ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?

ಇನ್ಸ್ಟಾಗ್ರಾಮ್‌ನಲ್ಲಿ ಶುರುವಾದ ಪ್ರೀತಿ, ಮದುವೆಯಾದ ಒಂದು ತಿಂಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿಯ ಸಾವಿನಲ್ಲಿ ಅಂತ್ಯಗೊಂಡಿದೆ. ಕುಟುಂಬದ ವಿರೋಧದ ನಡುವೆ ವಿಷ ಸೇವಿಸಿ ಮದುವೆಯಾಗಿದ್ದ ಸುದೀಪ್, 13 ದಿನಗಳ ನಂತರ ಸಾವನ್ನಪ್ಪಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

Share this Video
  • FB
  • Linkdin
  • Whatsapp

ಪ್ರೀತಿ ಕುರುಡು ಅಂತಾರೆ, ಆದರೆ ಆ ಪ್ರೀತಿಯೇ ಪ್ರಾಣಕ್ಕೆ ಮುಳುವಾದಾಗ ಅದು ದೊಡ್ಡ ದುರಂತವಾಗಿ ಮಾರ್ಪಡುತ್ತದೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಶುರುವಾದ ಪರಿಚಯ, ಪ್ರೇಮವಾಗಿ ಬದಲಾಗಿ, ಕೊನೆಗೆ ಮದುವೆಯ ಸಂಭ್ರಮ ಕಾಣುವ ಮೊದಲೇ ಸಾವಿನ ಮನೆಯ ಕದ ತಟ್ಟಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಮತ್ತು ತುಳು ನಾಟಕದ ನಟಿಯೊಬ್ಬರ ಈ ಪ್ರೇಮ ಕಥೆ ಈಗ ಭೀಕರ ತಿರುವು ಪಡೆದಿದ್ದು, ಮದುವೆಯಾದ ಕೇವಲ ಒಂದು ತಿಂಗಳಲ್ಲಿ ಗಂಡ ಹೆಣವಾಗಿದ್ದಾನೆ. ಈ ಪ್ರಕರಣದ ಸುತ್ತ ಈಗ ಹತ್ತಾರು ಅನುಮಾನಗಳು ಹುತ್ತಗಟ್ಟಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ಸ್ಟಾಗ್ರಾಮ್ ಸ್ನೇಹ ಮದುವೆಯವರೆಗೆ ಬಂದಿದ್ದು ಹೇಗೆ?

ಮೃತ ಸುದೀಪ್ ಶೆಟ್ಟಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇತ್ತ ಆಕೆ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ನಟಿಸುವ ನಟಿ ಸೌಮ್ಯಾ ಶೆಟ್ಟಿ. ಇವರಿಬ್ಬರಿಗೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಈ ಸ್ನೇಹ ಕ್ರಮೇಣ ಪ್ರೀತಿಯಾಗಿ ಅರಳಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಮನೆಯವರಲ್ಲಿ ವಿಷಯ ತಿಳಿಸಿದ್ದರು. ಆದರೆ, ಸುದೀಪ್ ಮನೆಯವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮದುವೆಗೆ ಮುನ್ನವೇ ವಿಷ ಸೇವಿಸಿದ್ದ ಸುದೀಪ್?

ಸುದೀಪ್ ಮನೆಯವರು ಮದುವೆಗೆ ಒಪ್ಪದಿದ್ದಾಗ, ಹತಾಶೆಗೊಂಡ ಸುದೀಪ್ ಜೂನ್ 16ರಂದೇ ವಿಷ ಸೇವಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಆದರೆ, ವಿಷ ಸೇವಿಸಿದ ವಿಚಾರವನ್ನು ಯಾರಿಗೂ ತಿಳಿಸದೆ, ಅದೇ ಸ್ಥಿತಿಯಲ್ಲೇ ಹುಡುಗಿಯನ್ನು ಭೇಟಿಯಾಗಿ ಮದುವೆಗೆ ಒಪ್ಪಿಸಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾದ ನಂತರ ಒಂದು ವಾರ ಸುದೀಪ್ ಚೆನ್ನಾಗಿಯೇ ಇದ್ದರು. ಆದರೆ, ಹಠಾತ್ ಆರೋಗ್ಯ ಕ್ಷೀಣಿಸಿದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರಿಗೂ ಮೊದಲು ಇದು ವಿಷದ ಪರಿಣಾಮ ಎಂದು ತಿಳಿದಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಸುದೀಪ್ ತಾನು ವಿಷ ಸೇವಿಸಿದ್ದಾಗಿ ಬಾಯಿಬಿಟ್ಟಿದ್ದರು ಎನ್ನಲಾಗಿದೆ.

