Asianet Suvarna News Asianet Suvarna News

ಜನರ ಜೇಬಿಗೆ ಹೆಚ್ಚಿನ ಹಣ, ತೆರಿಗೆ ಕಡಿತ; ಕೇಂದ್ರ ಬಜೆಟ್ 2021 ಕುರಿತು ತಜ್ಞರು ಹೇಳುವುದೇನು?

 ಕೊರೋನಾ ವಕ್ಕರಿಸಿದ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ.   ಉತ್ಪಾದನೆ, ಬೇಡಿಕೆಯಲ್ಲಾದ ಏರುಪೇರು ಸೇರಿದಂತೆ ಹಲವು ಕಾರಣಗಳಿಂದ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದೀಗ ಕೇಂದ್ರದ ಬಜೆಟ್ ಕೊರೋನಾದಿಂದ ತುಂಡಾಗಿದ್ದ ಜೀವನ ಚಕ್ರಕ್ಕೆ ಹೊಸ ಚೈತನ್ಯ ನೀಡಲಿದೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ. ಈ ಕುರಿತು ತಜ್ಞರು ಭವಿಷ್ಯ ನುಡಿದಿದ್ದಾರೆ.
 

ಬೆಂಗಳೂರು(ಜ.21): ಕೊರೋನಾ ವಕ್ಕರಿಸಿದ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ.   ಉತ್ಪಾದನೆ, ಬೇಡಿಕೆಯಲ್ಲಾದ ಏರುಪೇರು ಸೇರಿದಂತೆ ಹಲವು ಕಾರಣಗಳಿಂದ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದೀಗ ಕೇಂದ್ರದ ಬಜೆಟ್ ಕೊರೋನಾದಿಂದ ತುಂಡಾಗಿದ್ದ ಜೀವನ ಚಕ್ರಕ್ಕೆ ಹೊಸ ಚೈತನ್ಯ ನೀಡಲಿದೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ.

ಜ.29ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಕುರಿತು ಹಲವು ತಜ್ಞರು ಭವಿಷ್ಯ ನುಡಿದಿದ್ದಾರೆ. ಇದೀಗ ಇಂಡಿಯಾಮನಿ.ಕಾಂ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುದೀರ್ ಸಿಎಸ್ ಕುತೂಹಲ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರ ಕೈಗೆ ಹೆಚ್ಚಿನ ಹಣ ಹರಿದುಬರಲಿದೆ ಎಂದು ಸುದೀರ್ ಹೇಳಿದ್ದಾರೆ.

ಕೇಂದ್ರದ ಬಜೆಟ್ ಮಂಡನೆಗೆ ಶುಭ ಘಳಿಗೆ ಫಿಕ್ಸ್; ಹಲವು ಸಂಪ್ರದಾಯಕ್ಕೆ ಬ್ರೇಕ್!..

ಸರ್ಕಾರ ಜೀವನ ಚಕ್ರ ಸರಪಳಿಗೆ ಹೊಸ ಚೈತನ್ಯ ನೀಡಲು ಮುಂದಾಗಲಿದೆ. ಇದಕ್ಕಾಗಿ ತೆರಿಗೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ. 5 ಲಕ್ಷ ಆದಾಯದಕ್ಕೆ ತೆರಿಗೆ ಕಡಿತ, ವಾರ್ಷಿಕ ಆದಾಯ 5 ರಿಂದ 0 ಲಕ್ಷ ರೂಪಾಯಿ ಇದ್ದವರಿಗೆ ಫ್ಲಾಟ್ 10% ತೆರಿಗೆ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ಉದ್ಯೋಗ ಸೃಷ್ಟಿಸುತುತ್ತಿರುವ ಹಾಗೂ ಭಾರತದ ಆರ್ಥಿಕತೆಯಲ್ಲಿ ಬಹುದೊಡ್ಡ ಕೂಡುಗೆ ನೀಡುತ್ತಿರುವ ಸ್ಟಾರ್ಟ್ ಅಪ್ ಕಂಪನಿಗಳಿಗೆ ಹೆಚ್ಚಿನ ಹಣ ಒದಗಿಸುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸುದೀರ್ ಮಾತುಗಳು ಇಲ್ಲಿವೆ.
 

Video Top Stories