BBK 13: ವೀಕೆಂಡ್ ಪಂಚಾಯ್ತಿಯಲ್ಲಿ ಬಯಲಾಗುತ್ತಾ ಗಗನ್ ಡಬಲ್ ಗೇಮ್; ಸುದೀಪ್ ಕ್ಲಾಸ್?
ಬಿಗ್‌ಬಾಸ್ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿಯಲ್ಲಿ, ಗಗನ್ ಚಿನ್ನಪ್ಪ ಅವರ ಪಕ್ಷಪಾತದ ನಿರ್ಧಾರಗಳು ಮತ್ತು ನಿಯಮ ಉಲ್ಲಂಘನೆಗಳು ಚರ್ಚೆಗೆ ಬರಲಿವೆ. ತಾಂಡವ್ ರಾಮ್ ಜೊತೆ ಸೇರಿ ನಾಮಿನೇಷನ್ ಬಗ್ಗೆ ಚರ್ಚೆ ನಡೆಸಿ, ಡಬಲ್ ಗೇಮ್ ಆಡಿರುವ ಗಗನ್ ಆಟ ಬಯಲಾಗುವ ಸಾಧ್ಯತೆ ಇದೆ.

ಮೊದಲ ವೀಕೆಂಡ್ ಪಂಚಾಯ್ತಿ
ಇಂದು ಬಿಗ್‌ಬಾಸ್ ಸೀಸನ್ 13 ಮೊದಲ ವೀಕೆಂಡ್ ಪಂಚಾಯ್ತಿ ನಡೆಯಲಿದ್ದು, ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಮೊದಲ ವಾರದಲ್ಲಿ ಮೂಲಗಳ ನಿಯಮ ಉಲ್ಲಂಘನೆ, ಉಸ್ತುವಾರಿಯ ಪಕ್ಷಪಾತದ ನಿರ್ಧಾರಗಳು ಮತ್ತು ಕಾಮನ್ ವರ್ಸಸ್ ಸೆಲಿಬ್ರಿಟಿ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಗಗನ್‌ಗೆ ಕ್ಲಾಸ್?
ಸ್ವಿಮ್ಮಿಂಗ್ ಪೂಲ್ ಟಾಸ್ಕ್ ವೇಳೆ ಗಗನ್ ತೆಗೆದುಕೊಂಡು ಪಕ್ಷಪಾತ ನಿರ್ಧಾರವನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಮಂಜುನಾಥ್ ಮತ್ತು ಸೌಂದರ್ಯಾ ಶೆಟ್ಟಿ ನಡುವೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ. ಈ ನಿರ್ಧಾರದ ಬಗ್ಗೆ ವಿಮಾನದ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದರು.
ಗಂಡಸರ ಕಿತಾಪತಿ
ಮನೆಯಲ್ಲಿರುವ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ನಡುವೆ ಹಲವು ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರನ್ನು ನಾಮಿನೇಟ್ ಮಾಡಬೇಕು ಎಂಬುದರ ಕುರಿತು ಯಾರ ಜೊತೆಯಲ್ಲಿ ಚರ್ಚೆ ಮಾಡಬಾರದು ಅನ್ನೋದು ಬಿಗ್‌ಬಾಸ್ ಮನೆಯ ಮೂಲ ನಿಯಮವಾಗಿದೆ. ಈ ನಿಯಮವನ್ನು ತಾಂಡವ್ ರಾಮ್ ಮತ್ತು ಗಗನ್ ಬ್ರೇಕ್ ಮಾಡಿದ್ದಾರೆ.
ಗಗನ್ ಡಬಲ್ ಗೇಮ್
ತಾಂಡವ್ ಮತ್ತು ಗಗನ್ ಜೊತೆಯಾಗಿ ಎಲ್ಲವೂ ಪ್ಲಾನ್ ಮತ್ತು ಎಲ್ಲರ ಬಗ್ಗೆ ಗಾಸಿಪ್ ಮಾಡುತ್ತಿರೋದನ್ನು ಗಮನಿಸಿದ ವೀಕ್ಷಕರು, ಇದು ಗಂಡಸರ ಕಿತಾಪತಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಆಸಿಯಾ ಅವರಿಗೆ ತಂಡದ ನಿರ್ಧಾರಕ್ಕೆ ಒಪ್ಪಿಗೆ ನೀಡಬೇಡಿ. ನಾನು ನಿಮ್ಮನ್ನು ಸೇವ್ ಮಾಡಿಕೊಳ್ಳುತ್ತೇನೆ ಎಂದು ಗಗನ್ ಹೇಳಿದ್ದರು.
ಆಗ ಆಸಿಯಾ, ಈಗ ಸೌಂದರ್ಯಾ
ಆದ್ರೆ ಒಬ್ಬರನ್ನು ಸೇವ್ ಮಾಡಿಕೊಳ್ಳುವ ಅವಕಾಶ ಬಂದಾಗ ಸೌಂದರ್ಯಾ ಶೆಟ್ಟಿ ಪರವಾಗಿ ಗಗನ್ ಬ್ಯಾಟ್ ಬೀಸಿದರು. ಹಾಗೆಯೇ ಮಹಿಳಾ ಸ್ಪರ್ಧಿ ಬಂದ್ರೆ ಮನೆಗೆಲಸ ಮಾಡಲು ನೆರವು ಸಿಗುತ್ತದೆ ಎಂಬುವುದು ಗಗನ್ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯಕ್ಕೆ ಕಾವ್ಯಾ ಗೌಡ ವಿರೋಧ ವ್ಯಕ್ತಪಡಿಸಿದರು. ಮಂಜುನಾಥ್ ಉಳಿದುಕೊಂಡ್ರೆ ಆತನಿಂದ ನಾನು ಮೈಲೇಜ್ ಪಡೆಯಬಹುದು. ಆತನಿದ್ರೆ ನಮಗೆ ಹೆಚ್ಚು ಲಾಭ ಎಂದು ಗಗನ್ ಮಾತನಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

