11:49 PM (IST) Aug 25

Karnataka Latest News:ಪರಿಶಿಷ್ಟ ಜಾತಿ ಒಳಮೀಸಲಾತಿ ಆದೇಶ ಪ್ರಕಟ; 101 ಜಾತಿಗಳಲ್ಲಿ ಎಡಗೈ, ಬಲಗೈ ಸೇರೋರಾರು? ಇಲ್ಲಿದೆ ಪಟ್ಟಿ!

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಮರುವಿಂಗಡಿಸಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ವಯ 5 ಪ್ರವರ್ಗಗಳ ಬದಲಾಗಿ 3 ಪ್ರವರ್ಗಗಳಾಗಿ ವಿಂಗಡಿಸಿ, ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗಿದೆ. 101 ಜಾತಿಗಳ ಪೈಕಿ ಯಾರಿ ಯಾವ ವರ್ಗಕ್ಕೆ ಬರುತ್ತೀರಿ ಈ ಆದೇಶ ಪಟ್ಟಿ ನೋಡಿ..

Read Full Story
11:36 PM (IST) Aug 25

Karnataka Latest News:ದಕ್ಷಿಣ ಭಾರತದ ಗಣೇಶ ದೇವಸ್ಥಾನಗಳು - ಗಣೇಶ ಚತುರ್ಥಿಗೆ ಭೇಟಿ ನೀಡಲೇಬೇಕಾದ 5 ದೇವಸ್ಥಾನಗಳು

ದಕ್ಷಿಣ ಭಾರತದ ಅತ್ಯುತ್ತಮ ಗಣೇಶ ದೇವಸ್ಥಾನಗಳು: ಗಣೇಶ ಚತುರ್ಥಿ ಬಪ್ಪನಿಗೆ ತುಂಬಾ ವಿಶೇಷವಾದ ಹಬ್ಬ. ಈ ವಿಶೇಷ ಸಂದರ್ಭದಲ್ಲಿ ಗಣಪತಿ ಬಪ್ಪನ ದರ್ಶನ ಪಡೆಯಲು ಬಯಸುವವರು ದಕ್ಷಿಣ ಭಾರತದ ಕೆಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ನಿಮ್ಮ ಹರಕೆಗಳನ್ನು ಪೂರೈಸಿಕೊಳ್ಳಿ.

Read Full Story
11:27 PM (IST) Aug 25

Karnataka Latest News:ಬೆಂಗಳೂರು ಜನರೇ ಕಸ ಹಾಕುವ ಟೈಮ್ ಚೇಂಜ್; ಬೆಳಗ್ಗೆ 5.30ಕ್ಕೆ ಮನೆ ಮುಂದೆ ಬರಲಿದೆ ಬಿಬಿಎಂಪಿ ಆಟೋ ಟಿಪ್ಪರ್!

ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಹಾಜರಾತಿ ಸಮಯವನ್ನು ಬೆಳಿಗ್ಗೆ 5.30 ರಿಂದ 6.30 ರವರೆಗೆ ಪರಿಷ್ಕರಿಸಲಾಗಿದೆ. ನಿವಾಸಿಗಳು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗುವಂತೆ ಈ ಬದಲಾವಣೆ ಮಾಡಲಾಗಿದೆ.
Read Full Story
11:22 PM (IST) Aug 25

Karnataka Latest News:Mandya ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ

ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ ಬಸ್ ತಂಗುದಾಣವನ್ನು ನೆಲಸಮಗೊಳಿಸಲಾಗಿದೆ. ಕೇವಲ ಎರಡು ವರ್ಷದ ಹಳೆಯ ಬಸ್ ನಿಲ್ದಾಣವನ್ನು ಕೆಡವಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು.

Read Full Story
11:07 PM (IST) Aug 25

Karnataka Latest News:ಕಾಂಗ್ರೆಸ್ ಪಂಚ ಗ್ಯಾರಂಟಿಗಳಿಗೆ 97,499 ಕೋಟಿ ಖರ್ಚು ಮಾಡಿದ ಸರ್ಕಾರ; ಬಂಡವಾಳ ವೆಚ್ಚದ ಹೊರೆ ಅಲ್ಲಗಳೆದ ರೇವಣ್ಣ!

