10:35 PM (IST) Jan 10

Karnataka News Live 9 January 2026 ಬೆಳಗಾವಿ, ಚಿತ್ರದುರ್ಗದಲ್ಲಿ ಭೀಕರ ಅಪಘಾತ - ಸವದತ್ತಿ ಯಾತ್ರಾರ್ಥಿಗಳ ವಾಹನ ಪಲ್ಟಿ, ಹಿರಿಯೂರಿನಲ್ಲಿ ಲಾರಿ-ಕಾರು ಡಿಕ್ಕಿ!

ಬೆಳಗಾವಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಸವದತ್ತಿ ಯಲ್ಲಮ್ಮನ ದರ್ಶನ ಮುಗಿಸಿ ಬರುತ್ತಿದ್ದ ಯಾತ್ರಾರ್ಥಿಗಳ ವಾಹನ ಪಲ್ಟಿಯಾಗಿ ಏಳು ಮಂದಿ ಗಾಯಗೊಂಡರೆ, ಹಿರಿಯೂರಿನಲ್ಲಿ ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read Full Story
09:36 PM (IST) Jan 10

Karnataka News Live 9 January 2026 ಕೊಡಗಿನಲ್ಲಿ ಬುಲ್ಡೋಜರ್ ಭೀತಿ - ಅರಣ್ಯ ಕಾಯ್ದೆಯ ಹೆಸರಲ್ಲಿ ಬೀದಿಗೆ ಬೀಳಲಿದೆಯೇ 50 ಕುಟುಂಬ?

ಕೊಡಗಿನ ಸುಂದರನಗರದಲ್ಲಿ 50 ವರ್ಷಗಳಿಂದ ವಾಸಿಸುತ್ತಿರುವ 50ಕ್ಕೂ ಹೆಚ್ಚು ಕುಟುಂಬಗಳು 'ಸಿ ಅಂಡ್ ಡಿ' ಭೂಮಿ ನಿಯಮದಿಂದಾಗಿ ಮನೆ ಕಳೆದುಕೊಳ್ಳುವ ಆತಂಕದಲ್ಲಿವೆ. ಅರಣ್ಯ ಇಲಾಖೆಯು ಮನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದು, ನಿವಾಸಿಗಳು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story
09:13 PM (IST) Jan 10

Karnataka News Live 9 January 2026 'ನೀನು ಸತ್ತರೆ ಒಳ್ಳೆಯದು' ಅಂದಿದ್ದಕ್ಕೆ ಪ್ರಾಣ ಬಿಟ್ಟ ಯುವತಿ! ಕಾರವಾರದಲ್ಲಿ ಒನ್‌ಸೈಡ್ ಲವ್ & ಕ್ರೈಂ ಸ್ಟೋರಿ!

ಕಾರವಾರದಲ್ಲಿ 21 ವರ್ಷದ ಯುವತಿ ರಿಶೆಲ್ ಡಿಸೋಜಾ, ಸಹಪಾಠಿ ಚಿರಾಗ್ ಕೊಠಾರಕರ್‌ನ ಪ್ರೀತಿಯ ಕಿರುಕುಳಕ್ಕೆ ಬೇಸತ್ತು ಆತ್ಮ೧ಹತ್ಯೆ  'ನನ್ನನ್ನು ಪ್ರೀತಿಸದಿದ್ದರೆ ಸತ್ತು ಹೋಗು' ಎಂದು ಆರೋಪಿ ಪ್ರಚೋದನೆ ನೀಡಿದ್ದರಿಂದ ಮನನೊಂದು ಆಕೆ ಈ ಕೃತ್ಯ ಎಸಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು.

Read Full Story
08:37 PM (IST) Jan 10

Karnataka News Live 9 January 2026 ಬೆಂಗಳೂರು - ರಾಜೀವ್ ಗಾಂಧಿ ವಸತಿ ನಿಗಮ ಫಲಾನುಭವಿಗಳ ಮನೆ ಹಂಚಿಕೆ ಯಾವಾಗ? ತಿಳ್ಕೊಳ್ಳಿ

