ಕೇಂದ್ರದ ಬಜೆಟ್ ಮಂಡನೆಗೆ ಶುಭ ಘಳಿಗೆ ಫಿಕ್ಸ್; ಹಲವು ಸಂಪ್ರದಾಯಕ್ಕೆ ಬ್ರೇಕ್!

ಫೆಬ್ರವರಿ 1 ರಂದು ಕೇಂದ್ರದ ಬಜೆಟ್ ಮಂಡಣೆಯಾಗಲಿದೆ. ಇದೀಗ ಈ ಬಜೆಟ್ ಮಂಡಣೆಗೆ ಶುಭ ಘಳಿಗೆ ನಿಗದಿ ಮಾಡಲಾಗಿದೆ. ಈ ಘಳಿಗೆ ಕೇಂದ್ರಕ್ಕೆ ಮಾತ್ರವಲ್ಲ ದೇಶಕ್ಕೆ ಒಳಿತಾಗಲಿದೆ ಅನ್ನೋದು ವಿತ್ತ ಸಚಿವೆ ಮಾತು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Union Budget 2021 Nirmala sitharaman to be presented at 11 am on February 1 ckm

ನವದೆಹಲಿ(ಜ.14); ಹಲವು ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಈ ಬಾರಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಇದೀಗ ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಾಗುವುದು. ಪ್ರತಿ ವರ್ಷದಂತೆ ಈ ವರ್ಷವೂ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೊರೋನಾ ಗ್ರಹಣ: 73 ವರ್ಷದಲ್ಲಿ ಮೊದಲ ಬಾರಿ ಪ್ರಿಂಟ್ ಆಗಲ್ಲ ಬಜೆಟ್ ಡಾಕ್ಯುಮೆಂಟ್!

ಈ ಬಾರಿಯ ಬಜೆಟ್ ಅತ್ಯಂತ ಸವಾನಿಲಿದ್ದಾಗಿದೆ. ಕಾರಣ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಬಜೆಟ್ ಇದಾಗಿದೆ. ಇಷ್ಟೇ ಅಲ್ಲ, ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿರುವ ಈ ಸಂದರ್ಭದಲ್ಲಿ ಬಜೆಟ್ ಮಂಡನೆ ಅತ್ಯಂತ ಸವಾಲನಿಂದ ಕೂಡಿದೆ.  

ಈ ಬಾರಿಯ ಬಜೆಟ್ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು  ನೀಡಲಿದೆ. ದೇಶದ ಆರ್ಥಿಕತೆ ಗಮನದಲ್ಲಿಟ್ಟುಕೊಂಡು ಅತ್ಯಂತ ಸೂಕ್ಷ್ಮ ವಿಚಾರಗಳನ್ನುಚರ್ಚಿಸಿ ಬಡೆಟ್ ಮಂಡಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೊರೋನಾ ವೈರಸ್ ಕಾರಣ ಈ ಬಾರಿ ಬಜೆತ್ ಪ್ರತಿ ಪ್ರಿಂಟ್ ಮಾಡುತ್ತಿಲ್ಲ. ಹಿಗಾಗಿ ಇ ಕಾಪಿ ಮೂಲಕ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. 2017ರಿಂದ ಕೇಂದ್ರ ಸರ್ಕಾರ ಕೇಂದ್ರದ ಬಜೆಟ್ ಜೊತೆ ರೈಲ್ವೇ ಬಜೆಟ್ ಕೂಡ ವಿಲೀನ ಮಾಡಿದೆ. ಹೀಗಾಗಿ ಕಳೆದ 4 ವರ್ಷಗಳಂತೆ ಈ ಬಾರಿಯೂ ಪ್ರತ್ಯೇಕ ರೈಲ್ವೇ ಬಜೆಟ್ ಇರುವುದಿಲ್ಲ.

Latest Videos
Follow Us:
Download App:
  • android
  • ios