ಜಾಗತಿಕ ಆರ್ಥಿಕತೆ ಹಿಂಜರಿತ ಅಪಾಯ: ಐಎಂಎಫ್ ನೀಡಿದ ಸುಳಿವು ಏನು?

ಐಎಂಎಫ್ ಭಯಾನಕ ಭವಿಷ್ಯ ಹೇಳಿದ್ದು, ಭವಿಷ್ಯ ವಾಣಿಯ ಪ್ರಕಾರ ಕೆಲವು ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ  ಪರಿಣಾಮ ಬೀರಲಿದೆಯಂತೆ. 
 

First Published Oct 15, 2022, 12:19 PM IST | Last Updated Oct 15, 2022, 12:19 PM IST

ಐಎಂಎಫ್ 2023ರಲ್ಲಿ ಉಂಟಾಗುವ ಜಾಗತಿಕ ಆರ್ಥಿಕ ಹಿನ್ನೆಡೆಯ ಮುನ್ಸೂಚನೆ ನೀಡಿದ್ದು,  ಹೆಚ್ಚುತ್ತಿರುವ ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ  ಪರಿಣಾಮ ಬೀರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮುನ್ಸೂಚನೆ ನೀಡಿದೆ. ಇನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಇದರ ದುಷ್ಪರಿಣಾಮಕ್ಕೆ ತುತ್ತಾಗಲಿವೆ ಎಂದು ಐಎಂಎಫ್ ಎಚ್ಚರಿಕೆ ನೀಡಿದ್ದು, ಅಮೆರಿಕಾ, ಚೀನಾ ಆರ್ಥಿಕತೆ ಬೆಳವಣಿಗೆ ಆಗದೆ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಹೇಳಿದೆ. ಐಎಂಎಫ್ ಮುಖ್ಯ ಆರ್ಥಿಕ ತಜ್ಞರ ಅಭಿಪ್ರಾಯದಂತೆ ಜಗತ್ತಿನಾದ್ಯಂತ ಭೀಕರ ಪರಿಸ್ಥಿತಿ ಉಂಟಾಗಲಿದ್ದು, 2023 ಆರ್ಥಿಕ ಹಿಂಜರಿತದ ಅನುಭವ ನೀಡಲಿದೆ ಎಂದು ಹೇಳಿದ್ದಾರೆ.

ಕೆನಡಾ ಹಿಂದೂ ದೇವಾಲಯ ಮೇಲೆ ದಾಳಿ; ಸಂಸದ ಚಂದ್ರ ಆರ್ಯ ಖಂಡನೆ