ಬೆಂಗಳೂರಿನ 550 ಬಡ ಕುಟುಂಬಗಳಿಗೆ ಮನೆ ನೀಡಲು ಬಿಬಿಎಂಪಿ ಹಣ ಜಮೆ ಮಾಡಿದ್ದರೂ, ಫಲಾನುಭವಿಗಳ ಪಟ್ಟಿಯನ್ನು ನೀಡದ ಕಾರಣ ಮನೆ ಹಂಚಿಕೆ ಸ್ಥಗಿತಗೊಂಡಿದೆ. ರಾಜೀವ್ ಗಾಂಧಿ ವಸತಿ ನಿಗಮದ ಪ್ರಕಾರ, ಪಟ್ಟಿ ಬಂದ ತಕ್ಷಣ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ ಮನೆ ಹಂಚಲಾಗುವುದು ಮತ್ತು ಹಣ ಸುರಕ್ಷಿತವಾಗಿದೆ.

Read Full Story
08:16 PM (IST) Jan 10

Karnataka News Live 9 January 2026 ಕೊಪ್ಪಳ - ದಾಸೋಹದಲ್ಲಿ ಹೆಗಲಮೇಲೆ ಅಕ್ಕಿ ಮೂಟೆ ಹೊತ್ತ ಗವಿಸಿದ್ದೇಶ್ವರ ಶ್ರೀಗಳು!

ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ, ಗವಿಸಿದ್ದೇಶ್ವರ ಸ್ವಾಮೀಜಿಗಳು ಸ್ವತಃ ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ್ದಾರೆ. ಶ್ರೀಗಳ ಈ ಸರಳತೆ ಮತ್ತು 'ಕಾಯಕವೇ ಕೈಲಾಸ' ತತ್ವದ ಪಾಲನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
07:34 PM (IST) Jan 10

Karnataka News Live 9 January 2026 ಬಳ್ಳಾರಿ ರಾಜಶೇಖರ್ ಸಾವು ಆಕಸ್ಮಿಕ ಅಲ್ಲ; ನಾಳೆ ಜನಾರ್ದನ ರೆಡ್ಡಿ ಬಿಡುಗಡೆ ಮಾಡಲಿರೋ ಆ ವಿಡಿಯೋ ಬಾಂಬ್‌ನಲ್ಲಿ ಏನಿದೆ?

ರಾಜಶೇಖರ ರೆಡ್ಡಿ ಹತ್ಯೆ ಪ್ರಕರಣ ಮತ್ತು ತಮ್ಮ ಮೇಲಿನ ಹತ್ಯೆ ಸಂಚಿನ ಬಗ್ಗೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಿಬಿಐ ತನಿಖೆಗೆ ಆಗ್ರಹ. ರಾಜ್ಯ ಸರ್ಕಾರದ ಸಿಐಡಿ ತನಿಖೆ ತಿರಸ್ಕರಿಸಿರುವ ಅವರು, ಜ. 17 ರಂದು ಬೃಹತ್ ಪಾದಯಾತ್ರೆ, ಸ್ಮಶಾನಕ್ಕೆ ಸಂಬಂಧಿಸಿದ ಸ್ಫೋಟಕ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಣೆ!

Read Full Story
07:14 PM (IST) Jan 10

Karnataka News Live 9 January 2026 'ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗ್ಬಹುದು..' ಓವೈಸಿ ಮಾತಿಗೆ ಕಿಡಿಕಿಡಿಯಾದ ಬಿಜೆಪಿ!

ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ನೀಡುವುದರಿಂದ, 'ಹಿಜಾಬ್ ಧರಿಸಿದ ಮಗಳು' ಒಂದು ದಿನ ದೇಶದ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.

 

Read Full Story
07:00 PM (IST) Jan 10

Karnataka News Live 9 January 2026 ಕೇವಲ ಎರಡು ವರ್ಷದಲ್ಲಿ ಶಿರಾಡಿ ರೈಲ್ವೆ ಮಾರ್ಗದ ವಿದ್ಯುದ್ಧೀಕರಣ ಪೂರ್ಣ, ಪಶ್ಚಿಮಘಟ್ಟದ ರೈಲು ಹಾದಿಗೆ ಹೊಸ ಚೈತನ್ಯ

ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ 55 ಕಿ.ಮೀ. ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾರ್ಯವು ಕೇವಲ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಾಧನೆಯು ಪಶ್ಚಿಮಘಟ್ಟದ ಮೂಲಕ ರೈಲು ಸಂಚಾರಕ್ಕೆ ಹೊಸ ಚೈತನ್ಯ ನೀಡಲಿದೆ.

