- Home
- Entertainment
- TV Talk
- BBK 12: ಅಶ್ವಿನಿ ಗೌಡ, ಧ್ರುವಂತ್ ಮೋಸದಿಂದ ಟಾಸ್ಕ್ ಗೆದ್ರಾ? ಸಾಕ್ಷಿ ತೋರಿದ ನೆಟ್ಟಿಗರು! ಏನಿದು ಬಿಸಿಬಿಸಿ ಚರ್ಚೆ?
BBK 12: ಅಶ್ವಿನಿ ಗೌಡ, ಧ್ರುವಂತ್ ಮೋಸದಿಂದ ಟಾಸ್ಕ್ ಗೆದ್ರಾ? ಸಾಕ್ಷಿ ತೋರಿದ ನೆಟ್ಟಿಗರು! ಏನಿದು ಬಿಸಿಬಿಸಿ ಚರ್ಚೆ?
ಬಿಗ್ಬಾಸ್ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಟಾಸ್ಕ್ವೊಂದರಲ್ಲಿ ವಿವಾದ ಭುಗಿಲೆದ್ದಿದೆ. ಕಂಬ ಹಿಡಿದು ನಿಲ್ಲುವ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ ನಿಯಮ ಉಲ್ಲಂಘಿಸಿ ಮೋಸದಿಂದ ಗೆದ್ದಿದ್ದಾರೆ ಎಂದು ವೀಕ್ಷಕರು ಆರೋಪಿಸುತ್ತಿದ್ದಾರೆ. ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

ಕೆಲವೇ ದಿನ ಬಾಕಿ
ಬಿಗ್ಬಾಸ್ ಸೀಸನ್ 12 (Bigg Boss 12) ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಕಾರಣ, ಬಿಗ್ಬಾಸ್ ಸ್ಪರ್ಧಿಳಿಗೆ ಮಾತ್ರವಲ್ಲದೇ ಅವರ ಅಭಿಮಾನಿಗಳ ಎದೆಯೂ ಡವಡವ ಎನ್ನುತ್ತಿದೆ. ಯಾವುದೋ ಯುದ್ಧ ಗೆದ್ದು ಬಂದಂಥ ಅನುಭವದಲ್ಲಿದ್ದ ಬಿಗ್ಬಾಸ್ ವೀಕ್ಷಕರು.
ಟಾಸ್ಕ್ಗಳ ಭರಾಟೆ
ಅದೇ ರೀತಿ, ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಟಾಸ್ಕ್ಗಳ ಭರಾಟೆ ಕೂಡ ಜೋರಾಗಿ ನಡೆಯುತ್ತಿದೆ. ಆದರೆ ಇದೇ ವೇಳೆ ಅಪಸ್ವರವೊಂದು ಕೇಳಿ ಬರುತ್ತಿದೆ. ಅದೇನೆಂದರೆ ನಿನ್ನೆ ನಡೆದಿರುವ ಟಾಸ್ಕ್ ಒಂದರಲ್ಲಿ ಅಶ್ವಿನಿ ಗೌಡ (Bigg Boss Ashwini Gowda) ಹಾಗೂ ಧ್ರುವಂತ್ ಅವರು ಮೋಸದಿಂದ ಟಾಸ್ಕ್ ಗೆದ್ದರು ಎನ್ನುವ ಗಂಭೀರ ಆರೋಪ ಇದಾಗಿದೆ.
ಮೋಸ ಮಾಡಿದ್ರಾ?
ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪೋಲ್ ಹಿಡಿದು ನಿಲ್ಲಬೇಕಿತ್ತು. ಅವರಿಗೆ ಕೊಟ್ಟಿರುವ ರೂಲ್ಸ್ ಪ್ರಕಾರ, ಸ್ಪರ್ಧಿಗಳೆಲ್ಲಾ ಹೇಳೀರುವ ಗೆರೆಯನ್ನು ದಾಟದೇ, ಕಂಬಿಯನ್ನ ಬಿಗಿಯಾಗಿ ಹಿಡಿದುಕೊಂಡು ನಿಲ್ಲಬೇಕಿತ್ತು. ಆದರೆ, ಅಶ್ವಿನಿ ಗೌಡ ಮತ್ತು ಧ್ರುವಂತ್ ಟಾಸ್ಕ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಸಾಕ್ಷಿ ಸಹಿತ ತೋರಿಸಿದ್ದಾರೆ.
ಏನಿದು ಆರೋಪ?
ಈಗ ವೈರಲ್ ಆಗ್ತಿರೋ ಫೋಟೋದಲ್ಲಿ, ಅಶ್ವಿನಿ ಗೌಡ ಹಾಗೂ ಧ್ರುವಂತ್ ಮೊಣಕಾಲಿನ ಸಪೋರ್ಟ್ ತೆಗೆದುಕೊಂಡು ಕಂಬ ಹಿಡಿದು ನಿಂತಿರುವುದನ್ನು ನೋಡಬಹುದು. ಆದರೆ, ರಾಶಿಕಾ ಮತ್ತು ರಘು ಸಪೋರ್ಟ್ ಇಲ್ಲದೇ ನಿಂತಿದ್ದರು. ಮಾತ್ರವಲ್ಲದೇ ಅಶ್ವಿನಿ ಹಾಗೂ ಧ್ರುವಂತ್ ಎಕ್ಟ್ರಾ ಬಟ್ಟೆ ಧರಿಸಿದ್ದರು. ಆದರೆ, ರಾಶಿಕಾ ಶೆಟ್ಟಿ ಮತ್ತು ರಘು ಹಾಕಿರಲಿಲ್ಲ. ಇದರಿಂದಾಗಿ ಅವರ ಮೈ ಮೇಲೆ ನೀರು ಬಿದ್ದಾಗ ಹೆಚ್ಚು ಹೊತ್ತು ಕಂಬವನ್ನ ಹಿಡಿದು ನಿಲ್ಲೋಕೆ ಆಗದೇ ರಾಶಿಕಾ ಮತ್ತು ರಘು ಔಟ್ ಆದರು ಎನ್ನುವುದು ವೀಕ್ಷಕರ ವಾದ.
ಸುಳ್ಳು ಆರೋಪ ಬೇಡ!
ಇಷ್ಟಾದರೂ ಬಿಗ್ಬಾಸ್ ಯಾಕೆ ಇದನ್ನು ಗಮನಿಸಿಲ್ಲ. ಅಶ್ವಿನಿ ಗೌಡ ಮತ್ತು ಧ್ರುವಂತ್ ಚೀಟಿಂಗ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಪ್ರಿಯಾಂಕಾ ಜೈಸ್ವಾಲ್ ಎನ್ನುವವರು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಕೆಲವರು ಇದನ್ನು ಒಪ್ಪುತ್ತಿಲ್ಲ. ಅವರು ನಿಯಮದ ಪ್ರಕಾರವೇ ಆಡಿದ್ದಾರೆ. ಇಲ್ಲದಿದ್ದರೆ ಬಿಗ್ಬಾಸ್ ಸುಮ್ಮನೇ ಇರುತ್ತಿರಲಿಲ್ಲ. ಸುಖಾಸುಮ್ಮನೆ ಸುಳ್ಳು ಆರೋಪ ಹೊರಿಸುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ.
Ag aunty and druv, Nam janake neat agi fool madavre,see how Raghu and Rashi played,fair and clean,
I'm proud of Rashi bcz when it comes to tasks,she never cheats,She plays honestly with true sportsmanship,
Champ Rashi❤#BBK12#RashikaShetty#BBKSeason12pic.twitter.com/c9548B2QQx— Priyanka jaiswal (@PriyankaJa20840) January 9, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

