ಬಿಗ್ ಬಾಸ್ 13ರ ಮೊದಲ ಪಂಚಾಯಿತಿ ನಡೆದಿದೆ. ಕಿಚ್ಚನ ಮೊದಲ ಪಂಚಾಯಿತಿಯಲ್ಲೇ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ಕೆಲ ಎಚ್ಚರಿಕೆಯನ್ನು ನೀಡಿದ್ದಾರೆ. ಹೇಗಿತ್ತು ಪಂಚಾಯಿತಿ?
ಬೆಂಗಳೂರು (ಸೆ.12) ಬಿಗ್ ಬಾಸ್ ಕನ್ನಡದ 13ನೇ ಆವೃತ್ತಿ ಹಲವು ಹೊಸ ಪ್ರಯೋಗ ಮೂಲಕ ಆರಂಭಗೊಂಡಿದೆ. ಪರಿಣಾಮ ಆರಂಭದಲ್ಲೇ ಸ್ಪರ್ಧಾ ಕಣ ರಂಗೇರಿದೆ. ಕಿಚ್ಚನ ಮೊದಲ ಪಂಚಾಯಿತಿ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ವೀಕ್ಷಕರ ನಿರೀಕ್ಷೆಯಂತೆಯೇ ಕಿಚ್ಚ ಸುದೀಪ್ ಬಿಸಿ ಮುಟ್ಟಿಸಬೇಕಾದ ಕಡೆ ಬಿಸಿ ಮುಟ್ಟಿಸುವ ಮೂಲಕ ಸ್ಪರ್ಧಿಗಳನ್ನು ಎಚ್ಚರಿಸಿದ್ದಾರೆ.
ಫ್ರೆಂಡ್‌ಶಿಪ್ ಬಾಂಡಿಂಗ್‌ನಲ್ಲಿ ಎಲ್ಲವೂ ಒಕೆ ಅಲ್ಲ
ಗಗನ್-ತಾಂಡವ್ ಫ್ರೆಂಡ್‌ಶ್ಯಿಪ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ತಾಂಡವ್ ಗಗನ್‌ನ ಫ್ರೆಂಡ್‌ಶ್ಯಿಪ್‌ನ ಬಳಸಿ ಕೋ ವಿಐಪಿ ಆಗಿದ್ದರ ಬಗ್ಗೆ ಅದರ ಪರಿಣಾಮದ ಬಗ್ಗೆ ಸೂಕ್ಷ್ಮ ಮಾತುಗಳಲ್ಲಿ ಹೇಳಿದಾಗ ಅದನ್ನು ಅರಿತುಕೊಂಡ ಗಗನ್ ತುಂಬಾ ಸೀರಿಯಸ್ ಆಗಿದ್ದಾರೆ. ಈ ಪಂಚಾಯಿತಿಯ ಬಳಿಕ ಅವರ ಫ್ರೆಂಡ್‌ಶ್ಯಿಪ್ ಬಾಂಡ್ ಹೀಗೆಯೇ ಇರಲಿದೆಯೇ? ಎಂಬ ಪ್ರಶ್ನೆಗೆ ಪಂಚಾಯಿತಿಯ ಕೊನೆಯಲ್ಲಿ ಅವರಿಬ್ಬರು ಕೂತ ಭಂಗಿಯೇ ಉತ್ತರ ನೀಡುವಂತಿತ್ತು.
ವುಮನ್ ಕಾರ್ಡ್ ಸೀಸನ್ 13ನಲ್ಲಿ ಬೇಡ ಎಂದ ಎಚ್ಚರಿಸಿದ ಕಿಚ್ಚ
ನೀವು ತಮಾಷೆಗೆ ಹೇಳಿರಬಹುದು ಆದ್ರೆ ಇಲ್ಲಿ ವುಮನ್ ಕಾರ್ಡ್ ನಡೆಯಲ್ಲ ಎಂಬುವುದನ್ನು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೇಳಿದ್ದಾರೆ. ಅಲ್ಲದೆ ಹುಡುಗಿಯರನ್ನು ಡಿಸ್‌ಕ್ರಿಮಿನೇಶನ್ ಮಾಡುತ್ತಿದ್ದಾರೆ ಎಂಬ ಭಾವನೆ ಕೆಲ ಮಹಿಳಾ ಸ್ಪರ್ಧಿಗಳಲ್ಲಿ ಇದೆ. ಅದನ್ನು ಅವರು ಹಲವು ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ವೈಷ್ಣವಿಯನ್ನು ಗೇಮ್‌ನಿಂದ ಹೊರಗಿಟ್ಟ ನೀವು ಮಹಿಳಾ ಡಿಸ್‌ಕ್ರಿಮಿನೇಶನ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಕ್ಲಾಸ್ ತೆಗೆದುಕೊಂಡರು.
ಕಾಮನ್ ಸಿಂಪತಿ ಕಾರ್ಡ್‌ಗೂ ಕತ್ತರಿ ಹಾಕಿದ ಕಿಚ್ಚ
ಅಗ್ನಿ ಪರೀಕ್ಷೆಯ ಮೂಲಕ ಬಿಗ್‌ಬಾಸ್ ಮನೆಗೆ ಬಂದವರು ತಾವು ಕಾಮನ್‌ರು ಎಂಬ ಸಿಂಪತಿ ಕಾರ್ಡ್ ಬಳಸುವುದಕ್ಕೆ ಕತ್ತರಿ ಹಾಕಿದ್ದಾರೆ . ಕನ್ನಡ ಜನತೆಯ ಪ್ರೀತಿ ಗಳಿಸಿ ಈ ಸ್ಟೇಜ್‌ಗೆ ಬಂದಿದ್ದೀರಿ. ಹೀಗಾಗಿ ಇಲ್ಲಿ ನಾವು ಸಾಮಾನ್ಯರು ಎಂಬ ಸಿಂಪತಿ ಕಾರ್ಡ್ ಬಳಸಬೇಡಿ ಎಂಬುವುದನ್ನ ಖಾರವಾಗಿ ಹೇಳಿದರು.
ಈ ಸೀಸನ್‌ನ ವಿನ್ನರ್‌ಗೆ ಹಾಗೂ ರನ್ನರ್‌ಗೆ ಸಿಗಲಿರುವ ಹಣವೆಷ್ಟು?
ಕಿಚ್ಚ ಸುದೀಪ್‌ರವರು ಈ ಬಾರಿಯ ಸೀಸನ್ ವಿನ್ನರ್‌ಗೆ 50 ಕ್ಯಾಶ್ ಪ್ರೈಸ್ ಹಾಗೂ ರನ್ನರ್‌ಗೆ 25 ಲಕ್ಷ ಕ್ಯಾಶ್ ಪ್ರೈಸ್ ಸಿಗುವುದಾಗಿ ವಾರದ ಪಂಚಾಯಿತಿ ವೇದಿಕೆಯಲ್ಲಿ ತಿಳಿಸಿದರು.


