ಇನ್ಫಿ ಮೂರ್ತಿ ಮಗಳು ಅಕ್ಷತಾ, ಕ್ವೀನ್ ಎಲಿಜಬೆತ್‌ಗಿಂತ ಶ್ರೀಮಂತೆ! ಈ ಪರಿ ಆಸ್ತಿ ಹೆಚ್ಚಾಗಿದ್ದು ಹೇಗಂತೆ?
ಬ್ರಿಟನ್ ಹಾಗೂ 15 ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್ ಎಲಿಜಬೆತ್ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿದ್ದಾರಂತೆ!
ಬೆಂಗಳೂರು (ನ. 30): ಬ್ರಿಟನ್ ಹಾಗೂ 15 ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್ ಎಲಿಜಬೆತ್ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿದ್ದಾರಂತೆ!
ನಿರೀಕ್ಷಿಸಿದ್ದಕ್ಕಿಂತ ಪ್ರಬಲವಾಗಿ ಆರ್ಥಿಕತೆ ಚೇತರಿಕೆ: ಆರ್‌ಬಿಐ!
ಬೆಂಗಳೂರಿನ ಇಸ್ಫೋಸಿಸ್ ಕಂಪನಿಯಲ್ಲಿ ಅಕ್ಷತಾ ಮೂರ್ತಿ ಅವರು ಶೇ.0.91 ರಷ್ಟು ಷೇರು ಹೊಂದಿದ್ದು, ಅದರ ಮೌಲ್ಯ 4200 ಕೋಟಿ ರು. ಆಗಿದೆ. ಆದರೆ ಬ್ರಿಟನ್ ರಾಣಿ ಅವರ ಒಟ್ಟಾರೆ ಆಸ್ತಿ 3444 ಕೋಟಿ ರು. ಎಂದು ವರದಿಗಳು ತಿಳಿಸಿವೆ. ಅಕ್ಷತಾ ಆಸ್ತಿ ಪರಿ ಹೆಚ್ಚಾಗಿದ್ದು ಹೇಗೆ?