2025ರಲ್ಲಿ ರಾಮನಗರ ಜಿಲ್ಲೆಯು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾಯಿತು. ಬಿಡದಿ ಟೌನ್ ಶಿಪ್ ಯೋಜನೆ, ರಾಜಕೀಯ ಮೇಲಾಟ, ಮಾನವ-ವನ್ಯಜೀವಿ ಸಂಘರ್ಷ, ಅಪಘಾತಗಳು ಮತ್ತು ಸಾವು-ನೋವುಗಳು ವರ್ಷವಿಡೀ ಸುದ್ದಿಯಲ್ಲಿದ್ದವು. ಇದೇ ವರ್ಷ ನಟಿ ಬಿ. ಸರೋಜಾದೇವಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಮ್ಮನ್ನಗಲಿದರು.
ವರದಿ: ಎಂ.ಅಫ್ರೋಜ್ ಖಾನ್
ರಾಮನಗರ: ಪರ ವಿರೋಧದ ನಡುವೆ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆ, ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್, ಭೂ ಮಾಲೀಕರಿಂದ ಮುಂದುವರೆದ ಪ್ರತಿಭಟನೆ, ಡೀಸಿ ಕಚೇರಿಯಲ್ಲಿ ನಿಷೇಧಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ನಿರಂತರವಾಗಿ ಚಳವಳಿ ನಡೆಸಿದ ರೈತರ ಬಂಧನ ಬಿಡುಗಡೆ. ನಿಲ್ಲದ ಮಾನವ - ವನ್ಯಜೀವಿ ಸಂಘರ್ಷ, ನಾನಾ ಅವಘಡಗಳಲ್ಲಿ ಪ್ರಾಣ ತೆತ್ತುತ್ತಿರುವ ಕಾಡಾನೆ, ಚಿರತೆಗಳು. ಬೆಂ - ಮೈ ಎಕ್ಸ್ ಪ್ರೆಸ್ ವೇ ಸೇರಿ ಹಲವೆಡೆ ರಸ್ತೆ ಅಪಘಾತಗಳು, ಕೈಗಾರಿಕಾ ಪ್ರದೇಶಗಳಲ್ಲಿ ಬೆಂಕಿ ಅವಘಡಗಳು ಸಾವು - ನೋವು. ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳಿಗೆ ಮುಖಭಂಗ.
ಕೇತಗಾನಹಳ್ಳಿ ಬಳಿ ಸರ್ಕಾರಿ ಭೂಮಿ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿ 11 ಮಂದಿಗೆ ನೋಟಿಸ್ ಜಾರಿ. ಮೇಕೆದಾಟು ಸಮತೋಲನ ಜಲಾಶಯ ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್. ಬಹುಭಾಷ ನಟಿ ಬಿ.ಸರೋಜಾದೇವಿ ಮತ್ತು ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಮರೆಯಾದರು...
ಇದಿಷ್ಟು 2025ರ ಪ್ರಮುಖ ಘಟನಾವಳಿಗಳು.
ಜ.1 - ಹೊಸ ವರ್ಷ ಸಂಭ್ರಮಾಚರಣೆ ದಿನವೇ 6 ಪ್ರತ್ಯೇಕ ಪ್ರಕರಣಗಳಲ್ಲಿ 8 ಸಾವು
ಜ.2 - ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶ್ರೀನಿವಾಸ ಗೌಡ ನಿಯೋಜನೆ
ಜ.4- ಚನ್ನಪಟ್ಟಣ ನಗರಸಭೆ ಆಡಳಿತ ಕೈ ವಶ
ಜ.4- ಬಿಡದಿ ತ್ಯಾಜ್ಯ ವಿದ್ಯುತ್ ಸ್ಥಾವರದಲ್ಲಿ ಬಿಸಿ ಬೂದಿ ಸಿಡಿದು ಐವರ ಕಾರ್ಮಿಕರ ದುರ್ಮರಣ
