Asianet Suvarna News Asianet Suvarna News

ನೇಕಾರರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್

ಕರೋನಾ ವೈರಸ್‌ ನೇಕಾರರಿಗೆ ಬಲವಾದ ಪೆಟ್ಟು ನೀಡಿದೆ. ಬೆಳಗಾವಿಯ ಲಕ್ಷಾಂತರ ಮಂದಿಯ ಬದುಕು ಅತಂತ್ರವಾಗಿ ಪರಿಣಮಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬೆಳಗಾವಿ(ಏ.24): ಕೊರೋನಾ ವೈರಸ್ ಬಡವ-ಬಲ್ಲಿದ ಎನ್ನದೇ ಎಲ್ಲರ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ಇದಕ್ಕೆ ಬಣ್ಣ ಬಣ್ಣದ ಸೀರೆಗಳನ್ನು ನೇಯುತ್ತಿದ್ದ ನೇಕಾರರು ಹೊರತಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ನೇಕಾರರು ಹಾಗೂ ಕಾರ್ಮಿಕರ ಬದುಕು ಅತಂತ್ರವಾಗಿ ಪರಿಣಮಿಸಿದೆ.

ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿ ತೀವ್ರ ಕಷ್ಟಕ್ಕೆ ಸಿಲುಕಿದ್ದ ನೇಕಾರ ಉದ್ಯಮಕ್ಕೆ ಇದೀಗ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಘೋಷಿಸಲಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ನೇಕಾರರ ಸಮಸ್ಯೆ ಆಲಿಸಬೇಕಾಗಿದ್ದ ಜವಳಿ ಸಚಿವ ಶ್ರೀಮಂತ ಪಾಟೀಲ್ ನಾಪತ್ತೆಯಾಗಿದ್ದಾರೆ.

ಲಾಕ್‌ಡೌನ್ ಮೀರೋರಿಗೆ ಯಮಧರ್ಮನ ಖಡಕ್ ವಾರ್ನಿಂಗ್

ಬೆಳಗಾವಿ ಜಿಲ್ಲೆಯ 22 ಸಾವಿರ ವಿದ್ಯುತ್‌ ಮಗ್ಗಗಳು, 3500 ಕೈಮಗ್ಗಗಳು ಬಂದ್ ಆಗಿದ್ದು, ಗೋದಾಮಿನಲ್ಲಿಯೇ ಸಾವಿರಾರು ಸೀರೆಗಳು ರಾಶಿ ರಾಶಿಯಾಗಿ ಬಿದ್ದಿವೆ. ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ಸೀರೆ ಬ್ಯಾಂಕ್ ತೆರೆಯುವಂತೆ ಸರ್ಕಾರಕ್ಕೆ ನೇಕಾರರು ಆಗ್ರಹಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories