ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಅಂತಿಮ ಹಂತ ತಲುಪಿದ್ದು, ಕೊನೆಯ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡಗೆ ಮತ್ತು ಈ ಸೀಸನ್‌ನ ಚಪ್ಪಾಳೆಯನ್ನು ಧ್ರುವಂತ್‌ಗೆ ನೀಡಿದ್ದು, ಇದು ವೀಕ್ಷಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿಯುವ ಹಂತ ಬಂದಿದೆ. ಬಹುತೇಕ ಮುಂದಿನ ವಾರ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಈಗಾಗಲೇ ಬಿಗ್‌ಬಾಸ್‌ನಲ್ಲಿ ಮುಂದಿನ ವಾರ ಶೋ ಮುಗಿಯುವ ಸೂಚನೆಯನ್ನೂ ನೀಡಲಾಗಿದೆ. ಕ್ಯಾಪ್ಟನ್‌ಶಿಪ್‌, ನಾಮಿನೇಷನ್‌, ಉತ್ತಮ-ಕಳಪೆ ಎಲ್ಲಾ ವಿಚಾರದಲ್ಲೂ ಈ ಆವೃತ್ತಿಯ ಕೊನೆಯದ್ದು ಎಂದು ತಿಳಿಸಲಾಗಿದೆ. ಇದರ ನಡುವೆ ಹಾಲಿ ಸೀಸನ್‌ನ ಕೊನೆಯ ವೀಕೆಂಡ್‌ ವಿತ್‌ ಕಿಚ್ಚ ಸುದೀಪ್‌, ವಾರದ ಕಥೆ ಕಿಚ್ಚನ ಜೊತೆ ಪ್ರೋಗ್ರಾಮ್‌ ಈ ಶನಿವಾರ-ಭಾನುವಾರ ಪ್ರಸಾರವಾಗಲಿದೆ. ಮನೆಯಲ್ಲಿದ್ದ 8 ಮಂದಿನ ಪೈಕಿ ಈಗ 6 ಮಂದಿ ಉಳಿದುಕೊಂಡಿದ್ದಾರೆ ಅನ್ನೋ ಸೂಚನೆಗಳಿವೆ.

ಮೂಲಗಳ ಪ್ರಕಾರ ಮ್ಯೂಟಂಟ್‌ ರಘು ಹಾಗೂ ರಾಶಿಕಾ ಈ ವಾರ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿಯೇ ಶಾಕಿಂಗ್‌ ಆಗಿದೆ. ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡುತ್ತಿದ್ದ ರಘು ಹಾಗೂ ರಾಶಿಕಾ ಈ ವಾರ ಕೊಂಚ ಡಲ್‌ ಆಗಿದ್ದರು. ಆದರೆ, ಕಾವ್ಯಾ ಶೈವ ಟಾಪ್‌-6 ಅಲ್ಲಿ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದರ ನಡುವೆ ವೀಕೆಂಡ್‌ ಪ್ರೋಮೋ ರಿಲೀಸ್‌ ಆಗಿದ್ದು ಅಶ್ವಿನಿ ಗೌಡ ಹಾಗೂ ಧ್ರುವಂತ್‌, ಕಿಚ್ಚ ಸುದೀಪ್‌ ಅವರಿಂದ ಪ್ರಶಂಸೆಯ ಮಹಾಪೂರವೇ ಹರಿಸಿದ್ದಾರೆ. ಈ ವಾರ ಇಡೀ ಮನೆ 2 ವರ್ಸಸ್‌ 6 ಆದ ರೀತಿ ಇತ್ತು ಎಂದಿದ್ದಾರೆ. ಕೊನೆಗ ಈ ವಾರದ ಕಿಚ್ಚನ ಚಪ್ಪಾಳೆಯನ್ನು ಅಶ್ವಿನಿ ಗೌಡ ಅವರಿಗೆ ಹಾಗೂ ಈ ಸೀಸನ್‌ನ ಕಿಚ್ಚನ ಚಪ್ಪಾಳೆಯನ್ನು ಧ್ರುವಂತ್‌ಗೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇಡೀ ಸೀಸನ್‌ಅಲ್ಲಿ ಗಿಲ್ಲಿ ಇಲ್ಲದೇ ಹೋಗಿದ್ದರೆ ಬಿಗ್‌ಬಾಸ್‌ ಡಲ್‌ ಆಗಿ ಕಾಣ್ತಿತ್ತು ಅನ್ನೋದು ಎಲ್ಲರ ಅಭಿಪ್ರಾಯ. ಆ ಲೆಕ್ಕದಲ್ಲಿ ನೋಡಿದರೆ, ಸೀಸನ್‌ನ ಚಪ್ಪಾಳೆ ಗಿಲ್ಲಿಗೇ ಸಿಗಬೇಕಿತ್ತು ಅನ್ನೋದು ಒಂದು ವಾದವಾಗಿದ್ದರೆ, ಧ್ರುವಂತ್‌ ಅವರನ್ನು ಬಿಟ್ಟು ಬೇರೆ ಯಾರಿಗಾದರೂ ಈ ಸೀಸನ್‌ನ ಕಿಚ್ಚನ ಚಪ್ಪಾಳೆ ನೀಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾಮೆಂಟ್‌ ಮಾಡಿರುವ ವ್ಯಕ್ತಿಯೊಬ್ಬರು, 'ಮೊದಲಿಗೆ ನಾನು ಧ್ರುವಂತ್‌ ತನ್ನ ಪತ್ನಿಯ ಮೇಲೆ ಹಲ್ಲೆ ಮಾತ್ರವೇ ಮಾಡಿದ್ದ ಎಂದುಕೊಂಡಿದ್ದೆ. ಆದರೆ, ಈಗ ಅವರದು ಇನ್ನೊಂದು ಅವತಾರ. ಇದು ಲೈಂಗಿಕ ದೌರ್ಜನ್ಯದ ಕೇಸ್‌. ಒಂದು ಕಡೆ ಚಾನೆಲ್‌ ಅವರು ಇಂಥ ದೌರ್ಜನ್ಯದ ವಿರುದ್ಧ ಭಾರ್ಗವಿ ಅನ್ನೋ ಸೀರಿಯಲ್‌ ಮಾಡ್ತಾರೆ. ಇನ್ನೊಂದು ಕಡೆ ದೌರ್ಜನ್ಯ ಮಾಡಿದ ಇಂಥ ಆರೋಪಿಯನ್ನ ವೈಟ್‌ವಾಷ್‌ ಮಾಡ್ತಾರೆ. ಅದೂ ಕೂಡ ರಕ್ಷಿತಾ ಹಾಗೂ ರಾಶಿಕಾ ಅವರನ್ನು ಕೆಟ್ಟದಾಗಿ ತೋರಿಸಿ ಈ ಕೆಲಸ ಮಾಡ್ತಿದ್ದಾರೆ' ಎಂದು ಅಭಿ ಎನ್ನುವವರು ಬರೆದಿದ್ದಾರೆ.

