Asianet Suvarna News Asianet Suvarna News

ಯುಪಿವಿಸಿ ವಿಂಡೋ ಉದ್ಯಮ: ಕಡಿಮೆ ಖರ್ಚಿನಲ್ಲಿ ರೆಡಿಯಾಗುತ್ತವೆ ಸೂಪರ್ ವಿಂಡೋಸ್ !

ಕೊರೊನಾ ವೈರಸ್ ಬಂದು ಸಂದೀಪ್‌ ಮಾಡುತ್ತಿದ್ದ ಕಂಪನಿ ಕ್ಲೋಸ್ ಆಗಿತ್ತು. ಕೆಲಸವಿಲ್ಲವೆಂದು ರಾಯಚೂರಿಗೆ ಬಂದಿದ್ದರು. ಮುಂದೆ ಏನು ಅಂತ ಆಲೋಚನೆ ಮಾಡುವಾಗ ಸ್ನೇಹಿತರು ಸಹಾಯಕ್ಕೆ ಬಂದ್ರು. ಆ ಸ್ನೇಹಿತರ ಸಹಕಾರದಿಂದ ಈಗ ಆ ಯುವಕ 7-8 ಜನರಿಗೆ ಕೆಲಸ ನೀಡಿದ್ದಾರೆ. ಅಲ್ಲದೇ ಅವರ ಉದ್ಯಮಕ್ಕೆ ಈಗ ಭಾರೀ ಬೇಡಿಕೆಯೂ ಕೇಳಿಬರುತ್ತಿದೆ.
 

ರಾಯಚೂರು: ಕಾರ್ಮಿಕರಂತೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇವರ ಹೆಸರು ಸಂದೀಪ್. ರಾಯಚೂರಿನ(Raichur) ಇಂಡಸ್ಟ್ರೀಯಲ್ ಏರಿಯಾದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ವಾಸವಿ ವಿಂಡೋಸ್ಸ್ ಟೆಕ್(Vasavi Windows Tech) ಹೆಸರಿನ ಸಣ್ಣ ಕಂಪನಿ ನಡೆಸುತ್ತಿದ್ದಾರೆ. ಮೂಲತಃ ರಾಯಚೂರಿನವರಾದ ಸಂದೀಪ್ ಮೆಕ್ಯಾನಿಕಲ್ ಮುಗಿಸಿಕೊಂಡು ಬೆಂಗಳೂರು ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಹತ್ತಾರು ಕಂಪನಿಗಳಲ್ಲಿ ನೌಕರರಾಗಿ ಕೆಲಸ ಮಾಡಿದ್ರು. ಕೊರೊನಾ ಬಂದಾಗ ಕಂಪನಿ ಕೆಲಸ ಬಿಟ್ಟು ಊರಿಗೆ ಶಿಫ್ಟ್ ಆಗಿದ್ರು. ಕಂಪನಿ ಕೆಲಸದಿಂದ ಬೇಸತ್ತ ಸಂದೀಪ್ ಏನಾದರೂ ಸ್ವಂತ ಬಿಸ್ನೆಸ್ ಮಾಡಬೇಕೆಂದು ಸ್ನೇಹಿತ ರಂಜಿತ್ ಜೊತೆಗೆ ಚಿಂತನೆ ನಡೆಸಿದ್ರು. ಹೊಸ ಬಿಸ್ನೆಸ್ ಅಂದ್ರೆ ಅದು ಸುಲಭವಾಗಿ ಆರಂಭಿಸಲು ಆಗಲ್ಲ. ಅದನ್ನ ಅರಿತ ಸಂದೀಪ್ ಕಿತ್ತೂರಿನಲ್ಲಿ ನಡೆದ ಬೃಹತ್ ಕಾಮಗಾರಿ ಒಂದಕ್ಕೆ ಮೆಟಿರಿಯಲ್ ಸರಬರಾಜು ಮಾಡಬೇಕು ಅಂತ ತೀರ್ಮಾನಿಸಿದ್ರು. ಹತ್ತಾರು ಕಡೆ ಯುಪಿವಿಸಿ ವಿಂಡೋಗಳ ಬಗ್ಗೆ ಮಾಹಿತಿ ಪಡೆದರು. ಕೆಲವು ಕಂಪನಿಗಳಿಗೆ ಹೋಗಿ ತಾವೇ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಮೆಟರಿಯಲ್ ಖರೀದಿಗಾಗಿ ಹೈದ್ರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೊಯಮುತ್ತೂರು ಸೇರಿದಂತೆ ನಾನಾ ಕಡೆ ಓಡಾಟ ಮಾಡಿದಾಗ ಮೆಟಿರಿಯಲ್ ಬದಲಾಗಿ ನಾವೇ ಯುಪಿವಿಸಿ ವಿಂಡೋ ತಯಾರಿಕೆ ಮಾಡುವ ಕಂಪನಿ ಓಪನ್ ಮಾಡಿದ್ರೆ ಹೇಗೆ?  ಅಂತ ತೀರ್ಮಾನಿಸಿ ಬಾಡಿಗೆ ಕಟ್ಟಡವೊಂದು ಹಿಡಿದು ಮಟಿರಿಯಲ್ ಖರೀದಿ ಮಾಡಿ ತಂದು ಹಾಕಿದ್ರು.
 
