Asianet Suvarna News Asianet Suvarna News

ಮಧ್ಯ ರಾತ್ರಿ ಪ್ರತ್ಯಕ್ಷವಾಗುತ್ತಿದ್ದ ದೆವ್ವ ಬೆಂಗ್ಳೂರು ಪೊಲೀಸರ ಬಲೆಗೆ!

 ಮಧ್ಯ ರಾತ್ರಿ ನಡು ರಸ್ತೆಯಲ್ಲಿ ದೆವ್ವ ಪ್ರತ್ಯಕ್ಷವಾದರೆ ಯಾರಿಗಾದರೂ ಭಯ ಆಗದೇ ಇರುವುದಿಲ್ಲ. ಹೀಗೆ ಯಶವಂತಪುರದ ಸುತ್ತ ಮುತ್ತ ಕೆಲ ದಿನಗಳಿಂದ ದೆವ್ವದ ಕಾಟ ಹೆಚ್ಚಾಗಿತ್ತು. ಹೀಗೆ ಕಾಟ ಕೊಡುತ್ತಿದ್ದ ದೆವ್ವಗಳನ್ನು ಬೆಂಗಳೂರು ಪೊಲೀಸರು ತಮ್ಮದೇ ಆದ ಮಂತ್ರದ ಮೂಲಕ ಬಂಧಿಸಿದ್ದಾರೆ. 

ಬೆಂಗಳೂರು(ನ.11): ಮಧ್ಯ ರಾತ್ರಿ ನಡು ರಸ್ತೆಯಲ್ಲಿ ದೆವ್ವ ಪ್ರತ್ಯಕ್ಷವಾದರೆ ಯಾರಿಗಾದರೂ ಭಯ ಆಗದೇ ಇರುವುದಿಲ್ಲ. ಹೀಗೆ ಯಶವಂತಪುರದ ಸುತ್ತ ಮುತ್ತ ಕೆಲ ದಿನಗಳಿಂದ ದೆವ್ವದ ಕಾಟ ಹೆಚ್ಚಾಗಿತ್ತು. ರಾತ್ರಿ 12 ಗಂಟೆ ನಂತರ ದೆವ್ವಗಳು ಪ್ರತ್ಯಕ್ಷವಾಗುತ್ತಿತ್ತು. ರಸ್ತೆಯಲ್ಲಿ ಓಡಾಟೋ ಜನರು, ವಾಹನಕ್ಕೆ ಅಡ್ಡವಾಗಿ ನಿಲ್ಲೋ ಮೂಲಕ ದೆವ್ವಗಳು ಜನರ ಪ್ರಾಣ ಹಿಂಡುತ್ತಿತ್ತು. 

ಇದನ್ನೂ ಓದಿ: ಚುಡಾಯಿಸಿದವನಿಗೆ ಕಾಲೇಜು ಹುಡುಗಿಯಿಂದ ಬಿತ್ತು ಗೂಸಾ..!

ಹೀಗೆ ದೆವ್ವದ ಕಾಟ ಜಾಸ್ತಿಯಾಗುತ್ತಿದ್ದಂತೆ ಸ್ಥಲೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ದೆವ್ವದ ಕಾಟದಿಂದ ಮುಕ್ತಿ ಕೊಡಲು ಮನವಿ ಮಾಡಿದ್ದಾರೆ. ದೆವ್ವವನ್ನು ಕಟ್ಟಿ ಹಾಕಲು ಹೊಸ ಮಂತ್ರ ಪಠಿಸಿದ ಪೊಲೀಸರು  ಚಾಣಾಕ್ಷವಾಗಿ 6 ದೆವ್ವಗಳನ್ನು ಬಂಧಿಸಿದ್ದಾರೆ. 

ಇದನ್ನೂ ಓದಿ:ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ!

ಪ್ರಾಂಕ್ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿರುವ ದೆವ್ವದ ವೇಷಧಾರಿಗಳು ಪೊಲೀಸರ ಕಾಲು ಹಿಡಿದರೂ ಪ್ರಯೋಜನವಾಗುತ್ತಿಲ್ಲ,

Video Top Stories