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ₹94,177 ಕೋಟಿ ಖರ್ಚು ಮಾಡಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಸಿಎಜಿ ವರದಿ ಯೋಜನೆಗಳ ಟೀಕೆ ಮಾಡಿಲ್ಲ, ಬದಲಾಗಿ ಖರ್ಚಿನ ಲೆಕ್ಕವನ್ನು ಮಾತ್ರ ನೀಡಿದೆ ಎಂದು ಅವರು ಹೇಳಿದ್ದಾರೆ.
Read Full Story
10:50 PM (IST) Aug 25

Karnataka Latest News:ಊಟಕ್ಕೆ ಬರ್ತಿನಿ ಅಮ್ಮಾ.... ಮನೆಗೆ ಬರೋವಷ್ಟರಲ್ಲಿ ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಕೊಲೆ

ಹಾವೇರಿಯಲ್ಲಿ ಚಿತ್ರದುರ್ಗ ಮೂಲದ ನೃತ್ಯ ಮಾಸ್ಟರ್ ಲಿಂಗೇಶ್ ಅವರ ಕೊಲೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ಫ್ಲೈಓವರ್ ಮೇಲೆ ಅವರ ಮೃತದೇಹ ಪತ್ತೆಯಾಗಿದೆ.

Read Full Story
10:32 PM (IST) Aug 25

Karnataka Latest News:2025ರ ಟಾಪ್-5 ಸಿನಿಮಾದಲ್ಲಿ 'ಸು ಪ್ರಂ ಸೋ'ಗಿದೆಯೇ ಸ್ಥಾನ? ₹15 ಕೋಟಿ ವೆಚ್ಚದ 'ಮಹಾವತಾರ ನರಸಿಂಹ' 300 ಕೋಟಿ ಗಳಿಕೆ!

ಮಹಾವತಾರ್ ನರಸಿಂಹ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಸಾಬೀತಾಗಿದೆ. 32 ದಿನಗಳಲ್ಲಿ ಚಿತ್ರವು ವಿಶ್ವಾದ್ಯಂತ 301 ಕೋಟಿ ರೂ.ಗಿಂತ ಹೆಚ್ಚು ಗಳಿಸಿದೆ. 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು 1450% ಕ್ಕಿಂತ ಹೆಚ್ಚು ಲಾಭ ಬಂದಿದೆ. ಸು ಫ್ರಂ ಸೋಗಿದೆಯೇ ಟಾಫ್-5 ಸ್ಥಾನ?

Read Full Story
09:13 PM (IST) Aug 25

Karnataka Latest News:ಆಸ್ತಿಗಾಗಿ ಕೆಸರು ಗದ್ದೆಯಲ್ಲಿ ಮಗಳನ್ನು ಬೀಳಿಸಿ ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ; ವಿಡಿಯೋ ವೈರಲ್

ಮಂಡ್ಯ ಜಿಲ್ಲೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲತಾಯಿಯೊಬ್ಬಳು ಮಲಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story
07:52 PM (IST) Aug 25

Karnataka Latest News:ಧರ್ಮಸ್ಥಳ ಕೇಸಿನ ಮಾಸ್ಕ್‌ಮ್ಯಾನ್ ಚಿನ್ನಯ್ಯ, ತಿಮರೋಡಿ ಮನೆಯಲ್ಲಿದ್ದದ್ದು ನಿಜ; ಜಯಂತ್.ಟಿ

ಧರ್ಮಸ್ಥಳ ಪ್ರಕರಣದಲ್ಲಿ ಜಯಂತ್.ಟಿ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ, ಸುಜಾತ ಭಟ್ ಪ್ರಕರಣವನ್ನು ಸುಳ್ಳು ಎಂದು ಕರೆದಿದ್ದಾರೆ ಮತ್ತು ಚಿನ್ನಯ್ಯನಿಗೆ ಆಶ್ರಯ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಸತ್ಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿ ಹೇಳಿ, ಬಂಧನಕ್ಕೆ ಸಿದ್ಧ ಎಂದಿದ್ದಾರೆ.

Read Full Story
07:38 PM (IST) Aug 25

Karnataka Latest News:ಹಿಂದಿನ ಹೇಳಿಕೆಗೆ ಬಾನು ಮುಷ್ತಾಕ್ ಸ್ಪಷ್ಟನೆ ಅಗತ್ಯವೆಂದ ಯದುವೀರ್ ಒಡೆಯರ್

ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆ ಆಯ್ಕೆ ಕುರಿತು ಯದುವೀರ್ ಒಡೆಯರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ತಾಯಿ ಭುವನೇಶ್ವರಿ ಮತ್ತು ಚಾಮುಂಡೇಶ್ವರಿ ಬಗ್ಗೆ ಗೌರವ ಸ್ಪಷ್ಟಪಡಿಸುವಂತೆ ಮುಷ್ತಾಕ್ ಅವರಿಗೆ ಒತ್ತಾಯಿಸಿದ್ದಾರೆ. 