'ಬೇಕು ಬೇಕು ಅಂತಾನೆ ರಕ್ಷಿತಾ & ಗಿಲ್ಲಿ ಕೈ ಅಲ್ಲಿ Photo Open ಮಾಡ್ಸಿರೋದು. @KicchaSudeep ಅವ್ರು ಮಾಡಿರೋ ಹಲ್ಕಾ ಕೆಲಸಕ್ಕೆ ಅವರಿಂದಾನೆ ಶಭಾಷ್ ಅನ್ನಿಸ್ಬೇಕು ಅಂತಾನ? Character clean ಮಾಡ್ಸಿ, ನಿಮ್ show ಗೆ build up ಕೊಡೋಕೆ, ಇಷ್ಟೊಂದೆಲ್ಲಾ ಡ್ರಾಮಾ..(example: ಚೈತ್ರ) ಜನ ದಡ್ಡರಲ್ಲ ಸ್ವಾಮಿ..! ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಅಶ್ವಿನಿಗೆ ವಾರದ ಕಿಚ್ಚನ ಚಪ್ಪಾಳೆ

ಇನ್ನು ಅಶ್ವಿನಿ ಗೌಡಗೆ ವಾರದ ಕಿಚ್ಚನ ಚಪ್ಪಾಳೆ ಕೊಟ್ಟಿರೋದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಈ ವಾರದ ಒಂದು ಟಾಸ್ಕ್‌ನಲ್ಲಿ ಅವರು ಮೋಸದಿಂದ ಗೆದ್ದಿರೋದು ಸ್ಪಷ್ಟವಾಗಿ ಜನರಿಗೆ ಕಂಡಿದೆ. ಆದರೆ, ಬಿಗ್‌ಬಾಸ್‌ಗೆ ಮಾತ್ರ ಇದು ಕಾಣದೇ ಇರೋದು ಅಚ್ಚರಿಯ ವಿಚಾರ ಎಂದಿದ್ದಾರೆ. ಇನ್ನು ಸೀಸನ್‌ನ ಆರಂಭದಲ್ಲಿ ರಕ್ಷಿತಾರನ್ನು 'ಎಸ್‌ ಕೆಟಗರಿ' ಅಂದರೆ ಸ್ಲಮ್‌ ಕೆಟಗರಿ ಎಂದು ಕರೆದಿದ್ದರು. ಇಷ್ಟೆಲ್ಲಾ ವಿವಾದಗಳು ಮಾಡಿದ್ದ ಅಶ್ವಿನಿ ಗೌಡಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಟ್ಟಿರೋದು ಸರಿಯಲ್ಲ. ಕಿಚ್ಚ ಸೋಲ್ಡ್‌ಔಟ್‌ ಆಗಿದ್ದಾರೆ ಅನ್ನೋ ಅಭಿಪ್ರಾಯಗಳು ಬಂದಿವೆ.

View post on Instagram