ಕಂಪನಿ ಆರಂಭಿಸಲು ಪ್ಲಾನ್ ಗಳು ರೆಡಿ ಮಾಡಲು ಮುಂದಾಗಿದ್ರು. ಅದರಂತೆ ನಾನಾ ಕಡೆ ಅಲೆದಾಟ ಮಾಡಿ 25 ಲಕ್ಷ ರೂಪಾಯಿ ಬಂಡವಾಳ ಸಹ ಹಾಕಲು ಸ್ನೇಹಿತರು ರೆಡಿಯಾಗಿದ್ರು. ಅದರಂತೆ  ಸಂದೀಪ್ ಸಹ ಕಂಪನಿಯ ಮಷಿನ್‌ಗಳು ಇರುವ ಕಡೆಗೆ ಹೋಗಿ ಕಾರ್ಮಿಕನಂತೆ ಕೆಲಸಕ್ಕೆ ಸೇರಿ 45 ದಿನಗಳ ಕಾಲ ಮಿಷನ್‌ಗಳ ಎಲ್ಲಾ ತರಬೇತಿ ಪಡೆದು ಬಂದು ಯುಪಿವಿಸಿ ವಿಂಡೋಸ್ಸ್ ಕಂಪನಿ(UPVC Window) ಆರಂಭಿಸಿದ್ರು. ಕಂಪನಿಗೆ ಬೇಕಾದ ಬಂಡವಾಳಕ್ಕಾಗಿ ಸ್ನೇಹಿತರ ಸಹಕಾರ ಮತ್ತು ಬ್ಯಾಂಕ್ ಹಾಗೂ ಸಿಡಾಕ್ ಸಂಸ್ಥೆ  ನೆರವಿನಿಂದ 25 ಲಕ್ಷ ರೂಪಾಯಿ ಸಾಲ ಪಡೆದು ಬಿಜನೆಸ್ ಆರಂಭಿಸಿದ್ರು. ಕಿತ್ತೂರಿನಲ್ಲಿ ನಡೆದ ಕಟ್ಟಡದ ಕಾಮಗಾರಿಗೆ ಯುಪಿವಿಸಿ ವಿಂಡೋಸ್ಸ್ ಕಳುಹಿಸಿ ಮೊದಲ ಬಿಲ್ 86 ಲಕ್ಷ ರೂ. ಬಿಲ್ ಪಡೆದರು.

ಇದನ್ನೂ ವೀಕ್ಷಿಸಿ:  ಹಿಮಾಲಯ ಪ್ರವಾಸದ ನಂತರ ಅಯೋಧ್ಯೆಯಲ್ಲಿ ಸೂಪರ್‌ ಸ್ಟಾರ್‌ ಪ್ರತ್ಯಕ್ಷ !

Video Top Stories