ಲಾಕ್‌ಡೌನ್ ಮೀರೋರಿಗೆ ಯಮಧರ್ಮನ ಖಡಕ್ ವಾರ್ನಿಂಗ್
ಬೇಕಾಬಿಟ್ಟಿ ಓಡಾಡುವ ಪುಂಡರಿಗೆ ಯಮಧರ್ಮರಾಯ ಕಿಂಕರರೊಂದಿಗೆ ಬಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಮಧರ್ಮನೇ ಬಂದನಾ ಎಂದು ಕನ್‌ಫ್ಯೂಸ್ ಆಗಬೇಡಿ. ಗದಗಿನ ಬೆಟಗೇರಿ ಪೊಲೀಸರು ಕೊರೋನಾ ಜಾಗೃತಿ ಮೂಡಿಸಲು ನಡೆಸಿದ ವಿನೂತನ ಪ್ರಯೋಗವಿದು.
ಗದಗ(ಏ.24): ಕೊರೋನಾ ವೈರಸ್ ಹರಡದಂತೆ ಈಗಾಗಲೇ ದೇಶಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದಾಗಿ ವಾಹನ ಸಂಚಾರಕ್ಕೂ ಬ್ರೇಕ್ ಬಿದ್ದಿದೆ. ಅಗತ್ಯ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವಾಹನದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.
ಇನ್ನು ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪೌರಕಾರ್ಮಿಕರಿಂದ ಹಿಡಿದು, ವೈದ್ಯರವರೆಗೆ ಕೊರೋನಾ ವಾರಿಯರ್ಸ್ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ, ಇದರ ಜೊತೆಗೆ ಕೋವಿಡ್ 19 ವೈರಸ್ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಹೀಗಿದ್ದರು ಬೇಕಾಬಿಟ್ಟಿ ಓಡಾಡುವ ಪುಂಡರಿಗೆ ಯಮಧರ್ಮರಾಯ ಕಿಂಕರರೊಂದಿಗೆ ಬಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಮಧರ್ಮನೇ ಬಂದನಾ ಎಂದು ಕನ್‌ಫ್ಯೂಸ್ ಆಗಬೇಡಿ. ಗದಗಿನ ಬೆಟಗೇರಿ ಪೊಲೀಸರು ಕೊರೋನಾ ಜಾಗೃತಿ ಮೂಡಿಸಲು ನಡೆಸಿದ ವಿನೂತನ ಪ್ರಯೋಗವಿದು.
30 ದಿನಗಳ ಲಾಕ್‌ಡೌನ್‌ನಲ್ಲಿ ಭಾರತ ಸಾಧಿಸಿದ್ದೇನು..?
ಗದಗನ ಬೆಟಗೇರಿಯಲ್ಲಿ ವಿನಾಕಾರಣ ವಾಹನ ಸಂಚಾರ ಮಾಡೋರಿಗೆ ಯಮಕಿಂಕರ ವೇಷಧಾರಿ ಸಿಬ್ಬಂದಿಗಳು ಜಾಗೃತಿ ಮೂಡಿಸಿದರು. ಇದರ ಜತೆಗೆ ಕಾನೂನು ಮೀರದಂತೆ ಸೂಚನೆಯನ್ನು ನೀಡಲಾಯಿತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.