ನಗರ ಸ್ವಚ್ಛಗೊಳಿಸ್ತಿರೋ ಪೌರ ಕಾರ್ಮಿಕರಿಗಾಗಿನ್ಯೂರಾನ್, ಸುವರ್ಣನ್ಯೂಸ್‌ನಿಂದ ವಾಕಥಾನ್

ನಗರವನ್ನು ಸ್ವಚ್ಚ ಸಿಟಿ ಮಾಡಲು ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗಾಗಿ ಬೆಂಗಳೂರಿನಲ್ಲಿ ವಾಕಥಾನ್ ನಡೆಯಿತು. ನ್ಯೂರಾನ್ ನೆಟ್ ವರ್ಕ್, ಬಿಬಿಎಂಪಿ ಮತ್ತು ಸುವರ್ಣನ್ಯೂಸ್ ಜಂಟಿ ಸಂಯೋಜಕತ್ವದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚನ್ನಕೇಶವ ನಗರದಲ್ಲಿ 3 ಕಿಲೋ ಮೀಟರ್ ಗಳ ವಾಕಥಾನ್ ನಡೆಸಿದರು.  

Share this Video
  • FB
  • Linkdin
  • Whatsapp

ಬೆಂಗಳೂರು ಐಟಿಬಿಟಿ ಸಿಟಿ. ಆದ್ರೆ ಸ್ವಚ್ಛತೆಯ ವಿಷಯಕ್ಕೆ ಬಂದಾಗ ನಗರ ಯಾವತ್ತೂ ಸಹ ಟೀಕೆಗೆ ಒಳಗಾಗುತ್ತದೆ. ಹೀಗಾಗಿಯೇ ಈ ಬಗ್ಗೆ ಅರಿವು ಮೂಡಿಸಲು ನ್ಯೂರಾನ್ ನೆಟ್ ವರ್ಕ್, ಬಿಬಿಎಂಪಿ ಮತ್ತು ಸುವರ್ಣನ್ಯೂಸ್ ವಾಕಥಾನ್‌ ನಡೆಸಿತು. ನಗರವನ್ನು ಸ್ವಚ್ಚ ಸಿಟಿ ಮಾಡಲು ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗಾಗೀ ನ್ಯೂರಾನ್ ನೆಟ್ ವರ್ಕ್, ಬಿಬಿಎಂಪಿ ಮತ್ತು ಸುವರ್ಣನ್ಯೂಸ್ ಜಂಟಿ ಸಂಯೋಜಕತ್ವದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚನ್ನಕೇಶವ ನಗರದಲ್ಲಿ 3 ಕಿಲೋ ಮೀಟರ್ ಗಳ ವಾಕಾಥಾನ್ ನಡೆಸಿದರು.

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ರಣಕಹಳೆ: ಶತ್ರುಸೈನ್ಯಕ್ಕೆ ರಣವೀಳ್ಯ ಕೊಟ್ಟ ಕೇಸರಿ ಪಡೆ!

ಪೌರ ಕಾರ್ಮಿಕರೊಂದಿಗೆ ಹೆಜ್ಜೆ ಹಾಕಿದ ನ್ಯೂರಾನ್ ನೆಟ್ ವರ್ಕ್ ನವರು ಕ್ಲೀನ್ ಸಿಟಿ ನಮ್ಮ ಬೆಂಗಳೂರು ಎಂದು ಘೋಷಣೆಗಳನ್ನಾಕಿ ನಡಿಗೆ ಹಾಕಿದರು, ಪೌರಕಾರ್ಮಿಕರಿಗೆ ಉಡುಗೊರೆ ವಿತರಿಸುವ ಮೂಲಕ ಅವರ ಶ್ರಮವನ್ನು ಮಾಜಿ ಬಿಬಿಎಂಪಿ ಸದಸ್ಯ ಶ್ರೀನಿವಾಸರೆಡ್ಡಿ ಶ್ಲಾಘಿಸಿದರು, ನ್ಯೂರಾನ್ ನೆಟ್ ವರ್ಕ್ ನ ಮುಖ್ಯಸ್ಥರಾದ ವಿದ್ಯಾವೆ‌ಂಕಟೇಶ್ ಮತ್ತು ಪ್ರದೀಪ್ ಉಪಸ್ಥಿತರಿದ್ದರು, ಇನ್ನೂ ಪೌರಕಾರ್ಮಿಕರಿಗೆ ಉತ್ಸಾಹ ತುಂಬುವ ನಿಟ್ಡಿನಲ್ಲಿ ರಾ ರಾ ರಕ್ಕಮ್ಮ ಸಾಂಗ್ ಗೆ ಭರ್ಜರಿ ಸ್ಟೆಪ್ಸ್ ಹಾಕಿ ರಂಜಿಸಿದರು.

Related Video