Read Full Story
06:51 PM (IST) Aug 25

Karnataka Latest News:ನನ್ನ ತಮ್ಮ 'ಚಿನ್ನಯ್ಯ' ಚಿನ್ನದಂಥಾ ವ್ಯಕ್ತಿ! ಯಾರೋ ಷಡ್ಯಂತ್ರ ಮಾಡಿದ್ದಾರೆಂದ ಅಣ್ಣ ಆರ್ಮುಗಂ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ ಆರೋಪದಲ್ಲಿ ಬಂಧಿತನಾಗಿರುವ 'ಮಾಸ್ಕ್‌ಮ್ಯಾನ್' ಚಿನ್ನಯ್ಯನ ಸಹೋದರ ಆರ್ಮುಗಂ, ಚಿನ್ನಯ್ಯನ ಕೃತ್ಯದ ಹಿಂದೆ ಬೇರೆಯವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಚಿನ್ನಯ್ಯ ಒಳ್ಳೆಯ ಹುಡುಗ, ಇಂತಹ ಕೆಲಸ ಮಾಡುವವನಲ್ಲ ಎಂದು ಹೇಳಿದ್ದಾರೆ.
Read Full Story
06:48 PM (IST) Aug 25

Karnataka Latest News:ಜಸ್ಟ್‌ 999 ರೂಪಾಯಿಗೆ ಸಿಗ್ತಿದೆ boAt ಇಯರ್‌ಬಡ್ಸ್‌!

boAt ಕಂಪನಿಯ ಜನಪ್ರಿಯ ಇಯರ್‌ಬಡ್ಸ್‌ಗಳು ಈಗ ಅಮೆಜಾನ್‌ನಲ್ಲಿ ಕೇವಲ ₹999ಕ್ಕೆ ಲಭ್ಯವಿದೆ. Airdopes 141, Airdopes Joy ಮತ್ತು Airdopes 311 Pro ಮಾದರಿಗಳಲ್ಲಿ 70% ಕ್ಕಿಂತ ಹೆಚ್ಚು ರಿಯಾಯಿತಿ ಲಭ್ಯವಿದೆ.
Read Full Story
06:41 PM (IST) Aug 25

Karnataka Latest News:ನಮ್ಮ ಮೆಟ್ರೋ ದರ ಏರಿಕೆ ದೆಹಲಿ ಮೆಟ್ರೋ ದರ ಜೊತೆ ಹೋಲಿಕೆ ಮಾಡಿ BMRCL ಗೆ ತೇಜಸ್ವಿ ಸೂರ್ಯ ಟಾಂಗ್

ಬೆಂಗಳೂರು ಮೆಟ್ರೋ ದರ ಏರಿಕೆಯನ್ನು ದೆಹಲಿ ಮೆಟ್ರೋ ದರ ಏರಿಕೆಗೆ ಹೋಲಿಸಿ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಬಿಎಂಆರ್‌ಸಿಎಲ್ ದರ ಏರಿಕೆ ಅಸಮಂಜಸ ಹಾಗೂ ಸಾರ್ವಜನಿಕರಿಗೆ ಹೊರೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಶುಲ್ಕ ನಿಗದಿ ಸಮಿತಿ ವರದಿ ಪ್ರಕಟಿಸದಿರುವುದನ್ನು ಪ್ರಶ್ನಿಸಿದ್ದಾರೆ.
Read Full Story
05:48 PM (IST) Aug 25

Karnataka Latest News:ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಬಾಗಿನ ಸ್ವೀಕರಿಸಿ, ಕುಂಕುಮ ಇಟ್ಟ ಬಾನು ಮುಷ್ತಾಕ್; ಇಲ್ಲಿದೆ ಫಸ್ಟ್ ರಿಯಾಕ್ಷನ್!

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಮೈಸೂರು ದಸರಾ 2025 ಉದ್ಘಾಟನೆಗೆ ಆಹ್ವಾನ ನೀಡಲಾಗಿದ್ದು, ನಟಿ ಶಶಿಕಲಾ ಅವರು ಬಾನು ಮುಷ್ತಾಕ್ ಅವರಿಗೆ ಬಾಗಿನ ನೀಡಿ ಗೌರವಿಸಿದ್ದಾರೆ. ಈ ಆಯ್ಕೆಯನ್ನು ಕೆಲವರು ವಿರೋಧಿಸಿದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ.
Read Full Story
05:23 PM (IST) Aug 25

Karnataka Latest News:ತುಂಗಭದ್ರಾ ಡ್ಯಾಂನ ಕ್ರಸ್ಟ್‌ಗೇಟ್‌ಗಳ ರಿಪೇರಿ ಆರಂಭ - ಊರ ಜನರಿಗೆ ಹೋದ ಜೀವ ಬಂದಂಗಾಯ್ತು!

