ಐಟಿ ಇನ್ನಷ್ಟು ಬಿಗಿಯಾಗೈತಿ: ತೆರಿಗೆ ಸುಧಾರಣೆ ಬೆನ್ನಲ್ಲೇ ಬಿಗಿ ಕ್ರಮ!

ಐಟಿ ಇನ್ನಷ್ಟುಬಿಗಿಯಾಗೈತಿ!| 20000 ಕ್ಕಿಂತ ಹೆಚ್ಚಿನ ಹೋಟೆಲ್‌ ಬಿಲ್‌, ಆಸ್ತಿ ತೆರಿಗೆ, ಆರೋಗ್ಯ ವಿಮೆ ಪ್ರೀಮಿಯಂ, 1 ಲಕ್ಷ ರು. ಶಾಲಾ ಶುಲ್ಕ ಮೇಲೆ ಆದಾಯ ತೆರಿಗೆ ಕಣ್ಣು| ಪ್ರಧಾನಿ ತೆರಿಗೆ ಸುಧಾರಣೆ ಜಾರಿ ಮಾಡಿದ ಬೆನ್ನಲ್ಲೇ ಬಿಗಿ ಕ್ರಮ, ದುಬಾರಿ ವ್ಯವಹಾರ ಮಾಹಿತಿ ಸಲ್ಲಿಕೆ ಕಡ್ಡಾಯ?

Income tax Hotel bills, business class flight tickets may come under scanner

ನವದೆಹಲಿ(ಆ.15): ಪ್ರಧಾನಿ ನರೇಂದ್ರ ಮೋದಿ ಅವರು ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿದ್ದಂತೆ ಜನರ ವೈಯಕ್ತಿಕ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನಕಣ್ಣು ಇಡಲು ಆದಾಯ ತೆರಿಗೆ ಇಲಾಖೆ ಸಿದ್ಧತೆ ಆರಂಭಿಸಿದೆ. ಇನ್ನುಮುಂದೆ ನಿಮ್ಮ 26ಎಎಸ್‌ ಫಾಮ್‌ರ್‍ನಲ್ಲಿ ಆದಾಯ ತೆರಿಗೆ ಇಲಾಖೆಯು ನಿಮ್ಮ ಹಣಕಾಸು ವ್ಯವಹಾರಗಳ ಕುರಿತು ಹೆಚ್ಚೆಚ್ಚು ಮಾಹಿತಿ ಕೇಳುವ ಸಾಧ್ಯತೆಯಿದೆ.

"

ಉದಾಹರಣೆಗೆ, 20,000 ರು.ಗಿಂತ ಹೆಚ್ಚಿನ ಹೋಟೆಲ್‌ ಬಿಲ್‌ ಪಾವತಿಸಿದ್ದರೆ ಅಥವಾ ಆರೋಗ್ಯ ವಿಮೆ ಪ್ರೀಮಿಯಂ ಪಾವತಿಸಿದ್ದರೆ, 50,000 ರು.ಗಿಂತ ಹೆಚ್ಚಿನ ಜೀವವಿಮೆ ಪ್ರೀಮಿಯಂ ಪಾವತಿಸಿದ್ದರೆ, ವರ್ಷಕ್ಕೆ 1 ಲಕ್ಷ ರು.ಗಿಂತ ಹೆಚ್ಚು ವಿದ್ಯುತ್‌ ಬಿಲ್‌ ಪಾವತಿಸಿದ್ದರೆ ಅಥವಾ 1 ಲಕ್ಷ ರು.ಗಿಂತ ಹೆಚ್ಚು ಶಾಲಾ ಶುಲ್ಕ ಪಾವತಿಸಿದ್ದರೆ ಅದರ ಬಗ್ಗೆ ಆದಾಯ ತೆರಿಗೆ ಇಲಾಖೆ ಮಾಹಿತಿ ಕೇಳಬಹುದು.

ಪ್ರಾಮಾಣಿಕರಿಗೆ ಮೋದಿ ಗೌರವ: 'ತೆರಿಗೆದಾರ ಚಾರ್ಟರ್‌'ನಲ್ಲಿ ಮಹತ್ವದ ಬದಲಾವಣೆ!

ತೆರಿಗೆ ವಂಚನೆ ತಪ್ಪಿಸಲು ಹಾಗೂ ದುಬಾರಿ ಮೊತ್ತದ ಹಣಕಾಸು ವ್ಯವಹಾರಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನೇರ ತೆರಿಗೆ ಸುಧಾರಣೆಗಳನ್ನು ಪ್ರಕಟಿಸುವಾಗ ಪ್ರಧಾನಿ ಮೋದಿ ಅವರು ನಮ್ಮ ದೇಶದ 130 ಕೋಟಿ ಜನರಲ್ಲಿ ಕೇವಲ 1.5 ಕೋಟಿ ಜನರು ಆದಾಯ ತೆರಿಗೆ ಪಾವತಿಸುತ್ತಾರೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜಾರಿಗೆ ಬರುತ್ತಿರುವ ತೆರಿಗೆ ಸುಧಾರಣಾ ಕ್ರಮಗಳಡಿ ಆದಾಯ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹೊಸ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಆಭರಣ ಖರೀದಿಸಿದರೂ ಮಾಹಿತಿ ನೀಡಬೇಕು:

ಹೊಸ ನಿಯಮದಡಿ ಬಿಸಿನೆಸ್‌ ಕ್ಲಾಸ್‌ನ ದೇಸೀ ಅಥವಾ ವಿದೇಶಿ ವಿಮಾನ ಪ್ರಯಾಣ, ಆಭರಣ ಖರೀದಿ, 1 ಲಕ್ಷ ರು.ಗಿಂತ ಹೆಚ್ಚು ಮೌಲ್ಯದ ಕಲಾಕೃತಿ ಖರೀದಿ, ವರ್ಷಕ್ಕೆ 20,000 ರು.ಗಿಂತ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಆಸ್ತಿ ಖರೀದಿ, ಷೇರು ಮಾರುಕಟ್ಟೆವ್ಯವಹಾರಗಳು, ಚಾಲ್ತಿ ಖಾತೆಯಲ್ಲಿ 50 ಲಕ್ಷ ರು.ಗಿಂತ ಹೆಚ್ಚಿನ ಠೇವಣಿ ಅಥವಾ ಸಾಲ ಮುಂತಾದವುಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗಿ ಬರಬಹುದು ಎಂದು ಹೇಳಲಾಗಿದೆ.

ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್‌ 3 ಸಲಹೆ!

ಮಾಹಿತಿ ಮುಚ್ಚಿಟ್ಟರೆ ಹೆಚ್ಚು ತೆರಿಗೆ:

ದುಬಾರಿ ಮೊತ್ತದ ಹಣಕಾಸು ವ್ಯವಹಾರಗಳನ್ನು ನಡೆಸಿದರೂ ಕಡಿಮೆ ಆದಾಯ ತೋರಿಸಿ ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸದಿರುವವರಿಂದ ಹೆಚ್ಚಿನ ದರದಲ್ಲಿ ತೆರಿಗೆ ಸಂಗ್ರಹಿಸುವ ಸಾಧ್ಯತೆಯಿದೆ ಎಂದೂ ತಿಳಿದುಬಂದಿದೆ. 30 ಲಕ್ಷ ರು.ಗಿಂತ ಹೆಚ್ಚಿನ ಬ್ಯಾಂಕಿಂಗ್‌ ವಹಿವಾಟು ನಡೆಸುವ ಹಾಗೂ ವರ್ಷಕ್ಕೆ 50 ಲಕ್ಷ ರು.ಗಿಂತ ಹೆಚ್ಚು ವಹಿವಾಟಿನ ಉದ್ದಿಮೆಗಳನ್ನು ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸಬೇಕು ಎಂಬ ನಿಯಮವೂ ಜಾರಿಗೆ ಬರುವ ಸಾಧ್ಯತೆಯಿದೆ.

ಈ ಸಂಬಂಧ ಎಸ್‌ಎಫ್‌ಟಿ ಎಂಬ ವರದಿಯೊಂದನ್ನು ನಿರ್ದಿಷ್ಟಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಕೇಳಬಹುದು. ನಿರ್ದಿಷ್ಟಮಾದರಿಯ ಹಣಕಾಸು ವ್ಯವಹಾರ ನಡೆಸುವ ಜನರು ಆದಾಯ ತೆರಿಗೆ ಇಲಾಖೆಗೆ ಈ ವರದಿ ಸಲ್ಲಿಸಬೇಕಾಗುತ್ತದೆ. ಇವೆಲ್ಲವುಗಳಿಗೂ ಅನುಕೂಲವಾಗುವಂತೆ ಈ ವರ್ಷವಷ್ಟೇ ಆದಾಯ ತೆರಿಗೆ ಇಲಾಖೆಯು 26ಎಎಸ್‌ ಫಾಮ್‌ರ್‍ನಲ್ಲಿ ಹೊಸ ಕಾಲಂಗಳನ್ನು ಸೇರ್ಪಡೆ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.

56000 ದಾಟಿದ ಚಿನ್ನ ಸಾರ್ವಕಾಲಿಕ ದಾಖಲೆ: 73000ದ ಸನಿಹ ಬೆಳ್ಳಿ!

ತೆರಿಗೆ ಕಣ್ಣು ಯಾವುದರ ಮೇಲೆ?

- 20 ಸಾವಿರ ರು.ಗಿಂತ ಹೆಚ್ಚಿನ ಹೋಟೆಲ್‌ ಬಿಲ್‌ ಪಾವತಿ

- 20 ಸಾವಿರ ರು.ಗಿಂತ ಅಧಿಕ ಆರೋಗ್ಯ ವಿಮೆ ಪ್ರೀಮಿಯಂ

- 50 ಸಾವಿರ ರು. ಮೇಲ್ಪಟ್ಟಜೀವ ವಿಮೆ ಪ್ರೀಮಿಯಂ

- ವರ್ಷಕ್ಕೆ 1 ಲಕ್ಷ ರು. ಮೀರಿದ ವಿದ್ಯುತ್‌ ಬಿಲ್‌

- 1 ಲಕ್ಷ ರು.ಗಿಂತ ಅಧಿಕ ಶಾಲಾ ಶುಲ್ಕ ಪಾವತಿ

- ವಿಮಾನ ಪ್ರಯಾಣ, ಆಭರಣ ಖರೀದಿ

- 1 ಲಕ್ಷ ರು.ಗಿಂತ ಅಧಿಕ ಮೌಲ್ಯದ ಕಲಾಕೃತಿ ಖರೀದಿ

- 20 ಸಾವಿರ ರು.ಗಿಂತ ಹೆಚ್ಚಿನ ತೆರಿಗೆ ಪಾವತಿಸಬೇಕಾದ ಆಸ್ತಿ ಖರೀದಿ

- ಷೇರು ಮಾರುಕಟ್ಟೆವ್ಯವಹಾರ

- ಚಾಲ್ತಿ ಖಾತೆಯಲ್ಲಿ 50 ಲಕ್ಷ ರು.ಗಿಂತ ಹೆಚ್ಚಿನ ಠೇವಣಿ ಇಟ್ಟಿದ್ದರೆ

Latest Videos
Follow Us:
Download App:
  • android
  • ios