Read Full Story
06:56 PM (IST) Jan 10

Karnataka News Live 9 January 2026 ಅಪ್ಪು ಬೆಳ್ಳಗಾಗ್ಲಿ ಎಂದು ಇದ್ದಬಿದ್ದ ಕ್ರೀಮ್​ ಎಲ್ಲಾ ಹಚ್ಚುತ್ತಿದ್ಲು ಅವಳು - ಪುನೀತ್​ ರಾಜ್​ರ ಆ ದಿನಗಳ ಮೆಲುಕು

ಪುನೀತ್ ರಾಜ್‌ಕುಮಾರ್ ಅವರ ಕಪ್ಪು ಬಣ್ಣದ ಕಾರಣಕ್ಕೆ ಮನೆಯಲ್ಲಿ ಬೇಸರಗೊಂಡಿದ್ದ ಘಟನೆಯನ್ನು ಪಾರ್ವತಮ್ಮ ರಾಜ್‌ಕುಮಾರ್ ಹಳೆಯ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಪೂರ್ಣಿಮಾ ಕ್ರೀಮ್ ಹಚ್ಚುತ್ತಿದ್ದ ಬಗ್ಗೆ ಹಾಗೂ ಡಾ. ರಾಜ್‌ಕುಮಾರ್ 'ಕಪ್ಪು ಕಸ್ತೂರಿ' ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

Read Full Story
06:54 PM (IST) Jan 10

Karnataka News Live 9 January 2026 ಮಹತ್ವದ ರೈಲ್ವೇ ಸುದ್ದಿಗಳು - ಸಂಕ್ರಾಂತಿಗೆ ಮೈಸೂರು-ಟ್ಯುಟಿಕಾರನ್‌ ಮಧ್ಯೆ ವಿಶೇಷ ರೈಲು, ಕರಾವಳಿ ರೈಲ್ವೆಗೆ ಹೊಸ ಬೇಡಿಕೆ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ಮತ್ತು ಟ್ಯುಟಿಕಾರನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ. ಮಂಗಳೂರು  ರೈಲ್ವೆ ಅಭಿವೃದ್ಧಿ, ರೈಲು ವಿಳಂಬ, ವಂದೇ ಭಾರತ್ ಸೇರಿದಂತೆ ಹೊಸ ರೈಲುಗಳ ಬೇಡಿಕೆ ಮತ್ತು ನಿಲ್ದಾಣ ಅಭಿವೃದ್ಧಿ ಕುರಿತು ಸಂಸದ ಕ್ಯಾ. ಬ್ರಜೇಶ್ ಚೌಟ ಅವರೊಂದಿಗೆ ಚರ್ಚೆ ನಡೆಸಲಾಗಿದೆ.

Read Full Story
06:48 PM (IST) Jan 10

Karnataka News Live 9 January 2026 ಥಣಿಸಂದ್ರ ಮನೆ ತೆರವು - ಮುಸ್ಲಿಂ-ದಲಿತರ ಮನೆಗಳನ್ನೇ ಟಾರ್ಗೆಟ್ ಮಾಡ್ತಿದೆಯೇ ಸರ್ಕಾರ? ಸಿಎಂ ವಿರುದ್ಧ ಎಸ್‌ಡಿಪಿಐ ಮಜೀದ್ ವಾಗ್ದಾಳಿ!

ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದ ಮನೆ ತೆರವು ಕಾರ್ಯಾಚರಣೆ ರಾಜಕೀಯ ತಿರುವು ಪಡೆದಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಂತ್ರಸ್ತರನ್ನು ಭೇಟಿ ಮಾಡಿ, ಕಾನೂನುಬದ್ಧ ದಾಖಲೆಗಳಿದ್ದರೂ ಮನೆ ಕೆಡವಿರುವುದನ್ನು 'ಬುಲ್ಡೋಜರ್ ಭಾಗ್ಯ' ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story
06:48 PM (IST) Jan 10

Karnataka News Live 9 January 2026 ದೇಶಕ್ಕಾಗಿ ಒಲಂಪಿಕ್ಸ್ ಪದಕ ಗೆದ್ದ ಪ್ರಸಾದ್ ಈಗ ಹೌಸ್ ಕೀಪಿಂಗ್ ನೌಕರ; ಸರ್ಕಾರದ ನಿರ್ಲಕ್ಷ್ಯಕ್ಕೆ ನರಕವಾದ ಬದುಕು!