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಅಳವಡಿಕೆ ಆರಂಭವಾಗಲಿದೆ. ಈ ನಡುವೆ, ಜಲಾಶಯದ ಸ್ಥಿತಿಗತಿ ಪರಿಶೀಲಿಸಲು ಬಿಜೆಪಿ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Read Full Story
05:23 PM (IST) Aug 25

Karnataka Latest News:ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿದ ಯದುವೀರ್ ಒಡೆಯರ್; ಬಿಜೆಪಿಗೆ ತೀವ್ರ ಮುಖಭಂಗ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದನ್ನು ಯದುವೀರ್ ಒಡೆಯರ್ ಸ್ವಾಗತಿಸಿದ್ದಾರೆ.

Read Full Story
05:07 PM (IST) Aug 25

Karnataka Latest News:'ಅಮ್ಮನಿಲ್ಲದ ಮೊದಲ ವರ್ಷ..' ಬರ್ತ್‌ಡೇ ಕುರಿತು ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್‌ ನೀಡಿದ ಕಿಚ್ಚ ಸುದೀಪ್‌!

ಕಿಚ್ಚ ಸುದೀಪ್ ಅವರು ಈ ವರ್ಷ ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಲಿದ್ದಾರೆ. ಸೆಪ್ಟೆಂಬರ್ 2 ರಂದು 52ನೇ ವರ್ಷಕ್ಕೆ ಕಾಲಿಡಲಿರುವ ಅವರು, ಸೆಪ್ಟೆಂಬರ್ 1 ರ ರಾತ್ರಿಯೇ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Read Full Story
04:53 PM (IST) Aug 25

Karnataka Latest News:ಕೊಡಗಿನ ದೀಪಾ ಬಾಸ್ತಿ ಕೂಡ ಬೂಕರ್‌ ಗೆದ್ದಿದ್ದಾರೆ, ಅವರನ್ನ ಯಾಕೆ ದಸರಾ ಉದ್ಘಾಟನೆಗೆ ಆಹ್ವಾನಿಸಿಲ್ಲ - ವಿಜಯೇಂದ್ರ ಪ್ರಶ್ನೆ!

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ಸರ್ಕಾರ ಅವರ ಸಾಧನೆಯನ್ನು ಗುರುತಿಸಿ ಆಹ್ವಾನ ನೀಡಲಾಗಿದೆ ಎಂದಿದೆ.
Read Full Story
04:52 PM (IST) Aug 25

Karnataka Latest News:ಈ ವರ್ಷವೇ ಸಿದ್ದರಾಮಯ್ಯ ರಾಜೀನಾಮೆ ಕೊಡೋದಂತು ಸತ್ಯ, ಖರ್ಗೆ ಸಿಎಂ ಆಗ್ತಾರಾ, ಡಿಕೆಶಿ ಆಗ್ತಾರಾ ಕಾದು ನೋಡಬೇಕು!

ಡಿಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿ, ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಸದ್ಗುರುಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಇದು ಹಿಂದೂ ಧರ್ಮದ ಮೇಲಿನ ನಿಜವಾದ ನಂಬಿಕೆಯೇ ಅಥವಾ ರಾಜಕೀಯ ತಂತ್ರಗಾರಿಕೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಎಂದು ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

Read Full Story
04:36 PM (IST) Aug 25

Karnataka Latest News:ಎನ್‌ಸಿಸಿ ಸೆಲೆಕ್ಷನ್ ವೇಳೆ ರನ್ನಿಂಗ್ ಓಡುತ್ತಲೇ ಕುಸಿದುಬಿದ್ದು ಮೃತಪಟ್ಟ ವಿದ್ಯಾರ್ಥಿ!

ಧಾರವಾಡದ ಐಐಟಿಯಲ್ಲಿ ಎನ್‌ಸಿಸಿ ಆಯ್ಕೆ ರನ್ನಿಂಗ್‌ರೇಸ್ ವೇಳೆ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಎಂಬ ಎಂ.ಟೆಕ್ ವಿದ್ಯಾರ್ಥಿ ಓಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Read Full Story