ಜ.5- ಪ್ರಯಾಣದರ ಹೆಚ್ಚಳ ಖಂಡಿಸಿ ವಾಟಾಳ್ ನಾಗರಾಜ್ ಬಸ್ಸಿನಲ್ಲಿ ಪ್ರಯಾಣಿಸಿ ಪ್ರತಿಭಟನೆ
ಜ.6-ನಿಷೇಧಾಜ್ಞೆ ವಿರೋಧಿಸಿ ಡಿಸಿ ಕಚೇರಿ ಮುತ್ತಿಗೆಗೆ ವಿಫಲ ಯತ್ನ
ಜ.9-ರಾಮನಗರ ತಾಲೂಕು ಅಚ್ಚಲು ಗ್ರಾಮದ ಬಳಿ ಸ್ಕೂಟರ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ
ಜ.11- ಚನ್ನಪಟ್ಟಣ ತಾಲೂಕು ನೀಲಸಂದ್ರ ಗ್ರಾಪಂನ ತ್ಯಾಜ್ಯ ಸಂಗ್ರಹಣೆ ಆಟೋ ಚಾಲಕಿ ಸೌಮ್ಯ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಜ.19 - ಹವಾಮಾನ ವೈಪರಿತ್ಯದಿಂದ ನಷ್ಟದಲ್ಲಿದ್ದ 10,964 ಮಾವು ಬೆಳೆಗಾರರಿಗೆ 25 ಕೋಟಿ ವಿಮೆ ಹಣ ಪಾವತಿ
ಜ.19- ಕನಕಪುರದಲ್ಲಿ ಅಕ್ರಮ ಕಡವೆ ಮಾಂಸ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಜ.22- 7 ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು
ಜ.28- ಹಾರೋಹಳ್ಳಿಯಲ್ಲಿ 261 ಅಂಗಡಿ ಮಳಿಗೆಗಳ ತೆರವು
ಜ.29- ರಾಮನಗರದಲ್ಲಿ ಖಾಲಿ ಸೈಟ್‌ಗಳಲ್ಲಿ ನಗರಸಭೆಯಿಂದ ಸ್ವಚ್ಛತಾ ಅಭಿಯಾನ
ಫೆಬ್ರವರಿ
ಫೆ.2- ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಟೈರ್ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ.
ಫೆ.6- ರಾಮನಗರ ಜಿಪಂಗೆ ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ
ಫೆ.6- ಬಿಡಿಸಿಸಿ ಬ್ಯಾಂಕ್ ಕುದೂರು ಶಾಖೆಯಲ್ಲಿ ನಕಲಿ ಚಿನ್ನ ಅಡವಿಡಿಸಿ 9 ಕೋಟಿ ದುರುಪಯೋಗ
ಫೆ.10- ಡಿಸಿ ಕಚೇರಿಯಲ್ಲಿ ನಿಷೇಧಾಜ್ಞೆ ವಿರೋಧಿಸಿ ಪ್ರತಿಭಟಿಸಿದ ರೈತರ ಬಂಧನ , ಬಿಡುಗಡೆ
ಮಾರ್ಚ್
ಮಾ.3- ಕುದೂರು ಹೋಬಳಿ ಕೆಂಚನಪುರ ಗ್ರಾಮದ ಬಳಿ ಆಪೆ ಆಟೋಗಳ ಡಿಕ್ಕಿ - ಮೂವರ ದುರ್ಮರಣ
ಮಾ.4- ಕನಕಪುರ ತಾಲೂಕು ಹಲಸಿನಮರ ದೊಡ್ಡಿ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ
ಮಾ.4-ಕನಕಪುರದಲ್ಲಿ ಪಾನಮತ್ತ ಪೊಲೀಸರಿಂದ ದಲಿತರ ಮೇಲೆ ಹಲ್ಲೆ
ಮಾ.5-ರಾಮನಗರ ತಾ. ಹರೀಸಂದ್ರದಲ್ಲಿ ಕಸ ನಿರ್ವಹಣಾ ಘಟಕ ಸ್ಥಾಪನೆಗೆ ಗ್ರಾಮಸ್ಥರ ಅಡ್ಡಿ
ಮಾ.9- ಹಾರೋಬಲೆಯಲ್ಲಿ ಮೇಕೆದಾಟು ಕಚೇರಿ ಶುರು
ಮಾ.15- ರಾಮನಗರ ನಗರಸಭೆಯಿಂದ 63.70 ಲಕ್ಷ ಉಳಿತಾಯ ಬಜೆಟ್ ಮಂಡನೆ
ಮಾ.15- ಕನಕಪುರ ನಗರಸಭೆಯಿಂದ 129.29 ಲಕ್ಷ ಉಳಿತಾಯ ಬಜೆಟ್ ಮಂಡನೆ
