ಮುಂಬೈ(ನ.27): ಕೋವಿಡ್‌-19 ಉಂಟು ಮಾಡಿದ್ದ ಹೊಡೆತಕ್ಕೆ ತತ್ತರಿಸಿದ್ದ ದೇಶದ ಆರ್ಥಿಕತೆ ಊಹಿಸಿದ್ದಕ್ಕಿಂತ ಪ್ರಬಲವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಗೌರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಆದರೆ ಇದೇ ಚೇತರಿಕೆಯನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ವಿದೇಶಿ ವಿನಿಮಯ ವ್ಯಾಪಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಆರ್ಥಿಕತೆಗಳ ಮೇಲೆ ಇರುವ ಅಪಾಯ ಭಾರತದ ಆರ್ಥಿಕತೆಯ ಮೇಲೂ ಇದೆ. ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.23.9ರಷ್ಟುಬಿದ್ದಿದ್ದ ಆರ್ಥಿಕತೆ, ಎರಡನೇ ತ್ರೈ ಮಾಸಿಕದಲ್ಲಿ ಅಂದುಕೊಂಡದ್ದಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ.

ಮುಂದಿನ ಆರ್ಥಿಕ ವರ್ಷದಲ್ಲಿ ಶೇ.9.5ರಷ್ಟುಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಲಾಕ್‌ಡೌನ್‌ ತೆರವು ಬಳಿಕ ಅದರಲ್ಲೂ ಹಬ್ಬದ ದಿನಗಳಲ್ಲಿ ಆರ್ಥಿಕತೆ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಎಂದು ಅವರು ಹೇಳಿದರು.