Asianet Suvarna News Asianet Suvarna News

ಕೆನಡಾ ಹಿಂದೂ ದೇವಾಲಯ ಮೇಲೆ ದಾಳಿ; ಸಂಸದ ಚಂದ್ರ ಆರ್ಯ ಖಂಡನೆ

ಕೆನಡಾದ ಟೊರೆಂಟೋದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದಿರುವ ದಾಳಿಯನ್ನು ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ತೀವ್ರವಾಗಿ ಖಂಡಿಸಿದ್ದಾರೆ. ಕೆನಡಾದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸಂಸತ್‌ ಸದಸ್ಯರಾಗಿರುವ ಚಂದ್ರ ಆರ್ಯ, ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ದ್ವಾರಾಳು(Dwaralu) ಗ್ರಾಮದವರು,

Attack on Canadian Hindu temple MP Chandra Arya condemnedrav
Author
First Published Sep 21, 2022, 3:02 PM IST

ಮಹಂತೇಶ್ ಕುಮಾರ್ , ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.

ತುಮಕೂರು (ಸೆ.21)  : ಕೆನಡಾದ ಟೊರೆಂಟೋದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದಿರುವ ದಾಳಿಯನ್ನು ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ತೀವ್ರವಾಗಿ ಖಂಡಿಸಿದ್ದಾರೆ. ಕೆನಡಾ ಸಂಸತ್‌ ನಲ್ಲಿ ವಿಷಯ ಪ್ರಸ್ತಾಪಿಸಿದ ಚಂದ್ರ ಆರ್ಯ, ಟೊರೆಂಟೋ(Toronto)ದ ಸ್ವಾಮಿ ನಾರಾಯಣ(Swamy Narayana), ವಿಷ್ಣು ಮಂದಿರ(Vishnu Mandira)ಗಳ ಮೇಲೆ ಕಿಡಿಗೇಡಿಗಳಿಂದ ದಾಳಿ(Attack) ನಡೆಸಿದ್ದಾರೆ.

Canada: ಹಿಂದೂ ದೇವಾಲಯ ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು..!

ಭಾರತ ಸೇರಿದಂತೆ ದಕ್ಷಿಣ ಏಷ್ಯದಿಂದ ಸಾಕಷ್ಟು ಹಿಂದೂಗಳು ಕೆನಡಾ(Canada)ಗೆ ಆಗಮಿಸಿದ್ದಾರೆ, ಭಾರತೀಯ ಮೂಲದ ಹಿಂದೂಗಳು ಶಾಂತಿಪ್ರಿಯರು ಯರು ಹಾಗೂ ಶ್ರಮ ಜೀವಿಗಳು, ತಮ್ಮ ಮಕ್ಕಳ ಶಿಕ್ಷಣ(Education) ಸೇರಿದಂತೆ ಕುಟುಂಬದ ಉನ್ನತಿಗೆ ಶ್ರಮಿಸುತ್ತಾರೆ. ಆದರೆ ಕೆನಾಡದಲ್ಲಿ ಹಿಂದೂ ವಿರೋಧಿ ಗುಂಪುಗಳಿಂದ ಹಿಂದೂಗಳ ಭಾವನೆಗಳ‌ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಜನಾಂಗೀಯ ದ್ವೇಷದಿಂದ ಗಲಾಟೆಗಳು, ಹಲ್ಲೆಗಳು ನಡೆಯುತ್ತಿವೆ.

ಕೆನಡಾ ಸಂಸತ್(Canada Parliment) ಇದನ್ನು ಖಂಡಿಸಬೇಕು ಹಾಗೂ ಇದಕ್ಕೆ ಕಠಿಣ ಕ್ರಮಗಳನ್ನು ರೂಪಿಸಬೇಕು. ಈ ಮೂಲಕ ಹಿಂದೂಗಳ ಹಾಗೂ ಅವರ ಭಾವನೆಗಳ ರಕ್ಷಣೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸದ ಚಂದ್ರ ಆರ್ಯ (Chandra arya)
ಒತ್ತಾಯಿಸಿದ್ದಾರೆ. 

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಚಂದ್ರ ಆರ್ಯ:

ಕೆನಡಾ ಸಂಸತ್‌ನಲ್ಲಿ ಕನ್ನಡತನ ಮೆರೆದಿದ್ದ ಸಂಸದ ಚಂದ್ರ ಆರ್ಯ ಹುಟ್ಟೂರಿಗೆ ಭೇಟಿ ಕೆನಡಾದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸಂಸತ್‌ ಸದಸ್ಯರಾಗಿರುವ ಚಂದ್ರ ಆರ್ಯ, ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ದ್ವಾರಾಳು(Dwaralu) ಗ್ರಾಮದವರು, ಸುಮಾರು 25 ವರ್ಷಗಳ ಹಿಂದೆ ಕೆನಡಾಕ್ಕೆ ಉದ್ಯೋಗ(Job)ಅರಸು ವಲಸೆ ಹೋದ ಚಂದ್ರ ಆರ್ಯ ಕುಟುಂಬ ಸಮೇತರಾಗಿ ಅಲ್ಲಿಯೇ ನೆಲೆಸಿತ್ತು.  ಸಮಾಜ ಸೇವೆ ಮೂಲಕ ಕೆನಡಿಗರ ಮನ ಗೆದ್ದ ಚಂದ್ರ ಆರ್ಯ ಕೆನಡಾ ಸಂಸತ್‌ ನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ  ಸ್ವೀಕಾರ ಮಾಡಿ ದೇಶದಾದ್ಯಂತ ಮನೆ ಮಾತಾಗಿದ್ರು .

Follow Us:
Download App:
  • android
  • ios