ನಟಿಯ ಹಿನ್ನೆಲೆ ಬಗ್ಗೆ ಪೋಷಕರ ಗಂಭೀರ ಆರೋಪ:

ಈ ಸಾವಿನ ಹಿಂದೆ ಸುದೀಪ್ ಹೆತ್ತವರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. 'ನನ್ನ ಮಗ ಮದುವೆಯಾದ ಹುಡುಗಿ ಈಗಾಗಲೇ ಎರಡು ಮೂರು ಮದುವೆಗಳಾಗಿ ಜನರಿಗೆ ಮೋಸ ಮಾಡಿದ್ದಾಳೆ. ಅವಳ ಹಿನ್ನೆಲೆ ಸರಿ ಇಲ್ಲ ಎಂಬ ಕಾರಣಕ್ಕೆ ನಾವು ಮದುವೆ ಬೇಡ ಎಂದಿದ್ದೆವು. ಅವಳೇ ನನ್ನ ಮಗನನ್ನು ಟ್ರ್ಯಾಪ್ ಮಾಡಿ, ಆತನ ಸಾವಿಗೆ ಕಾರಣವಾಗಿದ್ದಾಳೆ' ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಆದರೆ ಪತ್ನಿ ಹೇಳುವುದೇ ಬೇರೆ. 'ಮನೆಯವರು ಒಪ್ಪಲಿಲ್ಲ ಎಂಬ ನೋವಿನಲ್ಲೇ ಆತ ವಿಷ ಸೇವಿಸಿದ್ದಾನೆ, ಇದರಲ್ಲಿ ನನ್ನದೇನು ತಪ್ಪಿಲ್ಲ' ಎಂದು ಆಕೆ ವಾದಿಸುತ್ತಿದ್ದಾಳೆ.

13 ದಿನಗಳ ನಂತರ ಸಾವು ಸಂಭವಿಸಿದ್ದು ಹೇಗೆ?

ಸಾಮಾನ್ಯವಾಗಿ ವಿಷ ಸೇವಿಸಿದ ತಕ್ಷಣ ಮನುಷ್ಯ ಸಾವನ್ನಪ್ಪುತ್ತಾನೆ ಅಥವಾ ತಕ್ಷಣವೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಸುದೀಪ್ 16ನೇ ತಾರೀಕು ವಿಷ ಕುಡಿದು, ಮದುವೆಯಾಗಿ, 13 ದಿನಗಳ ನಂತರ ಅಂದರೆ ಮದುವೆಯಾದ ವಾರಕ್ಕೆ ಸಾವನ್ನಪ್ಪಿದ್ದು ಹೇಗೆ ಎಂಬುದು ವೈದ್ಯಕೀಯ ಲೋಕಕ್ಕೂ ಸವಾಲಾಗಿದೆ. ಆತ ಸೇವಿಸಿದ ವಿಷ ಯಾವುದು? ಅದು ನಿಧಾನವಾಗಿ ದೇಹವನ್ನು ಆವರಿಸಿತೇ? ಅಥವಾ ಮದುವೆಯಾದ ನಂತರ ಬೇರೇನಾದರೂ ನಡೆದಿದೆಯೇ ಎಂಬುದು ಈಗ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

ಒಬ್ಬ ಯುವ ಉದ್ಯಮಿ, ಜೀವನದಲ್ಲಿ ಸಾಧನೆ ಮಾಡಬೇಕಾದ ವಯಸ್ಸಿನಲ್ಲಿ ಪ್ರೀತಿ ಮತ್ತು ಕೌಟುಂಬಿಕ ಕಲಹದ ನಡುವೆ ಸಿಲುಕಿ ಮಸಣ ಸೇರಿದ್ದಾನೆ. ಸುದೀಪ್ ಸಾವು ಕೇವಲ ಆತ್ಮಹತ್ಯೆಯೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಸಂಚಿದೆಯೇ ಎಂಬುದು ಈಗ 'ಎಫ್.ಐ.ಆರ್' (FIR) ದಾಖಲಿಸಿರುವ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

Related Video