ಬಳ್ಳಾರಿ ಹಳ್ಳಿ ಪ್ರತಿಭೆ 'ಪರೀಕ್ಷಾ ಪೇ ಚರ್ಚಾ'ಗೆ ದೆಹಲಿಗೆ ತೆರಳಿದ ರೋಚಕ ಕಥೆಯಿದು..!

ಬಳ್ಳಾರಿ (ಜ. 19):  ನಾಳೆ ಪ್ರಧಾನಿ ಮೋದಿ ಅವರ ಜೊತೆ ನಡೆಯಲಿರೋ ಪರೀಕ್ಷಾ ಪೇ ಚರ್ಚಾ ಕಾರ್ಯ ಕ್ರಮಕ್ಕೆ ಬಳ್ಳಾರಿಯ ಹಳ್ಳಿ ಪ್ರತಿಭೆಯೊಂದು ಆಯ್ಕೆಯಾಗಿದ್ದಾಳೆ.  ಒಂದು ಕಡೆ ಕಿತ್ತು ತಿನ್ನುವ ಬಡತನ, ಇನ್ನೊಂದು ಕಡೆ ಓದಬೇಕೆನ್ನುವ ಅದಮ್ಯ ಆಸೆ. ಪರಿಣಾಮ ಇದೀಗ ಹಳ್ಳಿ ಹುಡುಗಿ ಡೆಲ್ಲಿಗೆ ತೆರಳುವ ಅವಕಾಶ ಒದಗಿ ಬಂದಿದೆ. 

First Published Jan 19, 2020, 2:41 PM IST | Last Updated Jan 19, 2020, 2:41 PM IST

ಬಳ್ಳಾರಿ (ಜ. 19): ನಾಳೆ ಪ್ರಧಾನಿ ಮೋದಿ ಅವರ ಜೊತೆ ನಡೆಯಲಿರೋ ಪರೀಕ್ಷಾ ಪೇ ಚರ್ಚಾ ಕಾರ್ಯ ಕ್ರಮಕ್ಕೆ ಬಳ್ಳಾರಿಯ ಹಳ್ಳಿ ಪ್ರತಿಭೆಯೊಂದು ಆಯ್ಕೆಯಾಗಿದ್ದಾಳೆ.  ಒಂದು ಕಡೆ ಕಿತ್ತು ತಿನ್ನುವ ಬಡತನ, ಇನ್ನೊಂದು ಕಡೆ ಓದಬೇಕೆನ್ನುವ ಅದಮ್ಯ ಆಸೆ. ಪರಿಣಾಮ ಇದೀಗ ಹಳ್ಳಿ ಹುಡುಗಿ ಡೆಲ್ಲಿಗೆ ತೆರಳುವ ಅವಕಾಶ ಒದಗಿ ಬಂದಿದೆ. 

ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾಗೆ ರಾಯಚೂರು ವಿದ್ಯಾರ್ಥಿನಿಯರು ಆಯ್ಕೆ

ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ನೇತ್ರಾವತಿ ಪರೀಕ್ಷಾ ಪೇ ಚರ್ಚೆಗೆ ಆಯ್ಕೆಯಾಗಿರೋ ವಿದ್ಯಾರ್ಥಿನಿ. ಪರೀಕ್ಷಾ ಪೇ ಚರ್ಚೆ ಗೆ ದೇಶದ ಮೂರು ಲಕ್ಷ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು ಅದರಲ್ಲಿ ಹಳ್ಳಿ ಪ್ರತಿಭೆ ಆಯ್ಕೆಯಾಗಿದ್ದು, ಸಂತಸದ ವಿಷಯವಾಗಿದೆ. ಆಯ್ಕೆಯಾಗಿರುವ ಖುಷಿಯನ್ನು  ವಿದ್ಯಾರ್ಥಿನಿ ನೇತ್ರಾವತಿ, ತಂದೆ  ಪಂಪಯ್ಯ ಸ್ವಾಮಿ ಹಾಗೂ ಶಿಕ್ಷಕ  ಕೃಷ್ಣ ಮೂರ್ತಿ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದು ಹೀಗೆ!