SIR: ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಖಂಡಿಸಿ ಯೂಟ್ಯೂಬರ್ ಧ್ರುವ್ ರಾಠಿ ಮತ್ತು ಅಭಿಜಿತ್ ದೀಪ್ಕೆ ಪ್ರತಿಭಟಿಸುತ್ತಿದ್ದಾರೆ. ಇವತ್ತು ಬೆಂಗಳೂರಲ್ಲಿ ಪ್ರತಿಭಟನೆ ನಡೆದಿದ್ದು, ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಪ್ರತಿಭಟನೆ ಇದೀಗ ಹಲವು ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ.
- Home
- News
- State
- Karnataka News Live: ಬೆಂಗಳೂರಲ್ಲಿ ಧ್ರುವ್ ರಾಠಿ, ಅಭಿಜಿತ್ ದೀಪ್ಕೆ ಪ್ರತಿಭಟನೆ; ಹಗಲು ಕನಸು ಕಂಡ ಪಾಕ್ ನಟಿ?
Karnataka News Live: ಬೆಂಗಳೂರಲ್ಲಿ ಧ್ರುವ್ ರಾಠಿ, ಅಭಿಜಿತ್ ದೀಪ್ಕೆ ಪ್ರತಿಭಟನೆ; ಹಗಲು ಕನಸು ಕಂಡ ಪಾಕ್ ನಟಿ?

ಶಿವಮೊಗ್ಗ: ಬಿಜೆಪಿಗೆ ಮರಳುವ ಕುರಿತು ರಾಷ್ಟ್ರಭಕ್ತರ ಬಳಗ ಸಂಘಟನೆಯ ನಗರದ ಪದಾಧಿಕಾರಿಗಳು ಸೇರಿದಂತೆ 50 ಪ್ರಮುಖರೊಂದಿಗೆ ಮೂರು ಹಂತಗಳಲ್ಲಿ ಚರ್ಚೆ ನಡೆಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಪಕ್ಷಕ್ಕೆ ಮರಳುವಂತೆ ಆಹ್ವಾನಿಸಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದು ಸಂಘ ಪರಿವಾರ. ಈಗ ಆರ್ಎಸ್ಎಸ್ನ ಪ್ರಮುಖರು ಬಂದು ಬಿಜೆಪಿಗೆ ಸೇರುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 50 ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಬಾರಿ ಸರಿಯಾದ ವ್ಯಕ್ತಿಗಳು ಭರವಸೆ ನೀಡಿದರೆ ಮಾತ್ರ ಚುನಾವಣೆಯಲ್ಲಿ ನಿಂತು ಗೆದ್ದು ಬನ್ನಿ. ಯಾರ್ಯಾರೋ ಹೇಳಿದರು ಎಂದು ಹೋಗಿ, ಕಳೆದ ಬಾರಿಯಂತೆ ಆಗುವುದು ಬೇಡ ಎಂದು ಇವರೆಲ್ಲರೂ ಸಲಹೆ ನೀಡಿದ್ದಾರೆ ಎಂದರು.
Karnataka News Live 8 October 2026 ಬೆಂಗಳೂರಲ್ಲಿ ಧ್ರುವ್ ರಾಠಿ, ಅಭಿಜಿತ್ ದೀಪ್ಕೆ ಪ್ರತಿಭಟನೆ; ಹಗಲು ಕನಸು ಕಂಡ ಪಾಕ್ ನಟಿ?
Karnataka News Live 8 October 2026 K-pop ಅಭಿಮಾನಿಗಳು ಕಾಯುತ್ತಿದ್ದ ಗುಡ್ ನ್ಯೂಸ್ ಇದು - ಭಾರತಕ್ಕೆ ಬರ್ತಿದೆ ಈ ಬಿಗ್ ಫೆಸ್ಟಿವಲ್!
K-pop ಉತ್ಸವಗಳಲ್ಲಿ ಒಂದಾದ Weverse Con Festival ಇದೇ ಮೊದಲ ಬಾರಿಗೆ ಭಾರತಕ್ಕೆ ಬರಲಿದೆ. HYBE ಆಯೋಜಿಸುತ್ತಿರುವ ಎರಡು ದಿನಗಳ ಈ ಅದ್ಧೂರಿ ಸಂಗೀತ ಉತ್ಸವವು ನವದೆಹಲಿಯಲ್ಲಿ ನಡೆಯಲಿದೆ.
