ಲಡಾಖ್ ಅಮೃತಯಾತ್ರೆ-2022: ಲೇಖನ‌ ಸರಣಿಯ ಎಲ್ಲ ಕಂತುಗಳು ಒಂದೇ ಕಡೆ

ಲಡಾಖ್ ಪ್ರಾಂತ್ಯಕ್ಕೆ ಭೇಟಿ ನೀಡುವುದು ಪ್ರವಾಸಾಸಕ್ತರಿಗೆ ಜೀವಮಾನದ ಕನಸುಗಳಲ್ಲೊಂದು. ಆಸ್ತಿಕರಿಗೆ ಕಾಶಿ ಭೇಟಿ ಹೇಗೋ, ಹಾಗೆ. ಲಡಾಖಿನ ನಿಸರ್ಗ ಸೌಂದರ್ಯ, ಸಾಹಸಾವಕಾಶಗಳಿಗೆ ಮನಸೋತು ಕೆಲವು ಉತ್ಸಾಹಿಗರು ಮತ್ತೆ ಮತ್ತೆ ಭೇಟಿ ನೀಡುವುದೂ ಉಂಟು. ಹಾಗೊಂದು ಲಡಾಖ್ ರೋಡ್ ಟ್ರಿಪ್‌ನ ಪ್ರವಾಸಕಥನ ಇಲ್ಲಿದೆ.

Ladakh Amrith Yathra 2022: Ladakh Trip All Articles Together Vin

-ರವಿಶಂಕರ್ ಭಟ್‌

ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸಾಸಕ್ತ ಎಲ್ಲರಿಗೂ ಶುಭಾಶಯಗಳು. ಕೋಶ ಓದು ಎಂಬುದಕ್ಕಿಂತ ದೇಶ (ವಿದೇಶವೂ ಸೇರಿ) ಸುತ್ತು ಎಂಬುದನ್ನು ಹೆಚ್ಚು ನೆಚ್ಚಿಕೊಂಡಿರುವ ನನಗೆ ಪ್ರವಾಸ ಎಂದರೆ ಅತ್ಯಂತ ಅಚ್ಚುಮೆಚ್ಚು. ಪ್ರಸಿದ್ಧ ತಾಣಗಳಿಗಿಂತ ಅಷ್ಟಾಗಿ ಪರಿಚಿತವಲ್ಲದ, ಜನದಟ್ಟಣೆ ಕಡಿಮೆ ಇರುವ ಸ್ಥಳಗಳನ್ನರಸಿ ಹೋಗುವುದು ಬಹಳ ಇಷ್ಟ.

ಇಂತಹದೊಂದು ಕನಸು ಇತ್ತೀಚೆಗೆ ನನಸಾಗಿದೆ. ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾನೂ ಸೇರಿದಂತೆ ಆರು ಮಂದಿಯ ತಂಡ ಭಾರತದ ಅತಿ ದೊಡ್ಡ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಪ್ರಾಂತ್ಯಕ್ಕೊಂದು ಪ್ರದಕ್ಷಿಣೆ ಹಾಕಿ ಬಂದಿದ್ದೇವೆ. ಎರಡು ರಾಯಲ್ ಎನ್‌ಫೀಲ್ಡ್ ಬೈಕ್, ಒಂದು ಮಹೀಂದ್ರಾ ಥಾರ್ ವಾಹನದಲ್ಲಿ ಸುಮಾರು 2500 ಕಿ.ಮೀ. ಸುತ್ತಾಡಿದ್ದೇವೆ. ಕೋವಿಡ್ ಪಿಡುಗು ಬಿಗಿದ ಸಂಕೋಲೆಯನ್ನು ಕಳಚಿ ಪ್ರವಾಸಿಗರು ದಟ್ಟೈಸುತ್ತಿರುವ ಲಡಾಖ್ ಪ್ರಾಂತ್ಯದಲ್ಲಿ ಜನದಟ್ಟಣೆ ವಿರಳವಾದ ಸ್ಥಳಗಳನ್ನೇ ಆಯ್ದು ತಿರುಗಾಡಿದ್ದೇವೆ‌.

