ವಿವಾಹಿತ ಪುರುಷರೊಂದಿಗೆ ಸಂಬಂಧದಲ್ಲಿದ್ದ ಅನೇಕ ನಟಿಯರು ಉದ್ಯಮದಲ್ಲಿದ್ದಾರೆ. ಈಗ ಅಂತಹ ಒಬ್ಬ ನಟಿ ಕೂಡ ಸುದ್ದಿಯಲ್ಲಿದ್ದಾರೆ, ಈ ನಟಿಗೆ 2 ಮಕ್ಕಳ ತಂದೆಯೊಂದಿಗೆ ಸಂಬಂಧವಿತ್ತು. ಇದರಿಂದಾಗಿ ಈ ನಟಿ ತನ್ನ ಜೀವನವನ್ನು ಹಾಳು ಮಾಡಿಕೊಂಡರು. ಈಗ ನಟಿ ಆ ಸಂಬಂಧದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ನಡುವೆ ಪ್ರೀತಿ, ಪ್ರೇಮ, ಅಫೇರ್ ಹುಟ್ಟುವುದು ಹೊಸದೇನಲ್ಲ. ಆದರೆ ಮದುವೆಯಾಗಿ ಸಂಸಾರ ಹೊಂದಿರುವ ವ್ಯಕ್ತಿಯನ್ನು ಪ್ರೀತಿಸಿ, ಕೊನೆಗೆ ಕಣ್ಣೀರಲ್ಲಿ ಕೈತೊಳೆಯುವ ನಟಿಯರ ಸಂಖ್ಯೆಯೂ ಕಡಿಮೆಯಿಲ್ಲ. ಇದೀಗ ಅಂತಹದ್ದೇ ನೋವಿನ ಕಥೆಯನ್ನು ಭೋಜ್‌ಪುರಿ ಚಿತ್ರರಂಗದ ಟಾಪ್ ನಟಿ ಕಾಜಲ್ ರಾಘವಾನಿ (Kajal Raghwani) ಬಹಿರಂಗವಾಗಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಬ್ಬರು ಮಕ್ಕಳ ತಂದೆಯಾಗಿದ್ದ ನಟನ ಜೊತೆಗಿನ ಪ್ರೇಮ ಸಂಬಂಧ ತನ್ನ ವೈಯಕ್ತಿಕ ಜೀವನವನ್ನೇ ಅಸ್ತವ್ಯಸ್ತಗೊಳಿಸಿತು ಎಂದು ನಟಿ ಭಾವುಕರಾಗಿ ಹೇಳಿಕೊಂಡಿದ್ದಾರೆ.
‘ರೈಸ್ ಅಂಡ್ ಫಾಲ್’ ಶೋನಲ್ಲಿ ನೋವು ಬಿಚ್ಚಿಟ್ಟ ನಟಿ:
ಇತ್ತೀಚೆಗೆ ಮನೀಶ್ ಕಶ್ಯಪ್ ನಡೆಸಿಕೊಡುವ ಜನಪ್ರಿಯ ‘ರೈಸ್ ಅಂಡ್ ಫಾಲ್’ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಾಜಲ್ ರಾಘವಾನಿ, ಭೋಜ್‌ಪುರಿ ಚಿತ್ರರಂಗದ ಸೂಪರ್‌ಸ್ಟಾರ್ ಖೇಸರಿ ಲಾಲ್ ಯಾದವ್ (Khesari Lal Yadav) ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇವರಿಬ್ಬರ ಆನ್‌ಸ್ಕ್ರೀನ್ ಜೋಡಿ ಹಿಟ್ ಆಗಿದ್ದಷ್ಟೇ ಅಲ್ಲದೆ, ಆಫ್‌ಸ್ಕ್ರೀನ್‌ನಲ್ಲಿಯೂ ಹಲವು ವರ್ಷಗಳ ಕಾಲ ಇಬ್ಬರ ನಡುವೆ ಡೇಟಿಂಗ್ ನಡೆದಿತ್ತು.