2015ರ ವಿಶೇಷ ಒಲಂಪಿಕ್ಸ್‌ನಲ್ಲಿ ಅಮೇರಿಕಾದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ವಿಶೇಷ ಚೇತನ ಪ್ರತಿಭೆ ಆರ್. ಪ್ರಸಾದ್, ಇಂದು ಯಾವುದೇ ಸರ್ಕಾರಿ ಪ್ರೋತ್ಸಾಹವಿಲ್ಲದೆ ಜೀವನ ಸಾಗಿಸಲು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ನರಕಸದೃಶ ಜೀವನ ನಡೆಸುತ್ತಿದ್ದಾರೆ.

Read Full Story
06:38 PM (IST) Jan 10

Karnataka News Live 9 January 2026 ಚಿಕ್ಕಬಳ್ಳಾಪುರ - ಜನ್ಮದಿನದಂದೇ ಸ್ವಾಮೀಜಿ ಮೇಲೆ ಹಲ್ಲೆ, ಮಠಕ್ಕೆ ನುಗ್ಗಿ ಹೊಡೆದ ವೃದ್ಧೆಯ ಕುಟುಂಬಸ್ಥರು !

ಚಿಕ್ಕಬಳ್ಳಾಪುರ ತಾಲೂಕಿನ ಓಂಕಾರ ಜ್ಯೋತಿ ಮಠದ ಉಮಾಮಹೇಶ್ವರ ಸ್ವಾಮೀಜಿ ಅವರ ಹುಟ್ಟುಹಬ್ಬದ ದಿನವೇ ಅವರ ಮೇಲೆ ಹಲ್ಲೆ ನಡೆದಿದೆ. ಮಠದ ಜಾಗವನ್ನು ಗಿಫ್ಟ್ ಡೀಡ್ ಮಾಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ವೃದ್ಧೆಯ ಕುಟುಂಬಸ್ಥರು ಈ ಕೃತ್ಯ ಎಸಗಿದ್ದು, ಗಾಯಾಳು ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story
06:35 PM (IST) Jan 10

Karnataka News Live 9 January 2026 ಕೊನೆಗೂ ಗೌರವ ಕಳೆದುಕೊಂಡ ಕಿಚ್ಚನ ಚಪ್ಪಾಳೆ, ಬಿಗ್‌ಬಾಸ್‌ ನಿರ್ಧಾರಕ್ಕೆ ಜನರ ಅಸಮಾಧಾನ ಯಾಕೆ?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಅಂತಿಮ ಹಂತ ತಲುಪಿದ್ದು, ಕೊನೆಯ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡಗೆ ಮತ್ತು ಈ ಸೀಸನ್‌ನ ಚಪ್ಪಾಳೆಯನ್ನು ಧ್ರುವಂತ್‌ಗೆ ನೀಡಿದ್ದು, ಇದು ವೀಕ್ಷಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
06:28 PM (IST) Jan 10

Karnataka News Live 9 January 2026 ಪಾಳುಬಿದ್ದ ವಿವಾದಿತ ಪರಶುರಾಮ ಥೀಮ್ ಪಾರ್ಕ್, ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆ ಜವಾಬ್ದಾರಿ

ಕಾರ್ಕಳದ ಪಾಳುಬಿದ್ದ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ನಿರ್ವಹಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿರ್ಮಿತಿ ಕೇಂದ್ರವೇ ಸಂಪೂರ್ಣ ಜವಾಬ್ದಾರಿಯಾಗಿ

Read Full Story
06:12 PM (IST) Jan 10

Karnataka News Live 9 January 2026 ಡೆಂಟಲ್ ಕಾಲೇಜು ವಿದ್ಯಾರ್ಥಿನಿಗೆ 'ಸ್ಲಂನಿಂದ ಬಂದ ಕೋತಿ' ಎಂದಿದ್ದ ಲೆಕ್ಚರ್ - ಸಾವಿನ ಹಿಂದಿದೆ ಕಿರುಕುಳದ ಕಥೆ!