ಇದರ ಬಗ್ಗೆ 14 ಕಂತುಗಳ ಸುದೀರ್ಘ ಸರಣಿಯನ್ನು ಇತ್ತೀಚೆಗೆ ಬಿಡಿ ಬಿಡಿಯಾಗಿ ಬರೆದಿದ್ದೆ ಕೂಡ. ಕೆಲವು ಕಂತುಗಳನ್ನು ಪ್ರವಾಸ ಮಾಡುತ್ತಲೇ ಬರೆದಿದ್ದರೆ, ಇನ್ನು ಕೆಲವನ್ನು ಮರಳಿ ಬಂದ ಬಳಿಕ ಬರೆದಿದ್ದೆ. "ಆದರೆ, ಆ ಸರಣಿ ನಿರಂತರವಾಗಿ ಪ್ರಕಟವಾಗದ ಕಾರಣ ಕಂತುಗಳ ಕೊಂಡಿ ತಪ್ಪಿ ಹೋದವು. ಎಲ್ಲವೂ ಒಟ್ಟಾಗಿ ಸಿಗುವ ವ್ಯವಸ್ಥೆ ಮಾಡಿ" ಎಂದು ಅನೇಕರು ಸಂದೇಶ ಕಳುಹಿಸಿದ್ದಾರೆ. ಪ್ರವಾಸದ ಬಗ್ಗೆ ಯಾರು, ಯಾವುದೇ ಮಾಹಿತಿ ಕೇಳಿದರೂ, ನನಗೆ ತಿಳಿದಷ್ಟು ವಿವರ ಹಂಚಿಕೊಳ್ಳುವುದೂ ನನಗಿಷ್ಟದ ಕೆಲಸ. ಈ ಪ್ರವಾಸ ಪ್ರೀತಿಯ ಭಾಗವಾಗಿಯೇ, ಲಡಾಖ್ ಸರಣಿಯ ಎಲ್ಲಾ 14 ಕಂತುಗಳ ಕೊಂಡಿಗಳನ್ನು ಇಲ್ಲಿ ಪಟ್ಟಿಯ ರೂಪದಲ್ಲಿ ಹಾಕುತ್ತಿದ್ದೇನೆ.

ನೀವು ಮಾಡಬೇಕಾದುದು ಇಷ್ಟೆ...

- ಮೊದಲಿಗೆ ನಿಮಗೆ ಬೇಕಾದ ಕಂತಿನ ಕೊಂಡಿ (link) ಕ್ಲಿಕ್ ಮಾಡಿ
- ಫೇಸ್‌ಬುಕ್ ಆ್ಯಪ್ ಅಥವಾ ಗೂಗಲ್ ಕ್ರೋಮ್ ಅಥವಾ ಇನ್ಯಾವುದೇ ಬ್ರೌಸರ್ ಇದ್ದರೆ ಅದನ್ನು ಆಯ್ದುಕೊಳ್ಳಿ
- ನಂತರ ತೆರೆದುಕೊಳ್ಳುವ ಪುಟದಲ್ಲಿ ಪೀಠಿಕೆ (Intro) ಭಾಗ ಮುಗಿದ ತಕ್ಷಣ ಕನ್ನಡ ಏಷ್ಯಾ ನೆಟ್ ನ್ಯೂಸ್ ವೆಬ್‌ಸೈಟ್‌ನ ಕೊಂಡಿಯೊಂದು ಸಿಗುತ್ತದೆ
- ಅದನ್ನು ಕ್ಲಿಕ್ ಮಾಡಿದರೆ ಇಡೀ ಸರಣಿಯ ಎಲ್ಲ ಕಂತುಗಳು ಓದಲು ಲಭ್ಯ
- ಹೀಗೆ ನಿಮಗೆ ಯಾವ ಕಂತು ಬೇಕೋ, ಆ ಕಂತಿಗೆ ಕ್ಲಿಕ್ ಮಾಡಿ‌ ಓದಿ

ಭಾಗ-1: ಲಡಾಖ್ ಎಂಬ ಸ್ವರ್ಗದ ಬಾಗಿಲು
Web link- ಲಡಾಖ್ ಅಮೃತ ಯಾತ್ರೆ-2022 ಭಾಗ-1: ಲಡಾಖ್ ಎಂಬ ಸ್ವರ್ಗದ ಬಾಗಿಲು
https://www.facebook.com/story.php?story_fbid=10228658973247133&id=1469635614

ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ
Web link- ಲಡಾಖ್ ಅಮೃತ ಯಾತ್ರೆ - 2022 ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ
https://www.facebook.com/story.php?story_fbid=10228660793732644&id=1469635614

ಭಾಗ-3: ಹೆದ್ದಾರಿ ಬಂದ್, 200ಕ್ಕೂ ಹೆಚ್ಚು ಭೂಕುಸಿತ !
Web link-ಲಡಾಖ್ ಅಮೃತ ಯಾತ್ರೆ–2022 ಭಾಗ-3: ಹೆದ್ದಾರಿ ಬಂದ್, 200ಕ್ಕೂ ಹೆಚ್ಚು ಭೂಕುಸಿತ !
https://www.facebook.com/story.php?story_fbid=10228670335211175&id=1469635614

ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!
​​Web link-ಲಡಾಖ್ ಅಮೃತ ಯಾತ್ರೆ–2022 ಭಾಗ-4: ಥ್ಯಾಂಕ್ಯೂ ಬ್ರೋ ಥ್ಯಾಂಕ್ಯೂ!
https://www.facebook.com/story.php?story_fbid=10228682324550901&id=1469635614

ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!
Web link-ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!
https://www.facebook.com/story.php?story_fbid=10228692121475818&id=1469635614

ಭಾಗ-6: ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು!
Web link-ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !
https://www.facebook.com/story.php?story_fbid=10228705837698715&id=1469635614

ಭಾಗ-7: ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!
Web link-ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!
https://kn-in.facebook.com/story.php?story_fbid=10228839176312097&id=1469635614

ಭಾಗ-8: ಅಲೆಲೇ... ಲೇಹ್ ಹೆದ್ದಾರಿ ಅದ್ಭುತ!
Web link-ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್‌ ಗೆ ಹೋಗೋಣ, ಬಾರೋ ಲೇ...!
https://www.facebook.com/story.php?story_fbid=10228844955216566&id=1469635614

ಭಾಗ-9: ಹಾನ್‌ಲೇ... ಅದು ಬೇರೆಯೇ ಗ್ರಹ!
Web link-ಲಡಾಖ್ ಅಮೃತಯಾತ್ರೆ - 2022: ಭಾಗ-9, ಹಾನ್‌ಲೇ... ಅದು ಬೇರೆಯೇ ಗ್ರಹ !
https://www.facebook.com/story.php?story_fbid=10228852379202161&id=1469635614

ಭಾಗ-10: ವಿಶ್ವದಲ್ಲೇ ಎತ್ತರದ ರಸ್ತೆ ಇರುವ ಉಮ್ಲಿಂಗ್‌ ಲಾ, ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರ!
Web link-ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರದ ರಸ್ತೆ ಉಮ್ಲಿಂಗ್ ಲಾ!
https://www.facebook.com/story.php?story_fbid=10228860529765920&id=1469635614

ಭಾಗ-11: ಎರಡೇ ಅಡಿ ಅಂತರದಲ್ಲಿ ನನ್ನ ಪ್ರಾಣ ಉಳಿಯಿತು!
Web link-ಲಡಾಖ್ ಅಮೃತಯಾತ್ರೆ-2022: ಭಾಗ-11, ಎರಡೇ ಅಡಿ ಅಂತರದಲ್ಲಿ ನನ್ನ ಪ್ರಾಣ ಉಳಿಯಿತು !
https://www.facebook.com/story.php?story_fbid=10228864732990998&id=1469635614

ಭಾಗ-12: ನೋಡಿದಷ್ಟೂ ಮುಗಿಯೋದಿಲ್ಲ ಲೇಹ್!
Web link-ಲಡಾಖ್ ಅಮೃತಯಾತ್ರೆ-2022: ಭಾಗ-12, ನೋಡಿದಷ್ಟೂ ಮುಗಿಯೋದಿಲ್ಲ ಲೇಹ್ !
https://www.facebook.com/story.php?story_fbid=10228869724435781&id=1469635614

ಭಾಗ-13: ಲೇಹ್‌ನಿಂದ ಮರಳುವಾಗ ಮಿಂಚಿನ ಓಟ!
Web link-ಲಡಾಖ್ ಅಮೃತಯಾತ್ರೆ-2022; ಭಾಗ-13, ಲೇಹ್‌ನಿಂದ ಮರಳುವಾಗ ಮಿಂಚಿನ ಓಟ !
https://www.facebook.com/story.php?story_fbid=10228877767236846&id=1469635614

ಭಾಗ-14: ಕಡೆಯ ಎರಡು ದಿನ ಹೃದಯ ಭಾರ ಭಾರ
Web link-ಲಡಾಖ್ ಅಮೃತಯಾತ್ರೆ 2022 ಭಾಗ-14: ಕಡೆಯ ಎರಡು ದಿನ ಹೃದಯ ಭಾರ ಭಾರ
https://www.facebook.com/story.php?story_fbid=10228886655779054&id=1469635614

Latest Videos
Follow Us:
Download App:
  • android
  • ios