Asianet Suvarna News Asianet Suvarna News

ಶುರುವಾಗಲಿದೆ ಜಗತ್ತಲ್ಲಿ ಆರ್ಥಿಕ ತಲ್ಲಣ, ಅಪಾಯದ ಘಂಟೆ ಬಾರಿಸಿದ ವಿಶ್ವ ಬ್ಯಾಂಕ್!

ಜಗತ್ತು ಆರ್ಥಿಕ ತಲ್ಲಣದ ದೃಷ್ಟಿಯಲ್ಲಿ ಮುಖ ಮಾಡಿದೆಯೇ ಅಂಥದ್ದೊಂದು ಅನುಮಾನ ಎಲ್ಲರನ್ನೂ ಕಾಡಿದೆ. ವಿಶ್ವದ ಎಲ್ಲಾ ಆರ್ಥಿಕತೆಗಳಿಗೂ ಈಗ ಟೆನ್ಶನ್‌ ಶುರುವಾಗಿದೆ. ಇದರ ಬೆನ್ನಲ್ಲಿಯೇ ವಿಶ್ವಬ್ಯಾಂಕ್‌ ಕೂಡ ಎಚ್ಚರಿಕೆಯ ಗಂಟೆ ಮೊಳಗಿಸಿದೆ. 1970ರ ಆರ್ಥಿಕ ಹಿಂಜರಿಕೆಗಿಂತಲೂ 2023ರಲ್ಲಿ ಆರ್ಥಿಕ ಹಿಂಜರಿತ ಇನ್ನಷ್ಟು ಘೋರವಾಗಿರಲಿದೆ ಎನ್ನಲಾಗಿದೆ.

ಬೆಂಗಳೂರು (ಸೆ. 19): ಜಗತ್ತಿಗೆ ಆರ್ಥಿಕ ತಲ್ಲಣ.ಅಪಾಯದ ಘಂಟೆ ಬಾರಿಸಿದ ವಿಶ್ವ ಬ್ಯಾಂಕ್. ದೊಡ್ಡಣ್ಣನಿಗೆ ಟೆನ್ಷನ್., ದೊಡ್ಡ ದೇಶಗಳಿಗೂ ಹೈ ಟೆನ್ಷನ್..ಭಾರತ ಮಾತ್ರ ಸುಸ್ಥಿರ..! ಆರ್ಥಿಕ ಹಿಂಜರಿತದಿಂದ ಭಾರತ ಸೇಫ್‌ ಆಗೋದು ಹೇಗೆ ಎನ್ನುವುದರ ಬಗ್ಗೆ ಎಲ್ಲಡೆ ಚರ್ಚೆ ಆಗುತ್ತಿದೆ. 

ಜಗತ್ತು ಕೊರೊನಾ ಕೊಟ್ಟ ಹೊಡೆತದಿಂದ ಈಗ ಚೇತರಿಸಿಕೊಳ್ಳುತ್ತಿದೆ. ಒಂದೊಂದೇ ದೇಶಗಳು ಕುಸಿದು ಬಿದ್ದಿದ್ದ ಆರ್ಥಿಕತೆಯನ್ನ ವಿಟಮಿನ್ ಎಮ್ ಕೊಡೋ ಪ್ರಕ್ರಿಯೆ ಮೂಲಕ ಎತ್ತಿ ನಿಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರ್ತಾ ಇದೆ. ಆದರೆ ಈಗ ವಿಶ್ವ ಬ್ಯಾಂಕ್ ನೀಡಿದ ಒಂದು ವರದಿ ಎಲ್ಲಾ ದೇಶಗಳ ತಲೆ ನೋವಿಗೆ ಕಾರಣವಾಗಿದೆ. ಜಾಗತಿಕವಾಗಿ ಎಲ್ಲಾ ದೇಶಗಳೂ ಕೂಡ ಕಾಸಿನ ಕಾವಿಗೆ ಸಿಕ್ಕಿ ಮೈ ಕೈ ಸುಟ್ಟಿಕೊಳ್ಳೋದು ಪಕ್ಕಾ ಅನ್ನೋ ಮಾತನ್ನಾಡಿದೆ ವರ್ಲ್ಡ್ ಬ್ಯಾಂಕ್.

ಆರ್ಥಿಕತೆ ಪುಟಿದೆದ್ದ ರೀತಿ ಅದ್ಭುತ: ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ ಶಹಭಾಷ್‌!

ಜಗತ್ತಿನ ಎಲ್ಲಾ ದೇಶಗಳಿಗೆ ಆರ್ಥಿಕ ಸಂಕಷ್ಟ ಎದುರಾದಲ್ಲಿ ಭಾರತಕ್ಕೆ ಆಗೋ ಪರಿಣಾಮ ಏನು..? ಭಾರತ ಇದೊಂದು ಫೈನಾನ್ಶಿಯಲ್ ಚಾಲೆಂಜ್ ಹೇಗೆ ಎದುರಿಸುತ್ತೆ ಅನ್ನೋದನ್ನ ಎಲ್ಲರೂ ಕಾಯ್ತಿದ್ದಾರೆ.ಭಾರತ ಆರ್ಥಿಕ ಸಂಕಷ್ಟದ ಸಂಕೋಲೆಯಿಂದ ತಪ್ಪಿಸಿಕೊಳ್ಳೋದು ಸುಲಭದ ಮಾತಲ್ಲ. ಆದ್ರೆ ಭಾರತ ಅದಕ್ಕಾಗಿ ಸ್ಪಷ್ಟವಾಗಿ ತಯಾರಿ ನಡೆಸಿದೆ. 

Video Top Stories