Union Budget 2022: ಉದ್ಯೋಗ ಸೃಷ್ಟಿಗೆ ನೆರವು, ಗ್ರಾಮಗಳಿಗೆ ಭಾರೀ ಕೊಡುಗೆ?

ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಬಜೆಟ್‌ ಮಂಡಿಸಲಿದ್ದು, ಈ ಬಜೆಟ್‌ ವರದಾನವಾಗುವುದೇ? ಎಂದು ಜನರು ಕಾತುರದಿಂದ ನೋಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 31): ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಬಜೆಟ್‌ ಮಂಡಿಸಲಿದ್ದು, ಈ ಬಜೆಟ್‌ ವರದಾನವಾಗುವುದೇ? ಎಂದು ಜನರು ಕಾತುರದಿಂದ ನೋಡುತ್ತಿದ್ದಾರೆ. ಕೋವಿಡ್‌ ಸಾಂಕ್ರಾಮಿಕದಿಂದ ನಲುಗಿದ್ದ ದೇಶದ ಆರ್ಥಿಕತೆ, ಕೃಷಿ ವಲಯ, ಉದ್ಯೋಗ ವಲಯ ಸೇರಿದಂತೆ ನಾನಾ ಜನವರ್ಗಗಳಿಗೆ ಬಜೆಟ್‌ನಿಂದ ಸಾಕಷ್ಟು ನಿರೀಕ್ಷೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Union Budget 2022: ಆದಾಯ ತೆರಿಗೆ ಮಿತಿ ಹೆಚ್ಚಳ, ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಸಾಧ್ಯತೆ

ಕೋವಿಡ್‌ ಸಾಂಕ್ರಾಮಿಕದ ಬಳಿಕ ಆಟೋಮೊಬೈಲ್‌, ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ವಲಯಗಳು ನೆಲಕಚ್ಚಿವೆ. ಪರಿಣಾಮ ಕೋಟ್ಯಂತರ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಈ ವಲಯಗಳಲ್ಲಿ ಮತ್ತೆ ಉದ್ಯೋಗ ಸೃಷ್ಟಿಗಾಗಿ ಸರ್ಕಾರ ನಾನಾ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಬಜೆಟ್‌ ಬೆನ್ನಲ್ಲೇ 5 ರಾಜ್ಯಗಳ ಚುನಾವಣೆ ನಡೆಯಲಿದೆ. ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಮತ್ತು ಒಟ್ಟಾರೆ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಕೆಲ ಹೊಸ ಕ್ರಮಗಳನ್ನು ಸರ್ಕಾರ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ. 

Related Video