ಗೋ ಮೂತ್ರದಿಂದ ತಯಾರಾಗುತ್ತೆ ಪೆನಾಯಿಲ್, ಸೆಗಣಿಯಿಂದ ಟೂಥ್ ಪೌಡರ್ !

ಕೃಷಿ ಜೊತೆಗೆ ಗೋ ಆಧರಿತ ಉದ್ಯಮ ಮಾಡ್ಬೇಕು ಅಂತಾ ಕನಸು ಕಂಡ ಗದಗ ರೈತ ರವಿ ಹಡಪದ ದೇಸಿ ತಳಿಯ ಗೋವು ಆಧರಿತ 10ಕ್ಕೂ ಹೆಚ್ಚು ಪ್ರೊಡಕ್ಟ್ ತಯಾರಿಸಿ, ಮಾರಾಟ ಮಾಡುವ ಮೂಲಕ ಹೊಸ ಉದ್ಯಮ ಆರಂಭಿಸಿದ್ದಾರೆ.
 

First Published Aug 14, 2023, 12:25 PM IST | Last Updated Aug 14, 2023, 12:25 PM IST

ಗದಗದ ಹಿರೇಹಂದಿಗೋಳ ರಸ್ತೆ ಬಳಿಯ 8 ಎಕರೆ ಜಮೀನು ಹೊಂದಿರೋ ರವಿ, ತಂದೆ ಕಾಲದಿಂದಲೂ ಪಾರಂಪರಿಕ ಕೃಷಿ ಮಾಡ್ತಿದ್ರು. ಕೃಷಿಯಿಂದ ವಿಮುಖವಾಗಿದ್ದ ರವಿ ಗೋವುಗಳ ಮೇಲಿನ ವಿಶೇಷ ಆಸಕ್ತಿಯಿಂದಾಗಿ ಕೃಷಿಗೆ(agriculture) ಮರಳಿದ್ದಾರೆ. ಅಲ್ಲದೇ 2019 ರಿಂದ ಗೋವು ಆಧರಿತ ಕೃಷಿ ಮಾಡಲು ಮುಂದಾಗಿದ್ದಾರೆ. ಅದ್ರಲ್ಲೂ ಗೋ ಮೂತ್ರ(cow urine), ಸಗಣಿ ಬಳಸಿ ಗೃಹ ಬಳಕೆಯ ಪೆನಾಯಿಲ್, ಪಾತ್ರೆ ತೊಳೆಯುವ ಪೌಡರ್, ಧೂಪ್ ಸ್ಟಿಕ್ ಹಾಗೂ ಕಪ್, ವಿಭೂತಿ ಸೇರಿದಂತೆ 10 ಕ್ಕೂ ಹೆಚ್ಚು ಪ್ರೊಡೆಕ್ಟರ್ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ಗೋವುಗಳ(Cows) ಬಗ್ಗೆ ಆಸಕ್ತಿ ಇದ್ದ ರವಿಗೆ ನಾಗ್ಪುರದ ಗೋ ವಿಜ್ಞಾನ ಅನುಸಂಧಾನ ಕೇಂದ್ರಕ್ಕೆ ತೆರಳಿ ಹೆಚ್ಚಿನ ಮಾಹಿತಿ ಪಡೆಯುವಂತೆ ಕೆಲ ಹಿರಿಯರು ಸೂಚಿಸಿದ್ರು. ಅದ್ರಂತೆ ನಾಗ್ಪುರಕ್ಕೆ ತೆರಳಿ ಮಾಹಿತಿ ರವಿ ಪಡೆದಿದ್ರು. ಅಲ್ಲದೇ ಗುಜರಾತ್ ನ ರಾಮಕೃಷ್ಣ ಟ್ರಸ್ಟ್ ಮೂಲಕವೂ ಗೋ ಮೂತ್ರ, ಗೋಮಯದಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ತಿಳಿದುಕೊಂಡ್ರು. ಅಲ್ಲಿಂದ ವಾಪಸ್‌ ಆಗಿ ತಮಗಿದ್ದ ಜಮೀನಲ್ಲೇ ತಯಾರಿಕೆ ಘಟಕ ಶುರು ಮಾಡಿದ್ರು. ಆರಂಭದಲ್ಲಿ ಗೋ ಶಾಲೆಯಿಂದ ದೇಸಿ ತಳಿಯ ಹಸುಗಳನ್ನ ಪಡೆದು ಕೆಲಸ ಆರಂಭಿಸಿದ್ರು. ಈಗ 25ಕ್ಕೂ ಹೆಚ್ಚು ಗೋವುಗಳನ್ನ ಬಳಸಿ ಉತ್ಪನ್ನ ಮಾಡ್ತಿದ್ದಾರೆ. ವಿಶೇಷ ಅಂದ್ರ ಬಹುತೇಕ ಗೋವುಗಳನ್ನ ದಾನದ ರೂಪದಲ್ಲೇ ಪಡೆದಿದ್ದಾರೆ. ಗೋವುಗಳ ಹಾಲು ಹಿಂಡಲಾಗದ ಗೊಡ್ಡು ಆಕಳುಗಳು ಅನ್ನೋದು ವಿಶೇಷ.

ಇದನ್ನೂ ವೀಕ್ಷಿಸಿ:  ಅಜಿತ್ ಪವಾರ್ ಎಂಟ್ರಿ..ಶಿಂಧೆ ಬಣಕ್ಕೆ ಭೀತಿ: ಮೋದಿ ಭೇಟಿ ಮಾಡಿದ ಏಕನಾಥ್‌ ಶಿಂಧೆ !