Russia-Ukraine War Effect: ಅಡುಗೆ ಎಣ್ಣೆ ದುಬಾರಿ: ಗ್ರಾಹಕರು ಕಂಗಾಲು..!

*   ಕೆಜಿಗೆ 142 ಇದ್ದ ಪಾಮ್‌ ಆಯಿಲ್‌ ಇದೀಗ .180ಕ್ಕೆ ಹೆಚ್ಚಳ
*   ಶೇಂಗಾ ಎಣ್ಣೆ ದರವೂ ಗಗನಮುಖಿ
*   ಅಡುಗೆ ತೈಲ ಬೇಡಿಕೆಯ ಶೇ.30ರಿಂದ 40ರಷ್ಟು ಮಾತ್ರ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದನೆ 
 

Edible Oil Prices Spike Due to Russia Ukraine War grg

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.04):  ರಷ್ಯಾ(Russia) ಮತ್ತು ಉಕ್ರೇನ್‌(Ukraine) ಯುದ್ಧದ ಪರಿಣಾಮ ದೇಶದ ಅಡುಗೆ ಎಣ್ಣೆ ಮೇಲೆಯೂ ಆಗಿದೆ! ಕಳೆದ ಒಂದು ವಾರದಲ್ಲಿ ಕೆಜಿಗೆ 30ರಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಯುದ್ಧ(War) ಪ್ರಾರಂಭಕ್ಕಿಂತ ಮೊದಲಿನಿಂದಲೂ ಅಡುಗೆ ತೈಲ ದರ ಏರುತ್ತಲೇ ಇತ್ತು. ಆದರೆ, ಉಕ್ರೇನ್‌ ಯುದ್ಧ ಪ್ರಾರಂಭವಾದ ಮೇಲೆ ಏರಿಕೆಯ ವೇಗ ಹೆಚ್ಚಿದೆ. ಅಡುಗೆ ಎಣ್ಣೆ(Edible Oil) ಕೆಜಿಗೆ ಅಂದಾಜು 30- 40 ಹೆಚ್ಚಳವಾಗುತ್ತಿದ್ದು, ಇನ್ನೂ ಹೆಚ್ಚಳವಾಗುತ್ತಲೇ ಇದೆ. ಇನ್ನೆರಡು ದಿನದಲ್ಲಿ ಕೆಜಿಗೆ 50ರಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಫೆ. 24ರಂದು (ಯುದ್ಧಕ್ಕೂ ಮುನ್ನ) ಶೇಂಗಾ ಎಣ್ಣೆ ದರ ಪ್ರತಿ ಕೆಜಿಗೆ 160 ಇತ್ತು. ಆದರೆ, ಮಾ. 3ರಂದು 180 ಆಗಿದೆ. ಸೂರ್ಯಕಾಂತಿ ಎಣ್ಣೆಯ ದರ 152 ಇದ್ದಿದ್ದು .190ಕ್ಕೆ ಜಿಗಿದಿದೆ. ಪಾಮ್‌ ಆಯಿಲ್‌ ದರದಲ್ಲೂ ಏರಿಕೆ ಕಂಡಿದ್ದು, ಕೆಜಿಗೆ 148 ಇದ್ದಿದ್ದು, 180 ಆಗಿದೆ. ಇದು ಹೋಲ್‌ಸೇಲ್‌ ಧಾರಣೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40- 50ರಷ್ಟುಏರಿಕೆ ಕಂಡಿದೆ.

ಅಡುಗೆ ಎಣ್ಣೆ ಎರಡನೇ ಸಲ ಕುದಿಸಿದರೆ ಅದು ವಿಷವೇ!

ದರ ಹೆಚ್ಚಳಕ್ಕೆ ಕಾರಣ:

ಸೂರ್ಯಕಾಂತಿ ಎಣ್ಣೆ ಉಕ್ರೇನ್‌ ದೇಶದಿಂದಲೇ ಬಹುತೇಕ ಆಮದಾಗುತ್ತಿತ್ತು. ಪಾಮ್‌ ಆಯಿಲ್‌(Palm Oil) ಮಲೇಷಿಯಾದಿಂದ(Malaysia0 ಆಮದಾಗುತ್ತಿದೆ. ಆದರೆ, ಯುದ್ಧ ನಡೆಯುತ್ತಿರುವುದರಿಂದ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಬಾರದಿರುವುದರಿಂದ ಅದರ ಅಭಾವದ ಜೊತೆ ದರದಲ್ಲೂ ಹೆಚ್ಚಳವಾಗಿದೆ. ಜನರು ಪರ್ಯಾಯವಾಗಿ ಪಾಮ್‌ ಆಯ್ಲ್‌ ಬಳಕೆ ಮಾಡುತ್ತಿರುವುದರಿಂದ ಅದರ ಬೆಲೆಯೂ ಹೆಚ್ಚುತ್ತಿದೆ. ಯುದ್ಧದಿಂದ ಸೂರ್ಯಕಾಂತಿ ಎಣ್ಣೆ ದರ ಹೆಚ್ಚುತ್ತದೆ ಎಂದು ಅರಿತ ಕೆಲವರು ಅದನ್ನು ಕಾಳಸಂತೆಯಲ್ಲಿ ಸಂಗ್ರಹಿಸಿದ್ದೂ ಕೂಡ ದರ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಬುಕ್ಕಿಂಗ್‌ ಕಡ್ಡಾಯ:

