ರಷ್ಯಾ- ಉಕ್ರೇನ್ ಯುದ್ಧ ಎಫೆಕ್ಟ್, ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಭಾರಿ ಏರಿಕೆ!
ಉಕ್ರೇನ್ ಮೇಲಿನ ರಷ್ಯಾ ಯುದ್ಧ ಭಾರತ ಆರ್ಥಿಕತೆ ಮೇಲೆಯೂ ಭಾರೀ ಪರಿಣಾಮ ಬೀರಲು ಶುರು ಮಾಡಿದೆ. ಅಗತ್ಯವಸ್ತುಗಳ ಬೆಲೆಗಳು ಮತ್ತೆ ಗಗನಕ್ಕೇರತೊಡಗಿವೆ.
ನವದೆಹಲಿ, (ಮಾ.06): ಉಕ್ರೇನ್ ಮೇಲಿನ ರಷ್ಯಾ ಯುದ್ಧ ಭಾರತ ಆರ್ಥಿಕತೆ ಮೇಲೆಯೂ ಭಾರೀ ಪರಿಣಾಮ ಬೀರಲು ಶುರು ಮಾಡಿದೆ. ಅಗತ್ಯವಸ್ತುಗಳ ಬೆಲೆಗಳು ಮತ್ತೆ ಗಗನಕ್ಕೇರತೊಡಗಿವೆ.
Russia-Ukraine War Effect: ಅಡುಗೆ ಎಣ್ಣೆ ದುಬಾರಿ: ಗ್ರಾಹಕರು ಕಂಗಾಲು..!
ಹೌದು.. ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರುತ್ತಿವೆ. ಒಂದು ವಾರದೊಳಗೆ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ ಒಂದೇ ಸಾರಿ 40 ರೂ. ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕವನ್ನು ವ್ಯಾಪಾರಿಗಳು ಹೊರಹಾಕಿದ್ದಾರೆ. ಆದ್ರೇ ಕೇಂದ್ರ ಮಾತ್ರ ಆ ರೀತಿ ಏನು ಆಗುವುದಿಲ್ಲ ಹೇಳುತ್ತಿದೆ. ಇದಷ್ಟೇ ಅಲ್ಲ, ಗೋಧಿ, ಬೆಳೆ, ಕಾಳುಗಳ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚುತ್ತಿದೆ.