ಬೊಮ್ಮನಹಳ್ಳಿಯ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ ಆತ್ಮ*ಹತ್ಯೆಗೆ ಶರಣಾಗಿದ್ದು, ಕಾಲೇಜು ಉಪನ್ಯಾಸಕರ ನಿರಂತರ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಸಹಪಾಠಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

Read Full Story
05:56 PM (IST) Jan 10

Karnataka News Live 9 January 2026 2 ಕೋಟಿ ಉದ್ಯೋಗ ಕೊಡೋದಾಗಿ ಅಧಿಕಾರ ಹಿಡಿದ ಬಿಜೆಪಿ ಗಾಂಧಿಯನ್ನೇ ಹೊರ ಹಾಕಲೆತ್ನಿಸುತ್ತಿದೆ - ಮಧು ಬಂಗಾರಪ್ಪ

ಎರಡು ಕೋಟಿ ಉದ್ಯೋಗ ಕೊಡ್ತಿವಿ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದಿಂದ ಇದೀಗ ಮಹಾತ್ಮ ಗಾಂಧಿಯವರನ್ನೇ ದೇಶದಿಂದ ಹೊರಗೆ ಹಾಕುವ ಯತ್ನ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Read Full Story
05:53 PM (IST) Jan 10

Karnataka News Live 9 January 2026 ಲಕ್ಕುಂಡಿ - ಮನೆ ಅಡಿಪಾಯ ತೋಡುವಾಗ ಪುರಾತನ ನಿಧಿ ಪತ್ತೆ! 101 ದೇವಸ್ಥಾನಗಳ ಊರಲ್ಲಿದೆ ಚಿನ್ನದ ಗಣಿ?

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಹಳೆಯ ಮನೆಯ ಅಡಿಪಾಯ ತೋಡುವಾಗ ಪುರಾತನ ಚಿನ್ನಾಭರಣಗಳಿದ್ದ ನಿಧಿ ಪತ್ತೆಯಾಗಿದೆ. ಈ ಆಭರಣಗಳು ಸಮೀಪದ ಲಕ್ಷ್ಮೀ ದೇವಸ್ಥಾನಕ್ಕೆ ಸೇರಿದ್ದೆಂದು ಶಂಕಿಸಲಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ.
Read Full Story
05:50 PM (IST) Jan 10

Karnataka News Live 9 January 2026 BBK 12 - ಅಶ್ವಿನಿ ಗೌಡ, ಧ್ರುವಂತ್​ ಮೋಸದಿಂದ ಟಾಸ್ಕ್​ ಗೆದ್ರಾ? ಸಾಕ್ಷಿ ತೋರಿದ ನೆಟ್ಟಿಗರು! ಏನಿದು ಬಿಸಿಬಿಸಿ ಚರ್ಚೆ?

ಬಿಗ್​ಬಾಸ್​ ಸೀಸನ್​ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಟಾಸ್ಕ್​ವೊಂದರಲ್ಲಿ ವಿವಾದ ಭುಗಿಲೆದ್ದಿದೆ. ಕಂಬ ಹಿಡಿದು ನಿಲ್ಲುವ ಟಾಸ್ಕ್​ನಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ನಿಯಮ ಉಲ್ಲಂಘಿಸಿ ಮೋಸದಿಂದ ಗೆದ್ದಿದ್ದಾರೆ ಎಂದು ವೀಕ್ಷಕರು ಆರೋಪಿಸುತ್ತಿದ್ದಾರೆ. ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

 

Read Full Story
05:41 PM (IST) Jan 10

Karnataka News Live 9 January 2026 ಸಿದ್ದರಾಮಯ್ಯರನ್ನು ಲೀಸ್ ಸಿಎಂ ಎಂದು ಅಣಕಿಸಿದ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಖಡಕ್ ಪ್ರಶ್ನೆ, 'ಡ್ಯಾಡಿ' ಯಾರು?

ಮಾಜಿ ಸಿಎಂ  ಹೆಚ್‌ಡಿಕೆ ಅವರು ಸಿಎಂ ಕುರಿತು ನೀಡಿದ ಹೇಳಿಕೆಗೆ ಶಾಸಕ ಪ್ರದೀಪ್ ಈಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಕುತಂತ್ರವಾಗಿದ್ದು,  ಅವರ ಬೆಳವಣಿಗೆಯನ್ನು ಸಹಿಸಲಾಗದೆ ಜೆಡಿಎಸ್ ನಾಯಕರು ಅವರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story