿಗರ ಮನಗೆದ್ದ ಖ್ಯಾತ ಗಾಯಕ: ಕನ್ನಡ ಕೋಗಿಲೆ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ !

ಗಾನಕೋಗಿಲೆಯ ಇಂಪಾದ ಗಾನಸುಧೆಗೆ ತಲೆ ದೂಗದವರೇ ಇಲ್ಲ. ಜಾನಪದ ಕಲಾವಿದ ಮಹೇಶ್ ಕಂಠ ಸಿರಿಗೆ ಕೋಟ್ಯಂತರ ಕನ್ನಡಿಗರು ತಲೆ ದೂಗಿ ಮೆಚ್ಚಿಕೊಂಡಿದ್ದಾರೆ. ಆದ್ರೀಗ ಇವರದ್ದೇ ಸಮುದಾಯ ಮಹೇಶ್ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ವಿಧಿಸಿದೆ.

First Published Aug 12, 2023, 10:20 AM IST | Last Updated Aug 12, 2023, 10:20 AM IST

ಚಾಮರಾಜನಗರದ ರಾಮಸಮುದ್ರದ ನಿವಾಸಿ ಗಾಯಕ ಮಹೇಶ್ ದಲಿತ  ಸಮುದಾಯದಕ್ಕೆ ಸೇರಿದವರು. ದಲಿತ ಸಮುದಾಯಕ್ಕೆ(Dalit community) ಮೇಲ್ವರ್ಗದವರಿಂದ ಬಹಿಷ್ಕಾರದಂತ ಶಿಕ್ಷೆಗಳನ್ನು ಕೇಳಿದ್ದೇವೆ. ಆದ್ರಿಲ್ಲಿ ದಲಿತ ಸಮುದಾಯದವರೇ ಗಾಯಕ ಮಹೇಶ್(singer Mahesh) ಕುಟುಂಬ ಸೇರಿದಂತೆ ನಾಲ್ಕು ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ ವಿಧಿಸಿವೆ. ಸಮಾರಂಭವೊಂದರಲ್ಲಿ ನನ್ನನ್ನು ಸನ್ಮಾನಿಸಲು ಗ್ರಾಮಸ್ಥರು ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದ್ರು. ಆದರೆ ಯಜಮಾನರು ನನ್ನ ಹೆಸರನ್ನು ತೆಗೆಸಿ ಅವಮಾನಿಸಿದ್ರು ಎನ್ನುತ್ತಿದ್ದಾರೆ ಕನ್ನಡದ ಕೋಗಿಲೆ(Kannada kogile) ಖ್ಯಾತಿಯ ಮಹೇಶ್. ಕಳೆದ ನಾಲ್ಕು ವರ್ಷಗಳಿಂದ ನಿವೇಶ ವಿವಾದ ವಿಚಾರವಾಗಿ ಈ ಕುಟುಂಬಗಳು ಪೊಲೀಸ್ ಠಾಣೆಗೆ  ದೂರು ನೀಡಿ ನ್ಯಾಯಾಲಯದ ಮೆಟ್ಟಿಲೇರಿದ್ದವು. ಆದ್ರೆ ಈ ವಿವಾದದ ಬಗ್ಗೆ ಯಜಮಾನರು ನ್ಯಾಯಪಂಚಾಯ್ತಿ ನಡೆಸಲು ಮುಂದಾಗಿದ್ರಂತೆ. ಆಗ ನ್ಯಾಯಾಲಯದಲ್ಲೇ ತೀರ್ಮಾನವಾಗಲಿ ಎಂದು ಈ ಕುಟುಂಬಗಳು ಹೇಳಿದ್ದಾರಂತೆ. ಇದರಿಂದ ಸಿಟ್ಟಾದ ಯಜಮಾನರು 6 ಸಾವಿರ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರಂತೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ವೃಶ್ಚಿಕ ರಾಶಿಯವರು ಧೈರ್ಯ, ಸಾಹಸವನ್ನು ತೋರುತ್ತಾರೆ, ವೃತ್ತಿಯಲ್ಲಿ ಕಿರಿಕಿರಿ