Karnataka News Live 8 October 2026 Actor Chikkanna - ಮದುವೆ ಸಂಭ್ರಮದಲ್ಲಿದ್ದ ಚಿಕ್ಕಣ್ಣನಿಗೆ ಶಾಕ್; ಸಪ್ತಪದಿ ತುಳಿದ ಕೆಲ ದಿನಗಳಲ್ಲೇ ಕೋರ್ಟ್ ಬುಲಾವ್!
Karnataka News Live 8 October 2026 'ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ' ಭೀಕರ ಬರಗಾಲ ಪರಿಶೀಲನೆ ವೇಳೆ ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿಕೆ
ಕೊಪ್ಪಳದಲ್ಲಿ ಬರಗಾಲ ಪರಿಶೀಲನೆ ವೇಳೆ ಗೃಹಸಚಿವ ಡಾ.ಜಿ ಪರಮೇಶ್ವರ ಅವರು ಜನರು ಟ್ರೆಡಿಷನಲ್‌ಗಾಗಿ ಗುಳೆ ಹೋಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಂತರ ಇದು ಕಾಫಿ ತೋಟಕ್ಕೆ ಹೋಗುವ ಸಂಪ್ರದಾಯದ ಬಗ್ಗೆ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.
Karnataka News Live 8 October 2026 ಪರಪ್ಪನ ಅಗ್ರಹಾರ ಜೈಲಿನಿಂದಲೇ ಕೋರ್ಟ್ ದಾರಿ ತಪ್ಪಿಸಿದ ಕಿಲ್ಲಿಂಗ್ ಸ್ಟಾರ್ ದರ್ಶನ್, ಸೆಷನ್ಸ್ ಕೋರ್ಟ್ ಬೇಸರ
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಗ್ಯಾಂಗ್, ಹಳೆಯ ವಿಡಿಯೋ ಬಳಸಿ ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳ ನಡೆಯ ಬಗ್ಗೆ ಸೆಷನ್ಸ್ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Karnataka News Live 8 October 2026 SSLC, ದ್ವಿತೀಯ PU ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಈ ಬಾರಿ ಪರೀಕ್ಷೆಗಳು ಯಾವಾಗ ಆರಂಭ?
Karnataka News Live 8 October 2026 ಸಂಕಷ್ಟದಲ್ಲಿದ್ದ ವೈಸ್‌ರಾಯ್ ಹೋಟೆಲ್ಸ್‌ನಲ್ಲಿ ಪಾಲು ಖರೀದಿ ಮಾಡಿದ ಜೀರೋಧಾ ಕಾಮತ್ ಸಹೋದರರು
ಜೀರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರು ದಿವಾಳಿತನದಿಂದ ಹೊರಬಂದಿರುವ ವೈಸ್‌ರಾಯ್ ಹೋಟೆಲ್ಸ್‌ನ ಶೇ. 6.72 ರಷ್ಟು ಶೇರುಗಳನ್ನು ಖರೀದಿಸಿದ್ದಾರೆ. ಈ ಹೂಡಿಕೆಯು ಸುಮಾರು 66.5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
Karnataka News Live 8 October 2026 ಮೈಸೂರು ದಸರಾ 2026 - ಅಂಬಾರಿ ಭಾರ ಹೊರಲಾರದೆ ತಿಣುಕಾಡಿದ ಮಹೇಂದ್ರ, ಅರ್ಧ ದಾರಿಯಲ್ಲೇ ತಾಲೀಮು ಬಂದ್
Karnataka News Live 8 October 2026 ಬೆಂಗಳೂರಲ್ಲಿ ಕಸದ ಮಾದರಿಯಲ್ಲೇ 'ಕರಿದ ಅಡುಗೆ ಎಣ್ಣೆ' ದುಡ್ಡು ಕೊಟ್ಟು ಸಂಗ್ರಹ - ಬಯೋಡೀಸೆಲ್ ತಯಾರಿಕೆಗೆ ಬಿಗ್ ಪ್ಲಾನ್!
