ಪ್ರಸಿದ್ಧ ಜಾನಪದ ನಟ ಈಶ್ವರ್ ಸಾಯಿ, ಸಹ-ನಟಿ ಮಾಧುರಿ ರಾಥೋಡ್ ಜೊತೆ ಹೋಟೆಲ್‌ನಲ್ಲಿದ್ದಾಗ ಪತ್ನಿಯ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪತ್ನಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದು, ತನ್ನ ಗಂಡನನ್ನು ಮಾಧುರಿಯೇ ದಾರಿ ತಪ್ಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಆ.21): ತೆಲುಗು ಜಾನಪದ ಗೀತೆಗಳ (Folk Songs) ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದ ಪ್ರಸಿದ್ಧ ನಟ ಹಾಗೂ ಡ್ಯಾನ್ಸರ್ ಈಶ್ವರ್ ಸಾಯಿ (Eshwar Sai) ಅವರ ಅನೈತಿಕ ಸಂಬಂಧವೊಂದು ರಟ್ಟಾಗಿದೆ. ಸಹ-ಡ್ಯಾನ್ಸರ್ ಹಾಗೂ ನಟಿ ಮಾಧುರಿ ರಾಥೋಡ್ (Madhuri Rathod) ಜೊತೆ ತೆಲಂಗಾಣದ ವೇಮುಲವಾಡದ ರೆಡ್ಡಿ ಭವನದಲ್ಲಿದ್ದಾಗ, ಈಶ್ವರ್ ಸಾಯಿ ಹೆಂಡತಿ ಇಬ್ಬರನ್ನೂ ರೆಡ್‌ಹ್ಯಾಂಡ್‌ ಆಗಿ ಹಿಡಿದು ರಂಪಾಟ ನಡೆಸಿದ್ದಾರೆ. ಈ ವೇಳೆ ಈಶ್ವರ್‌ ಸಾಯಿ ಚಡ್ಡಿಯಲ್ಲೇ ನಿಂತಿರುವ ವಿಡಿಯೋ ವೈರಲ್‌ ಆಗಿದೆ.

ಅರ್ಧರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಇಬ್ಬರನ್ನೂ ಕಣ್ಣಾರೆ ಕಂಡ ಈಶ್ವರ್ ಸಾಯಿ ಪತ್ನಿ, ತೀವ್ರ ಆಕ್ರೋಶಗೊಂಡು ಮಾಧುರಿ ರಾಥೋಡ್‌ರನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ ಆಕೆಯ ಕೆನ್ನೆಗೂ ಬಾರಿಸಿದ್ದಾರೆ.

ಹೋಟೆಲ್ ರೂಮ್‌ ಮೇಲೆಯೇ ದಾಳಿ ನಡೆಸಿದ ಪತ್ನಿ

ಪ್ರಸಿದ್ಧ ಜಾನಪದ ಗೀತೆ 'ಬಾಸಿಂಗ ಬಲಾಲು' ಹಾಡಿನ ಮೂಲಕ ತೆಲುಗು ರಾಜ್ಯಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಈಶ್ವರ್ ಸಾಯಿಗೆ ಈಗಾಗಲೇ ಮದುವೆಯಾಗಿದ್ದು, ಒಬ್ಬ ಗಂಡು ಮಗನಿದ್ದಾನೆ. ಆದರೆ, ತನ್ನ ಜೊತೆ ಹಲವು ಜಾನಪದ ಹಾಡುಗಳಲ್ಲಿ ನಟಿಸಿದ್ದ ಮಾಧುರಿ ರಾಥೋಡ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಈ ಹಿಂದೆಯೂ ಆರೋಪಿಸಿದ್ದರು. ಈಗ ರೆಡ್‌ಹ್ಯಾಂಡ್‌ ಆಗಿ ಅವರಿಬ್ಬರನ್ನು ಲಾಡ್ಜ್‌ನಲ್ಲಿಯೇ ಹಿಡಿದು ವಿಡಿಯೋ ಮಾಡಿದ್ದಾರೆ.

ವೇಮುಲವಾಡದ ರೆಡ್ಡಿ ಭವನದಲ್ಲಿ ಇಬ್ಬರೂ ತಂಗಿದ್ದಾರೆ ಎಂಬ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪತ್ನಿ, ನೇರವಾಗಿ ಕೊಠಡಿಗೆ ತೆರಳಿ ಇಬ್ಬರನ್ನೂ ಹಿಡಿದು ಪ್ರಶ್ನಿಸಿದ್ದಾರೆ. "ನನ್ನ ಗಂಡನೇ ನಿನಗೆ ಸಿಕ್ಕಿದ್ದಾ?" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪತ್ನಿ, ಮಾಧುರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಕಣ್ಣೀರು ಹಾಕುತ್ತಾ ಮಾಧ್ಯಮದ ಎದುರು ಸತ್ಯ ಬಿಚ್ಚಿಟ್ಟ ಪತ್ನಿ

ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ್ ಸಾಯಿ ಪತ್ನಿ, "ನನ್ನ ಗಂಡ ತುಂಬಾ ಒಳ್ಳೆಯವನು, ಕನಿಷ್ಠ ಮದ್ಯಪಾನ ಮಾಡುವ ಅಭ್ಯಾಸವೂ ಇಲ್ಲದ ವ್ಯಕ್ತಿ. ಮಾಧುರಿಯೇ ಬೇಕೆಂತಲೇ ನನ್ನ ಗಂಡನ ಮೇಲೆ ಬಿದ್ದು ಆತನನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ" ಎಂದು ಕಣ್ಣೀರಿಟ್ಟಿದ್ದಾರೆ.

"ನಮಗೆ ಮದುವೆಯಾಗಿ 7 ವರ್ಷಗಳಾಗಿವೆ. ನಮ್ಮ ಸಂಸಾರಕ್ಕೆ ಕಾಲಿಟ್ಟ ಮಾಧುರಿ, ಇಡೀ ಕುಟುಂಬವನ್ನೇ ಹಾಳು ಮಾಡಿದ್ದಾಳೆ. ಹಿಂದೆ ಮಾಧುರಿಗೆ ಲವ್ ಬ್ರೇಕಪ್ ಆದಾಗ ನಾನೇ ಹತ್ತಿರವಿದ್ದು ಅವಳಿಗೆ ಸಮಾಧಾನ ಹೇಳಿ ಆಶ್ರಯ ನೀಡಿದ್ದೆ. ಆದರೆ ನನ್ನ ಪಕ್ಕದಲ್ಲೇ ಇದ್ದು ಈ ರೀತಿ ಬೆನ್ನಿಗೆ ಚೂರಿ ಹಾಕುತ್ತಾಳೆ ಎಂದು ಭಾವಿಸಿರಲಿಲ್ಲ. ಇಂಥವರಿಂದ ಇಡೀ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತದೆ. ಇಂತಹ ಹೆಣ್ಣುಮಕ್ಕಳನ್ನು ಜಾನಪದ ರಂಗಕ್ಕೆ ಸೇರಿಸಲೇಬಾರದು" ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಸ್ತುತ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಮತ್ತು ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಹಿಟ್ ಫೋಕ್ ಸಾಂಗ್ಸ್‌ಗಳ ಮೂಲಕ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದ ಈಶ್ವರ್ ಸಾಯಿ ಇಂತಹ ವಿವಾದದಲ್ಲಿ ಸಿಲುಕಿರುವುದು ಭಾರೀ ಮುಜುಗರ ತರಿಸಿದೆ.

View post on Instagram