ಕರ್ನಾಟಕ ಎಜುಕೇಷನ್ ಬೋರ್ಡ್‌ 2027ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಿಯುಸಿ ಪರೀಕ್ಷೆಗಳು ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ನಡೆದರೆ, ಎಸ್‌ಎಸ್‌ಎಲ್ಸಿ ಪರೀಕ್ಷೆಗಳು ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷಾ ಸಿದ್ಧತೆ ನಡೆಸಲು ಸೂಚಿಸಲಾಗಿದೆ.

ಕರ್ನಾಟಕ ಎಜುಕೇಷನ್ ಬೋರ್ಡ್‌ ಪಿಯು ಹಾಗೂ ಎಸ್‌ಎಸ್‌ಎಲ್ಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. 2027ರ ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ–1 ನಡೆಯಲಿದೆ. ಫೆಬ್ರವರಿ 27ರಂದು ಕನ್ನಡ/ಅರೇಬಿಕ್ ಪರೀಕ್ಷೆಯೊಂದಿಗೆ ಆರಂಭವಾಗಿ, ಮಾರ್ಚ್ 17ರಂದು ಹಿಂದಿ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಪರೀಕ್ಷಾ ಸಮಯ: ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿವೆ. (ಹಿಂದೂಸ್ತಾನಿ ಸಂಗೀತ ಮತ್ತು ಕೆಲವು ವೃತ್ತಿಪರ ವಿಷಯಗಳಿಗೆ ಮಾತ್ರ 2 ಗಂಟೆ 15 ನಿಮಿಷಗಳ ಅವಧಿ ಇರಲಿದೆ).

ಪ್ರಮುಖ ದಿನಾಂಕಗಳು!

ಮಾರ್ಚ್ 6 ರಂದು ಮಹಾಶಿವರಾತ್ರಿ ಹಾಗೂ ಮಾರ್ಚ್ 10 ರಂದು ರಂಜಾನ್ ಹಿನ್ನೆಲೆಯಲ್ಲಿ ಪರೀಕ್ಷೆ ಇರುವುದಿಲ್ಲ. ಇನ್ನು ವಿಷಯವಾರು ಪ್ರಮುಖ ದಿನಾಂಕಗಳೆಂದರೆ, ಮಾ. 1ಕ್ಕೆ ಇಂಗ್ಲೀಷ್, 2ಕ್ಕೆ ಪ್ರಾದೇಶಿಕ ಭಾಷೆಗಳು, ಮಾ. 3ರಂದು ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಮಾ. 4ರಂದು ಸಮಾಜಶಾಸ್ತ್ರ, ಭೌತಶಾಸ್ತ್ರ ಮಾ. 5ಕ್ಕೆ ಲೆಕ್ಕಶಾಸ್ತ್ರ ಮಾ. 8ರಂದು ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗಣಿತ, ಮಾ. 9: ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ ಮಾ. 11: ಹಿಂದೂಸ್ತಾನಿ ಸಂಗೀತ ಹಾಗೂ ವೃತ್ತಿಪರ ವಿಷಯಗಳು, ಮಾ. 12: ವ್ಯವಹಾರ ಅಧ್ಯಯನ, ಗಣಿತ ಮಾ. 13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ, ಮಾ. 15: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ, ಮಾ. 16: ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಸಾಲಿನ SSLC ಪರೀಕ್ಷೆ-1 ತಾತ್ಕಾಲಿಕ ವೇಳಾಪಟ್ಟಿ!

ಇನ್ನು 2027ರ ಮಾರ್ಚ್ 22 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಆರಂಭವಾಗಲಿದೆ. ವಿಷಯವಾರು ಪ್ರಮುಖ ದಿನಾಂಕಗಳನ್ನು ನೋಡುವುದಾದರೆ, ಪ್ರಥಮ ಭಾಷೆ (ಕನ್ನಡ), ಮಾ. 27: ದ್ವಿತೀಯ ಭಾಷೆ, ಮಾ. 30: ಗಣಿತ, ಸಮಾಜಶಾಸ್ತ್ರ ಏಪ್ರಿಲ್ 2: ತೃತೀಯ ಭಾಷೆ, NSQF, ಏಪ್ರಿಲ್ 3: JTS, ಅರ್ಥಶಾಸ್ತ್ರ, ಏಪ್ರಿಲ್ 5: ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.

(ಗಮನಿಸಿ: ಈ ಎರಡೂ ವೇಳಾಪಟ್ಟಿಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಅಧಿಕೃತವಾಗಿ ಪ್ರಕಟಿಸಿದೆ).

ಸಿದ್ಧರಾಗಿ ವಿದ್ಯಾರ್ಥಿಗಳೇ!

ಇನ್ನೇನು ವೇಳಾಪಟ್ಟಿ ಬಿಡುಗಡೆಯಾಗಿದೆ, ನಿಮ್ಮ ಭವಿಷ್ಯ ಬರೆಯುವ ದಿನಗಳ ಬಹಳ ದೂರವಿಲ್ಲ, ಪರಿಶ್ರಮಕ್ಕೆ ಪ್ರತಿಫಲ ಇದ್ದೇ ಇದೆ. ಆದ್ದರಿಂದ ದಿನ ಗಳಿಯದೆ ಓದಿನ ತಯಾರಿಗೆ ಮುಂದಾಗಿ, ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಬೇಕಾದ ಎಲ್ಲ ಸಿದ್ದತೆಗಳನ್ನು ಇಂದೇ ತಾಯಾರು ಮಾಡಿಕೊಳ್ಳಿ. ನಾಳೆಯ ಮಾತು ಬೇಡ. ನಿಮ್ಮ, ನಿಮ್ಮ ಗೆಲುವು. ಒಳ್ಳೆಯದಾಗಲಿ. ಗೆದ್ದು ಬರಲಿ ಪರಿಶ್ರಮ.