
ಚುಡಾಯಿಸಿದವನಿಗೆ ಕಾಲೇಜು ಹುಡುಗಿಯಿಂದ ಬಿತ್ತು ಗೂಸಾ..!
ಹುಡುಗರು ಚುಡಾಯಿಸಿದ್ರು ಎಂದು ದೂರು ಹೇಳೋ ಬದಲು ಕಾಲೇಜು ತಾನೇ ಹುಡುಗನ ಕೆನ್ನೆಗೆ ಬಾರಿಸಿ, ಗೂಸಾ ಕೊಟ್ಟಿರೋ ಘಟನೆ ಹಾಸನ ಬಸ್ ನಿಲ್ದಾಣದಲ್ಲಿ ನಡೆದಿದೆ. ಚುಡಾಯಿಸಿದ ಇಬ್ಬರು ಯುವಕರಿಗೂ ಕಾಲೇಜು ಹುಡುಗಿ ಹೆದರದೇ ಪ್ರತಿಕ್ರಿಯಿಸಿದ್ದಾಳೆ.
ಹಾಸನ(ನ.10): ಹುಡುಗರು ಚುಡಾಯಿಸಿದ್ರು ಎಂದು ದೂರು ಹೇಳೋ ಬದಲು ಕಾಲೇಜು ತಾನೇ ಹುಡುಗನ ಕೆನ್ನೆಗೆ ಬಾರಿಸಿ, ಗೂಸಾ ಕೊಟ್ಟಿರೋ ಘಟನೆ ಹಾಸನ ಬಸ್ ನಿಲ್ದಾಣದಲ್ಲಿ ನಡೆದಿದೆ. ಚುಡಾಯಿಸಿದ ಇಬ್ಬರು ಯುವಕರಿಗೂ ಕಾಲೇಜು ಹುಡುಗಿ ಕೈಯಿಂದ ಒದೆ ಬಿದ್ದಿದೆ. ಕಾಲೇಜು ಹುಡುಗಿಯರ ಚುಡಾಯಿಸಿದ ಇಬ್ಬರಿಗೂ ಗೂಸಾ ಬಿದ್ದಿದೆ. ತನ್ನನ್ನು ಚುಡಾಯಿಸಿದ ಕಾಲೇಜು ಹುಡುಗರಿಗೆ ಕಾಲೇಜು ಕನ್ಯೆ ಗೂಸಾ ಕೊಟ್ಟಿದ್ದಾಳೆ. ಹಾಸನ ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಘಟನೆ ನಡೆದಿದ್ದು, ಜನ ನೋಡುತ್ತಾ ನಿಂತಿದ್ದಲ್ಲದೆ ಹುಡುಗಿಯ ನೆರವಿಗೆ ಧಾವಿಸಿಲ್ಲ. ಬೇರೆ ಹುಡುಗರ ಕಿರುಚಾಟದ ನಂತರ ಹುಡುಗಿ ಸುಮ್ಮನಾಗಿದ್ದಾಳೆ. ಹೊಡೆತ ತಿಂದ ನಂತರ ಕಾಲೇಜು ಹುಡುಗ ಆಕೆಯ ಕೆನ್ನೆಗೂ ಬಾರಿಸಿದ್ದಾನೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಯೋಧ್ಯೆ ತೀರ್ಪು: 93ರ ಇಳಿ ವಯಸ್ಸಿನಲ್ಲೂ ಹಿಂದು ಪರ ವಾದಿಸಿದ್ದ ಪರಾಶರನ್