ಈ ಸಂದರ್ಶನದಲ್ಲಿ ಮನೀಶ್, 'ಖೇಸರಿ ಲಾಲ್ ಅವರಿಗೆ ಆಗಲೇ ಮದುವೆಯಾಗಿ ಮಕ್ಕಳಿದ್ದರೂ ನೀವು ಅವರನ್ನೇಕೆ ಪ್ರೀತಿಸಿದಿರಿ?' ಎಂದು ನೇರ ಪ್ರಶ್ನೆ ಕೇಳಿದ್ದಾರೆ.
‘ನಾನು ಮೊದಲ ಹುಡುಗಿಯಲ್ಲ...’ ಎಂದು ಕಾಜಲ್ ಪ್ರತ್ಯುತ್ತರ ನಿಡಿದ್ದಾರೆ. ಮುಂದುವರೆದು, 'ಮದುವೆಯಾದ ಪುರುಷನೊಂದಿಗೆ ಅಫೇರ್ ಇಟ್ಟುಕೊಂಡ ಮೊದಲ ಹುಡುಗಿ ನಾನೇನಲ್ಲ. ಸಮಾಜದಲ್ಲಿ ಎಷ್ಟೋ ಯುವತಿಯರು ಮದುವೆಯಾದವರ ಪ್ರೀತಿಯಲ್ಲಿ ಬೀಳುತ್ತಾರೆ. ನಾವು ಜೊತೆಯಾಗಿ ನಿರಂತರವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದೆವು. ಆ ವೇಳೆ ಪರಸ್ಪರ ಆಕರ್ಷಣೆ ಉಂಟಾಯಿತು. ಆ ಆಕರ್ಷಣೆ ಪ್ರೀತಿಗೆ ತಿರುಗಿತು. ಇದರಲ್ಲಿ ನಾನು ಇನ್ನೇನು ಹೇಳಲು ಸಾಧ್ಯ?' ಎಂದಿದ್ದಾರೆ.
5 ವರ್ಷ ಜೊತೆಗಿದ್ದಿದ್ದು ಸುಮ್ಮನೆನಾ?
ಮುಂದುವರಿದು ಮಾತನಾಡುತ್ತಾ, 'ಖೇಸರಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರಾ?' ಎಂಬ ಪ್ರಶ್ನೆಗೆ ಭಾವುಕರಾದ ಕಾಜಲ್, 'ಅವರಿಗೆ ಪ್ರೀತಿ ಇರಲಿಲ್ಲ ಎಂದಿದ್ದರೆ ಬರೋಬ್ಬರಿ 5 ವರ್ಷಗಳ ಕಾಲ ನನ್ನ ಜೊತೆ ಯಾಕೆ ಇರುತ್ತಿದ್ದರು? ನನ್ನ ಹಾಗೆ ಅವರನ್ನು ಪ್ರೀತಿಸುವ ಹುಡುಗಿ ಅವರಿಗೆ ಇನ್ನ್ಯಾವತ್ತೂ ಸಿಗಲು ಸಾಧ್ಯವಿಲ್ಲ. ಅವರು ಇಡೀ ಜೀವಮಾನ ನನ್ನನ್ನು ನೆನಪಿಸಿಕೊಳ್ಳುತ್ತಾರೆ. ಇವತ್ತಿಗೂ ಅವರಿಗೆ ನನ್ನ ನೆನಪು ಕಾಡುತ್ತಿರಬಹುದು' ಎಂದು ಕಣ್ಣೀರು ಹಾಕಿದ್ದಾರೆ.
ಭೋಜ್‌ಪುರಿಯ ಟಾಪ್ ನಟಿ ಕಾಜಲ್:
ಕಾಜಲ್ ರಾಘವಾನಿ ಭೋಜ್‌ಪುರಿ ಸಿನಿರಂಗದ ಮುಂಚೂಣಿ ನಾಯಕಿಯರಲ್ಲಿ ಒಬ್ಬರು. ತಮ್ಮ ನಟನೆ ಮತ್ತು ನೃತ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಾಜಲ್, ಖೇಸರಿ ಲಾಲ್ ಯಾದವ್ ಜೊತೆ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಇವರ ಈ ಪ್ರೇಮಕಥೆ ಮಾತ್ರ ಸುಖಾಂತ್ಯ ಕಾಣದೆ, ಅಂತಿಮವಾಗಿ ಕಹಿ ನೆನಪಾಗಿ ಉಳಿದಿದೆ.