ಕೆಲವಡೆ ಶೇಂಗಾ, ಸೂರ್ಯಕಾಂತಿ ಹಾಗೂ ಪಾಮ್‌ ಆಯಿಲ್‌ ಕೃತಕ ಅಭಾವ ಸೃಷ್ಟಿಯಾಗಿದ್ದು, ಮುಂಗಡ ಬುಕ್ಕಿಂಗ್‌ ಮಾಡಿದರೆ ಮಾತ್ರ ಕಳುಹಿಸಿಕೊಡಲಾಗುತ್ತದೆ. ಪ್ರತಿ ದಿನವೂ ದರ(Price) ಬದಲಾವಣೆ ಆಗುತ್ತಿರುತ್ತದೆ. ಅಗತ್ಯದಷ್ಟು ಪೂರೈಸುತ್ತಿಲ್ಲ ಎಂದು ವ್ಯಾಪಾರಸ್ಥರು ದೂರುತ್ತಾರೆ.

ಅಡುಗೆ ಎಣ್ಣೆ ದರ ಏರಿಕೆಯಾಗಿರುವುದರಿಂದ ಬಹುತೇಕ ಆಹಾರ ಪದಾರ್ಥಗಳ ದರದಲ್ಲೂ ಹೆಚ್ಚಳ ಕಂಡು ಬಂದಿದೆ. ಪ್ರತಿ ಖಾದ್ಯ ತಯಾರಿಗೆ ಅಡುಗೆ ಎಣ್ಣೆ ಬೇಕೇ ಬೇಕು. ಇದರಿಂದ ಹೊಟೇಲ್‌ಗಳಲ್ಲೂ ದರ ಏರಿಕೆಯ ಬಿಸಿ ತಟ್ಟಲಿದೆ.
ಪೆಟ್ರೋಲ್‌ ಬೆಲೆ ಏರಿಕೆ ಕುರಿತು ದೊಡ್ಡ ಚರ್ಚೆಯಾಗುತ್ತಿದೆ. ಆದರೆ, ಅದನ್ನು ಮೀರಿಸುವಂತೆ ಅಡುಗೆ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ.

Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

ಅಡುಗೆ ಎಣ್ಣೆ ದರ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಕಳೆದೊಂದು ವಾರದಿಂದ ವಿಪರೀತ ಏರಿಕೆಯಾಗುತ್ತಿದೆ. ವಾರದಲ್ಲಿಯೇ ಕೆಜಿಗೆ ಸುಮಾರು 30ರಿಂದ 40 ದುಬಾರಿಯಾಗಿದೆ ಅಂತಾರೆ ಅಡುಗೆ ಎಣ್ಣೆ ವ್ಯಾಪಾರಸ್ಥ ಗಿರೀಶ ಪಾನಘಂಟಿ
ಅಡುಗೆ ತೈಲ ಬೇಡಿಕೆಯ ಶೇ. 30ರಿಂದ 40ರಷ್ಟು ಮಾತ್ರ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗುತ್ತದೆ. ಹೊರದೇಶಗಳಿಂದಲೇ ಆಮದು ಪ್ರಮಾಣ ಅಧಿಕವಾಗಿರುವುದರಿಂದ ದರ ಹೆಚ್ಚಳವಾಗುತ್ತಿದೆ. ದರ ಇನ್ನೂ ಏರುವ ಸಾಧ್ಯತೆ ಇದೆನ ಅಂತ ಅಡುಗೆ ಎಣ್ಣೆ ಉದ್ಯಮಿ ಪ್ರಭುದೇವ ತೆಂಗಿನಕಾಯಿ ತಿಳಿಸಿದ್ದಾರೆ. 

ಮಿಲಿಟರಿ ಸಮವಸ್ತ್ರದ ಮೇಲೆ ಸುಖನಿದ್ದೆಗೆ ಜಾರಿದ ಕಂದ... ಫೋಟೋ ಹೇಳುತ್ತಿದೆ ಯುದ್ಧದ ದುರಂತ ಕತೆ

ರಷ್ಯಾದ ಆಕ್ರಮಣದ ನಡುವೆ ಮಿಲಿಟರಿ ಸಮವಸ್ತ್ರದ (military uniform) ಮೇಲೆ ಮಗು ವಿಶ್ರಾಂತಿ ಪಡೆಯುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೋಡುಗರ ಕಣ್ಣನ್ನು ತೇವಗೊಳಿಸುವ ಈ ಫೋಟೋದಲ್ಲಿ ಉಕ್ರೇನಿಯನ್ ಮಗುವೊಂದು ತನ್ನ ಪೋಷಕರ ಸಮವಸ್ತ್ರದ ಮೇಲೆ ಶಾಂತಿಯುತವಾಗಿ ಮಲಗಿರುವುದನ್ನು ತೋರಿಸುತ್ತಿದೆ. ಈ ಫೋಟೋ ವೈರಲ್ ಆಗಿದ್ದು, 'ಗುಡ್ ಬೈ ನನ್ನ ಪುಟ್ಟ ಕಂದ, ಬದುಕುಳಿದು ಮತ್ತೆ ನಿನ್ನ ನೋಡುವ ಭರವಸೆ ಇಟ್ಟುಕೊಳ್ಳುವೆ' 'ಗುಡ್ ಬೈ ಮೈ ಲಿಟಲ್ ಬಾಯ್..ಐ ಹೋಪ್ ಸೀ ಯು ಇನ್ 

Latest Videos
Follow Us:
Download App:
  • android
  • ios