Karnataka Business Award: ಎಂಡಿಬ್ಲ್ಯೂಬಿ ಗ್ರೂಪ್‌ನ ರಮೇಶ್‌ ಬಾಫ್ನಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್

Karnataka Business Award: "ರಾಜಸ್ಥಾನದಿಂದ 1946ರಲ್ಲಿ ನಮ್ಮ ತಂದೆ ಕುಂದಗೋಳಕ್ಕೆ ಬಂದು ವ್ಯಾಪಾರ ಆರಂಭ ಮಾಡಿದ್ರು, 1965ರಲ್ಲಿ ನಾವು ಹುಬ್ಬಳಿಗೆ ಬಂದ್ವಿ" ಅಂತಾರೆ  ರಮೇಶ್‌ ಬಾಫ್ನ

Share this Video
  • FB
  • Linkdin
  • Whatsapp

ಬೆಂಗಳೂರು (ಜು. 30): ಏಷ್ಯಾನೆಟ್ ಸುವರ್ಣನ್ಯೂಸ್ (Asianet Suvarna News) ಹಾಗೂ ಕನ್ನಡಪ್ರಭ (Kannada Prabha) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ (Karnataka Business Award) ನೀಡಲಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಎಂಡಬ್ಲ್ಯೂಬಿ ಗ್ರೂಪ್‌ನ ಮ್ಯಾನೆಜಿಂಗ ಡೈರೆಕ್ಟರ್ ರಮೇಶ್‌ ಬಾಫ್ನ (Ramesh Bafna). "ರಾಜಸ್ಥಾನದಿಂದ 1946ರಲ್ಲಿ ನಮ್ಮ ತಂದೆ ಕುಂದಗೋಳಕ್ಕೆ ಬಂದು ವ್ಯಾಪಾರ ಆರಂಭ ಮಾಡಿದ್ರು, 1965ರಲ್ಲಿ ನಾವು ಹುಬ್ಬಳಿಗೆ ಬಂದ್ವಿ" ಅಂತಾರೆ ರಮೇಶ್‌ ಬಾಫ್ನ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ರಮೇಶ್‌ ಬಾಫ್ನ ವಿವರಿಸಿದ್ದಾರೆ ಕೇಳಿ 

ಇದನ್ನೂ ನೋಡಿ: ಅಪೋನಿಕ್ಸ್‌ ಟೆಕ್ನಾಲಾಜಿಸ್ ಅಮರ್‌ ಜೆ.ಕೆಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌

Related Video