ಟೀಮ್ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎಲ್ಲಾ ಸ್ವರೂಪದ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್ ತೀವ್ರ ಸಂಚಲನ ಮೂಡಿಸಿದೆ.

ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಮಹಿಳಾ ಟೀಮ್ ಇಂಡಿಯಾದ ನಾಯಕತ್ವದ ಬಗ್ಗೆ ಒಂದು ದೊಡ್ಡ ನಿರ್ಧಾರ ಹೊರಬಿದ್ದಿತು. ಟೀಮ್ ಇಂಡಿಯಾದ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್ ಎಲ್ಲಾ ಸ್ವರೂಪದ ತಮ್ಮ ಆಟಕ್ಕೆ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆ ನಂತರ, ತಂಡದ ನಾಯಕತ್ವ ಸ್ಮೃತಿ ಮಂಧಾನ ಅವರು ವಹಿಸಿಕೊಂಡಿದ್ದಾರೆ. ಅದು ಮುಂದಿನ ಮಾತು ಆದರೆ, ಈಗ ಅವರು ನೀಡಿದ ಇನ್‌ಸ್ಟಾಗ್ರಾಮ ಪೋಸ್ಟ್‌ ಒಂದು ಹೊರಬಿದ್ದಿದ್ದು ಸಂಚಲನಕ್ಕೆ ಕಾರಣವಾಗಿದೆ. ಅದೇನು ಎನ್ನುವುದನ್ನು ನೋಡೋಣ ಬನ್ನಿ.

ಮೂರು ಸ್ವರೂಪಕ್ಕೆ ಗುಡ್‌ ಬೈ!

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಅಧ್ಯಕ್ಷತೆಯಲ್ಲಿ ಗುವಾಹಟಿಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ಹರ್ಮನ್‌ಪ್ರೀತ್‌ಗೆ ಸ್ಪಷ್ಟಪಡಿಸಲಾಯಿತು. ಇದರ ನಂತರ, ಹರ್ಮನ್‌ಪ್ರೀತ್ ಸ್ವತಃ ಮೂರು ಸ್ವರೂಪಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಬದುಕನ್ನು ವರ್ಣಿಸುವ ಅವರ ಒಂದು ಪೋಸ್ಟ್ ಈಗ ಹಲವರಿಗೆ ಟಾಂಗ್ ನೀಡಿದಂತೆ ಇದೆ. ಹಾಗಾದರೆ ಅಲ್ಲಿ ಇದ್ದದ್ದು ಏನು?

ಜಿಂದಗಿ ಗುಲ್ಜಾರ್‌ ಹೈ ಎಂದ ಕೌರ್!

ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಪಂದ್ಯಗಳ ನಾಯಕತ್ವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹರ್ಮನ್‌ಪ್ರೀತ್ ಕೌರ್ ಅವರಿಗೆ ನೀಡಲಾಗಿತ್ತು, ಆದರೆ ಅವರು ಎರಡೂ ಸ್ಥಾನಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಎಲ್ಲಾ ಚರ್ಚೆಗಳು ನಡೆಯುತ್ತಿರುವಾಗಲೇ, ಹರ್ಮನ್ ಪ್ರೀತ್ ಕೌರ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಚರ್ಚೆಯ ವಿಷಯವಾಗುತ್ತಿದೆ. 'ಜಿಂದಗಿ ಗುಲ್ಜಾರ್ ಹೈ...' ಎಂದು ಹೇಳುತ್ತಾ, ಹರ್ಮನ್ ಪ್ರೀತ್ ಕೌರ್ ತಮ್ಮ ಮನೆಯ ಟೆರೇಸ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ.

ಕೌರ ಹೇಳಿದ್ದೇನು?

ಹರ್ಮನ್‌ಪ್ರೀತ್ ಎರಡೂ ಕೈಗಳಲ್ಲಿ ಟೆಡ್ಡಿ ಬೇರ್ ಹಿಡಿದು ಮುಖವನ್ನು ಮರೆಮಾಡಿಕೊಂಡಿರುವ ಫೋಟೋ. ಆ ಸಮಯದಲ್ಲಿ, ಅವರು 'ತು ನಾ ಜಾನೆ ಪಾರಿ ಹೈ ಖುದಾ' ಹಾಡಿನೊಂದಿಗೆ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಇದು ಅನೇಕರ ಹುಬ್ಬುಗಳನ್ನು ಎಬ್ಬಿಸಿದೆ. ಹರ್ಮನ್‌ಪ್ರೀತ್ ಕೌರ್ ನಿಖರವಾಗಿ ಏನನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದಾರೆ? ಈ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಮೂಡಿದ ಅನುಮಾನ ಏನು? 
ಆದರೆ ಇಲ್ಲಿ ಮೂಡಿದ ಅನುಮಾನ ಏನು? ಎಂದು ಕೇಳಿದರೆ ಅರ್ಥವಾಗುವ ವಿಷಯ ಏನೆಂದರೆ, ಮೆನ್ಸ್‌ ಟೀಂಗೆ ಮಾಡಿದಂತೆ ಇಲ್ಲೂ, ಬದಲಾವಣೆ ಚಾನ್ಸ್‌ ಇತ್ತು ಅನ್ನುವುದು ಕಾಡಿತ್ತು. ಅದಕ್ಕೆ ಈಗ ಉತ್ತರವೂ ಸಿಕ್ಕಂತಾಗಿದೆ. ಆದರೆ ಅಲ್ಲಿ ಸೂರ್ಯ ಹೊರಗುಳಿದಂತೆ, ಕೌರ್‌ ಹೊರಗುಳಿಯಲಿದ್ದಾರಾ? ಎನ್ನುವ ಪ್ರಶ್ನೆ ಈಗ ಎದುರಾಗಿದೆ.