ಐಟಿ ಇನ್ನಷ್ಟು ಬಿಗಿಯಾಗೈತಿ! ಯಾರೂ ತಪ್ಪಿಸಿಕೊಳ್ಳುವ ಹಂಗಿಲ್ಲ!

ತೆರಿಗೆ ವಂಚನೆ ತಪ್ಪಿಸಲು ಹಾಗೂ ದುಬಾರಿ ಮೊತ್ತದ ಹಣಕಾಸು ವ್ಯವಹಾರಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನೇರ ತೆರಿಗೆ ಸುಧಾರಣೆಗಳನ್ನು ಪ್ರಕಟಿಸುವಾಗ ಪ್ರಧಾನಿ ಮೋದಿ ಅವರು ನಮ್ಮ ದೇಶದ 130 ಕೋಟಿ ಜನರಲ್ಲಿ ಕೇವಲ 1.5 ಕೋಟಿ ಜನರು ಆದಾಯ ತೆರಿಗೆ ಪಾವತಿಸುತ್ತಾರೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜಾರಿಗೆ ಬರುತ್ತಿರುವ ತೆರಿಗೆ ಸುಧಾರಣಾ ಕ್ರಮಗಳಡಿ ಆದಾಯ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹೊಸ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 16): ತೆರಿಗೆ ವಂಚನೆ ತಪ್ಪಿಸಲು ಹಾಗೂ ದುಬಾರಿ ಮೊತ್ತದ ಹಣಕಾಸು ವ್ಯವಹಾರಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನೇರ ತೆರಿಗೆ ಸುಧಾರಣೆಗಳನ್ನು ಪ್ರಕಟಿಸುವಾಗ ಪ್ರಧಾನಿ ಮೋದಿ ಅವರು ನಮ್ಮ ದೇಶದ 130 ಕೋಟಿ ಜನರಲ್ಲಿ ಕೇವಲ 1.5 ಕೋಟಿ ಜನರು ಆದಾಯ ತೆರಿಗೆ ಪಾವತಿಸುತ್ತಾರೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜಾರಿಗೆ ಬರುತ್ತಿರುವ ತೆರಿಗೆ ಸುಧಾರಣಾ ಕ್ರಮಗಳಡಿ ಆದಾಯ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹೊಸ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. 

ಹೊಸ ನಿಯಮದಡಿ ಬಿಸಿನೆಸ್‌ ಕ್ಲಾಸ್‌ನ ದೇಸೀ ಅಥವಾ ವಿದೇಶಿ ವಿಮಾನ ಪ್ರಯಾಣ, ಆಭರಣ ಖರೀದಿ, 1 ಲಕ್ಷ ರು.ಗಿಂತ ಹೆಚ್ಚು ಮೌಲ್ಯದ ಕಲಾಕೃತಿ ಖರೀದಿ, ವರ್ಷಕ್ಕೆ 20,000 ರು.ಗಿಂತ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಆಸ್ತಿ ಖರೀದಿ, ಷೇರು ಮಾರುಕಟ್ಟೆವ್ಯವಹಾರಗಳು, ಚಾಲ್ತಿ ಖಾತೆಯಲ್ಲಿ 50 ಲಕ್ಷ ರು.ಗಿಂತ ಹೆಚ್ಚಿನ ಠೇವಣಿ ಅಥವಾ ಸಾಲ ಮುಂತಾದವುಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗಿ ಬರಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಐಟಿ ಇನ್ನಷ್ಟು ಬಿಗಿಯಾಗೈತಿ: ತೆರಿಗೆ ಸುಧಾರಣೆ ಬೆನ್ನಲ್ಲೇ ಬಿಗಿ ಕ್ರಮ!

Related Video