Karnataka News Live 8 October 2026 ಇತಿಹಾಸದಲ್ಲಿ ಇದೇ ಮೊದಲು! ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತಾರಣ್ಯದಲ್ಲಿ ಹುಲಿಗಳ ಸಂಖ್ಯೆ ದಾಖಲೆಯ ಹೆಚ್ಚಳ
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ 40ಕ್ಕೆ ಕುಸಿದಿದ್ದ ಹುಲಿಗಳ ಸಂಖ್ಯೆ ಇದೀಗ ಕ್ಯಾಮೆರಾ ಟ್ರ್ಯಾಪ್ ಮೂಲಕ 68ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ. ಇದು ಅರಣ್ಯ ಇಲಾಖೆ, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
Karnataka News Live 8 October 2026 Harmanpreet Kaur - ನಾಯಕತ್ವಕ್ಕೆ ಕಳೆದುಕೊಂಡ ಮೇಲೆ ಕೌರ ಹೀಗೆ ಮಾಡಿದ್ದೇಕೆ? ಇನ್‌ಸ್ಟಾದಲ್ಲಿ ಯಾರಿಗೆ ಕೊಟ್ರು ಟಾಂಗ್
Karnataka News Live 8 October 2026 ‘ಲಕ್ಷ್ಮೀ ಬಾರಮ್ಮ’ದಲ್ಲಿ ನಟಿಸಿದ್ದ ಈ ನಟಿ ಈಗ ಹೀರೋಯಿನ್ - ‘ಭಾವಾಂತರ’ದಲ್ಲಿ ಯಾರು ಈ ‘ರಾಧಾ’?
ಕನ್ನಡ ಕಿರುತೆರೆಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ತನ್ವಿ ರಾವ್ ಇದೀಗ ‘ಭಾವಾಂತರ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಕಾರ್ತಿಕ್ ಶರ್ಮಾ..
Karnataka News Live 8 October 2026 KPSC Scam - 80 ಕೀ ಆನ್ಸರ್‌ಗೆ ತಲಾ 50 ಲಕ್ಷ ಹಣ ಕೇಳಿದ್ದ ಶಿವು ಮತ್ತು ಗೀತಾ!
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರು ಅಭ್ಯರ್ಥಿಗಳಿಂದ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಇಡಿ ತನಿಖೆಯಿಂದ ಬಹಿರಂಗವಾಗಿದೆ.
Karnataka News Live 8 October 2026 ಮಮಿತಾ ಬೈಜುಗೆ ಸಿಕ್ತು ಬಿಗ್ ಆಫರ್? ರಿಷಬ್ ಶೆಟ್ಟಿ ಜೊತೆ ನಟಿಸಲಿದ್ದಾರಾ ‘ಪ್ರೇಮಲು’ ಬೆಡಗಿ!
‘ಪ್ರೇಮಲು’ ಸಿನಿಮಾದ ಮೂಲಕ ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಮಮಿತಾ ಬೈಜು ಇದೀಗ ದೊಡ್ಡ ಪ್ರಾಜೆಕ್ಟ್ ಮೂಲಕ ಟಾಲಿವುಡ್‌ಗೆ ಅಧಿಕೃತ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Karnataka News Live 8 October 2026 2 ಮಕ್ಕಳ ತಂದೆಯೊಂದಿಗೆ 5 ವರ್ಷ ಸಂಬಂಧ, ತನ್ನ ಜೀವನವನ್ನು ಹಾಳುಮಾಡಿಕೊಂಡ ಖ್ಯಾತ ನಟಿ!
ವಿವಾಹಿತ ಪುರುಷರೊಂದಿಗೆ ಸಂಬಂಧದಲ್ಲಿದ್ದ ಅನೇಕ ನಟಿಯರು ಉದ್ಯಮದಲ್ಲಿದ್ದಾರೆ. ಈಗ ಅಂತಹ ಒಬ್ಬ ನಟಿ ಕೂಡ ಸುದ್ದಿಯಲ್ಲಿದ್ದಾರೆ, ಈ ನಟಿಗೆ 2 ಮಕ್ಕಳ ತಂದೆಯೊಂದಿಗೆ ಸಂಬಂಧವಿತ್ತು. ಇದರಿಂದಾಗಿ ಈ ನಟಿ ತನ್ನ ಜೀವನವನ್ನು ಹಾಳು ಮಾಡಿಕೊಂಡರು. ಈಗ ನಟಿ ಆ ಸಂಬಂಧದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
Karnataka News Live 8 October 2026 ಹೊನ್ನಾವರದಲ್ಲಿ ಅರಣ್ಯ ಒತ್ತುವರಿದಾರರಿಗೆ ಬಿಗ್ ಶಾಕ್ - ಒಂದೇ ದಿನ 10ಕ್ಕೂ ಹೆಚ್ಚು ಅಕ್ರಮ ಜಾಗ ತೆರವು
ಹೊನ್ನಾವರ ತಾಲೂಕಿನಲ್ಲಿ ಅರಣ್ಯ ಇಲಾಖೆಯು ಅರಣ್ಯ ಭೂಮಿ ಒತ್ತುವರಿ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದು, 10ಕ್ಕೂ ಹೆಚ್ಚು ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸಿದೆ. ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಬೆಳೆಗಳು ಹಾಗೂ ಕೊಟ್ಟಿಗೆಯನ್ನು ಧ್ವಂಸ ಮಾಡಿದ್ದಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka News Live 8 October 2026 ರಂಗಾಯಣ ರಘು ಅವರ ಈ ಗುಣಕ್ಕೆ ಫಿದಾ ಆದ ರಚಿತಾ ರಾಮ್ - ‘ಪ್ರೇಮದ ಊರಲಿ’ ಬಗ್ಗೆ ಹೇಳಿದ್ದೇನು?
ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ನಟಿ ರಚಿತಾ ರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಕಥೆ, ನಿರೂಪಣೆ ಹಾಗೂ ಕಲಾವಿದರ ಅಭಿನಯವನ್ನು ಶ್ಲಾಘಿಸಿರುವ ಡಿಂಪಲ್ ಕ್ವೀನ್..
Karnataka News Live 8 October 2026 ಭಸ್ಮಾಸುರನ ತಪಸ್ಸು, ಶಿವನಿಂದ ವರ - ಸೈಕಾಲಜಿ, ಫಿಲಾಸಫಿ, ಸೈನ್ಸ್ ಬಗ್ಗೆ ಯಾಣದಲ್ಲಿ ‘ಕನ್ನಡತಿ’ ನಟಿ ಪೋಸ್ಟ್!
‘ಕನ್ನಡತಿ’ ಹಾಗೂ ‘ಪುಟ್ಟಗೌರಿ ಮದುವೆ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ರಂಜನಿ ರಾಘವನ್ ಇದೀಗ ಉತ್ತರ ಕನ್ನಡದ ಯಾಣಕ್ಕೆ ಭೇಟಿ ನೀಡಿದ್ದಾರೆ. ಇಟಲಿ ಪ್ರವಾಸದ ಬಳಿಕ ಯಾಣ ಪ್ರವಾಸ ಕೈಗೊಂಡಿದ್ದಾರೆ.
Karnataka News Live 8 October 2026 Koppal - 15 ರೂ.ಗೆ 4 ಇಡ್ಲಿ ಕೊಡುವ ಗಂಗಾವತಿ 8ನೇ ಕ್ಲಾಸ್ ಹುಡುಗನ ದಿನದ ಸಂಪಾದನೆ ಎಷ್ಟು?
ಕೊಪ್ಪಳದ ಗಂಗಾವತಿಯ 8ನೇ ತರಗತಿಯ ಬಾಲಕನೊಬ್ಬ ಪ್ರತಿದಿನ ಮುಂಜಾನೆ ಎದ್ದು ತನ್ನ ತಾಯಿಯೊಂದಿಗೆ ಇಡ್ಲಿ ತಯಾರಿಸಿ, ಶಾಲೆಗೆ ಹೋಗುವ ಮುನ್ನ ಮಾರಾಟ ಮಾಡುತ್ತಾನೆ. ನಿತ್ಯ ವ್ಯಾಪಾರ ಮಾಡುವ ಈತನ ಶ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಲವರಿಗೆ ಸ್ಫೂರ್ತಿಯಾಗಿದೆ.
Karnataka News Live 8 October 2026 ಕಾರವಾರ ಬೀಚ್‌ನಲ್ಲಿ ಸಮುದ್ರದಿಂದ ನೆಲದ ಮೇಲೆ ಬಂದ ಹಡಗು! ನೀರು-ನೆಲದಲ್ಲೂ ಚಲಿಸುವ ನೌಕೆ ಕಂಡು ದಂಗಾದ ಜನ!
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಎರಡು ಅತ್ಯಾಧುನಿಕ ಹೋವರ್‌ಕ್ರಾಫ್ಟ್ ನೌಕೆಗಳು ಲಂಗರು ಹಾಕಿವೆ. ನೆಲ ಮತ್ತು ಜಲ ಎರಡರಲ್ಲೂ ಚಲಿಸಬಲ್ಲ ಈ ಉಭಯಚರ ನೌಕೆಗಳನ್ನು ನೋಡಲು ಪ್ರವಾಸಿಗರು ಮುಗಿಬಿದ್ದಿದ್ದಾರೆ.