- Home
- News
- State
- Karnataka News Live: ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?
Karnataka News Live: ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?

ಕೊಪ್ಪಳ: ಮದುವೆಗೂ ಮುನ್ನವೇ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಮಧ್ಯರಾತ್ರಿ ಕೊರೆಯುವ ಚಳಿಯಲ್ಲಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಳಿ ಮುಳ್ಳು ಬೇಲಿಯಲ್ಲಿ ಬಿಸಾಡಲಾಗಿದ್ದು, ಭದ್ರತಾ ಸಿಬ್ಬಂದಿ ಆ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಆರೋಗ್ಯವಾಗಿದೆ.
ಸೋಮವಾರ ಮಧ್ಯರಾತ್ರಿ 1.10ರ ಸಮಯದಲ್ಲಿ ಹುಲಿಗೆಮ್ಮ ದೇವಸ್ಥಾನದ ಹಿಂಭಾಗದಲ್ಲಿ ಭದ್ರತಾ ಸಿಬ್ಬಂದಿ ಶಿವರಾಜ ಹಿಟ್ನಾಳ ಹಾಗೂ ಮಂಜುನಾಥ ಅಗಳಿಕೇರಿ ಅವರಿಗೆ ಮಗು ಅಳುತ್ತಿರುವ ಧ್ವನಿ ಕೇಳಿಸಿತು. ತಕ್ಷಣ ಮಕ್ಕಳ ಸಹಾಯವಾಣಿ ಮತ್ತು ವೈದ್ಯರು ಹಾಗೂ ದೇವಸ್ಥಾನ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಮಾಹಿತಿ ನೀಡಿದರು. ತಕ್ಷಣ ಮಗುವಿಗೆ ಪಕ್ಕದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆಗ ತಾನೆ ಜನಿಸಿದ್ದ ಮಗುವನ್ನು ಬೇಲಿಯಲ್ಲಿ ಎಸೆದಿದ್ದರಿಂದ ತರಚಿದ ಗಾಯಗಳಾಗಿವೆ. ಅಲ್ಲದೆ ಮಗುವಿನ ಮೈಗೆ ಮಣ್ಣು, ಹುಲ್ಲು, ಕಡ್ಡಿ ಮೆತ್ತಿಕೊಂಡಿದೆ. ಅದೆಲ್ಲವನ್ನು ಸ್ವಚ್ಛಗೊಳಿಸಲಾಗಿದೆ. ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಆರೈಕೆಯಲ್ಲಿ ಮಗು ಆರೋಗ್ಯವಾಗಿದೆ.
Karnataka News Live 31 December 2025ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?
Karnataka News Live 31 December 2025ಜ.4ಕ್ಕೆ ಪ್ರಕೃತಿ ಪ್ರತಿಬಂಬಿಸುವ 23ನೇ ಚಿತ್ರಸಂತೆ
ಬೆಂಗಳೂರು ನಗರ ಪರಿಸರದ ಹಿಂದಿನ ಮತ್ತು ವರ್ತಮಾನ ಪ್ರತಿಬಿಂಬಿಸುವ ‘ಪ್ರಕೃತಿ’ ವಿಷಯಾಧಾರಿತ ಕಲಾ ಪ್ರದರ್ಶನ ಈ ಬಾರಿಯ 23ನೇ ಚಿತ್ರಸಂತೆಯ ವಿಶೇಷ. ಜ.4ರಂದು ಕುಮಾರಕೃಪ ರಸ್ತೆ, ಕ್ರೆಸೆಂಟ್ ರಸ್ತೆ, ಚಿತ್ರಕಲಾ ಪರಿಷತ್ತು, ಸೇವಾ ದಳದ ಆವರಣದಲ್ಲಿ ನಡೆಯಲಿರುವ ಚಿತ್ರಸಂತೆ
Karnataka News Live 31 December 20252026ರಲ್ಲೇ ಮಾತನಾಡುತ್ತೇನೆ - ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ನಾಯಕತ್ವದ ಬಗ್ಗೆ 2026ರಲ್ಲಿ ಮಾತನಾಡುವುದಾಗಿ ಹೇಳಿ ಕುತೂಹಲ ಮೂಡಿಸಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಅವರ ಸಿಎಂ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ .
Karnataka News Live 31 December 2025ಚಲಿಸುತ್ತಿದ್ದ ಬೈಕ್‌ನಲ್ಲಿಯೇ ಸುಟ್ಟು ಕರಕಲಾದ ಯುವಕ; ಹುಟ್ಟುವಾಗಲೇ ಕರುಳು ಹೊರಗಿದ್ದ ಶಿಶು ಸಾವು
ಬೈಕ್ ಸಮೇತ ಯುವಕನೋರ್ವ ಸಜೀವ ದಹನವಾಗಿದ್ದು, ಸಾವಿನ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಹಾಸನದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಹುಬ್ಬಳ್ಳಿಯಲ್ಲಿ ನವಜಾತ ಶಿಶುವಿನ ಸಾವು ಹಾಗೂ ಮಂಡ್ಯ ವಿವಿ ಆವರಣದಲ್ಲಿ ಡ್ರಗ್ಸ್ ಸಿರಿಂಜ್‌ಗಳು ಪತ್ತೆಯಾದ ಘಟನೆಗಳು ವರದಿಯಾಗಿವೆ.
Karnataka News Live 31 December 2025ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜು- ಸಂಚಾರಕ್ಕೆ ಪರ್ಯಾಯ ಮಾರ್ಗ
ಹೊಸ ವರ್ಷಾಚರಣೆಯ ಪ್ರಮುಖ ಜನಾಕರ್ಷಣೆ ಕೇಂದ್ರ ಬಿಂದುವಾದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
Karnataka News Live 31 December 2025ಹಸಿರು ಮಾರ್ಗಕ್ಕೆ ಬರಲಿವೆ 21 ಹೊಸ ರೈಲುಗಳು
ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ (ಪೇಸ್-1) ಕಾರ್ಯಾಚರಣೆಯಲ್ಲಿದ್ದ 17 ರೈಲುಗಳು ನೇರಳೆ ಮಾರ್ಗಕ್ಕೆ ಸ್ಥಳಾಂತರ ಆಗಲಿವೆ. ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ 21 ರೈಲುಗಳು ನಿಯೋಜನೆ ಆಗಲಿದ್ದು, ರೈಲುಗಳ ಓಡಾಟ ವೇಗಗೊಂಡು ಪ್ರಯಾಣಿಕರಿಗೆ ಅನುಕೂಲ ಆಗಲಿದೆ.