
PM Gati Shakti : ದೇಶದ ಭವಿಷ್ಯ ಬದಲಿಸಲಿರುವ ಪಿಎಂ ಗತಿ ಶಕ್ತಿ ಯೋಜನೆ
ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಪಿಎಂ ಗತಿ ಶಕ್ತಿ
ಬರೋಬ್ಬರಿ 100 ಲಕ್ಷ ಕೋಟಿ ರೂಪಾಯಿಯ ಮಾಸ್ಟರ್ ಪ್ಲ್ಯಾನ್
ಮುಂದಿನ 25 ವರ್ಷಗಳಿಗೆ ಈಗಿನಿಂದಲೇ ಅಡಿಪಾಯ
ಬೆಂಗಳೂರು (ಫೆ. 1): ಕೇಂದ್ರ ಬಜೆಟ್ ನಲ್ಲಿ (Union Budget) ಸರ್ಕಾರ ಅತ್ಯಂತ ಮಹತ್ವಾಕಾಂಕ್ಷಿಯಾದ ಪಿಎಂ ಗತಿ ಶಕ್ತಿ (PM Gati Shakti) ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಅನ್ನು (National Master Plan) ಘೋಷಣೆ ಮಾಡಿದೆ. 100 ಲಕ್ಷ ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಮುಂದಿನ 25 ವರ್ಷಗಳ ಭಾರತಕ್ಕೆ (India) ಅಡಿಪಾಯ ಹಾಕಲಿದೆ. ದೇಶಾದ್ಯಂತ 1200 ಕ್ಕೂ ಹೆಚ್ಚು ಇಂಡಸ್ಟ್ರಿಯಲ್ ಕ್ಲಸ್ಟರ್ ಸೇರಿದಂತೆ ದೇಶದ ಎರಡು ರಕ್ಷಣಾ ಕಾರಿಡಾರ್ ನಡುವೆ ಬಹು ಮಾದರಿಯ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ಗತಿ ಶಕ್ತಿ ಯೋಜನೆ.. 2022ಕ್ಕೆ ದೇಶದ ಎಲ್ಲ ಹಳ್ಳಿ 4G!
ನಿರ್ಮಲಾ ಸೀತಾರಾಮನ್ (Nirmala Sitharama) ಮಂಡಿಸಿದ ಬಜೆಟ್ ನಲ್ಲಿ ಬಹಳ ಪ್ರಮುಖವಾಗಿ ಗಮನಸೆಳೆದಿದ್ದು ಪಿಎಂ ಗತಿ ಶಕ್ತಿ ಯೋಜನೆ. ಆದರೆ, ಇದು ಕೇವಲ ಈ ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಯಲ್ಲ. ಪ್ರಧಾನ ಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಸರ್ಕಾರದ ಪ್ರಕ್ರಿಯೆ ಮತ್ತು ಅದರ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುವುದಲ್ಲದೆ ವಿವಿಧ ಸಾರಿಗೆ ವಿಧಾನಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ. ಪಿಎಂ ಗತಿ ಶಕ್ತಿ ಯೋಜನೆಯಲ್ಲಿ ಏನೆಲ್ಲಾ ಇರಲಿದೆ ಎನ್ನುವುದರ ವಿವರ.