ಮಾ.15- ಟೊಯೋಟಾ ಕಾರ್ಖಾನೆಯ ಶೌಚಾಲಯದಲ್ಲಿ ಆಕ್ಷೇಪಾರ್ಹ ಬರಹ
ಮಾ.16-20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಯಲ್ಲಿ ಹರಿದ ನೀರು
ಮಾ.17- ಬಿಡದಿ ಟೌನ್ ಶಿಪ್ ಯೋಜನೆ - ಭೂಸ್ವಾಧೀನಕ್ಕೆ ಅಧಿಸೂಚನೆ
ಮಾ.20- ಕೇತಗಾನಹಳ್ಳಿ ಬಳಿ ಸರ್ಕಾರಿ ಭೂಮಿ ಒತ್ತುವರಿ - ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿ 11 ಮಂದಿಗೆ ನೋಟಿಸ್
ಮಾ. 21- ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ರಾಮನಗರದಿಂದ ವಿಧಾನಸೌಧದವರೆಗೆ ಕರವೇ ಕಾರ್ಯಕರ್ತರ ಪಾದಯಾತ್ರೆ
ಮಾ.22- ಮರಾಠಿಗರ ಕನ್ನಡ ವಿರೋಧಿ ನೀತಿ ಖಂಡಿಸಿ ಕರೆ ನೀಡಿದ್ದ ಬಂದ್ ರಾಮನಗರದಲ್ಲಿ ವಿಫಲ
ಮಾ.23- ಹಾರೋಹಳ್ಳಿ ತಹಸೀಲ್ದಾರ್ ಶಿವಕುಮಾರ್ ಅಮಾನತ್ತು - ವಿವಿಧ ಸಂಘಟನೆಗಳ ಪ್ರತಿಭಟನೆ
ಮಾ.26- ರಾಮನಗರದಲ್ಲಿ ದಲಿತ ಮುಖಂಡರಿಂದ ಪೂರ್ವಭಾವಿ ಸಭೆ ಬಹಿಷ್ಕರಿಸಿ ಡಿಸಿ ವಿರುದ್ಧ ಆಕ್ರೋಶ
ಮಾ.26- ಚನ್ನಪಟ್ಟಣ ನಗರಸಭೆಯಲ್ಲಿ 2.76 ಕೋಟಿ ಉಳಿತಾಯ ಬಜೆಟ್ ಮಂಡನೆ
ಮಾ.26- ಬಿಡದಿ ಪುರಸಭೆಯಲ್ಲಿ 69.75 ಲಕ್ಷ ಉಳಿತಾಯ ಬಜೆಟ್ ಮಂಡನೆ
ಮಾ.27- ಹುಡ್ಕೋದಿಂದ ಬಿಡದಿ ಟೌನ್ ಶಿಪ್ ಯೋಜನೆಗೆ 21 ಸಾವಿರ ಕೋಟಿ ಆಫರ್
ಮಾ.27- ಚನ್ನಪಟ್ಟಣ ತಾ.ತಿಟ್ಟಮಾರನಹಳ್ಳಿ ಬಳಿ ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ - ಮೂವರ ದುರ್ಮರಣ
ಏಪ್ರಿಲ್
ಏಪ್ರಿಲ್ 1- ಎಸ್ಪಿ ಶ್ರೀನಿವಾಸ್ ಗೌಡ ಸೇರಿದಂತೆ ಐವರಿಗೆ ಮುಖ್ಯಮಂತ್ರಿ ಪದಕ
ಏಪ್ರಿಲ್ 4 - ರಾಮನಗರದ ಕಾರಾಗೃಹ, ಸಾರಿಗೆ ಬಸ್ ನಿಲ್ದಾಣಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ದಿಢೀರ್ ಭೇಟಿ
ಏಪ್ರಿಲ್ 5- ಜಿಲ್ಲಾಡಳಿತಕ್ಕೆ ಪರ್ಯಾಯವಾಗಿ ಬಾಬೂಜಿ ಜಯಂತಿ ಆಚರಣೆ
ಏಪ್ರಿಲ್ 8- ಪಿಯು ಫಲಿತಾಂಶ - ರಾಮನಗರಕ್ಕೆ 19ನೇ ಸ್ಥಾನ
ಏಪ್ರಿಲ್ 9- ಹಳೇ ದ್ವೇಷಕ್ಕೆ ಕೊಲೆ - 12 ಮಂದಿಗೆ ಜೀವಾವಧಿ ಶಿಕ್ಷೆ
ಏಪ್ರಿಲ್ 13- ರಾಮನಗರದಲ್ಲಿ ಸರ್ವಧರ್ಮ ಸಮ್ಮೇಳನ
ಏಪ್ರಿಲ್ 15 - ಮುಡಾ ನಿವೇಶನದಾರರಿಗೆ ಶುದ್ಧ ಕ್ರಯ, ನಿರಪೇಕ್ಷಣ ಪತ್ರ ವಿತರಣೆ
ಏಪ್ರಿಲ್ 15 - ರಾಮನಗರದಲ್ಲಿ ಬೆಲೆ ಏರಿಕೆ ಖಂಡಿಸಿ ರೈತಸಂಘದಿಂದ ಛತ್ರಿ ಚಳವಳಿ
ಏಪ್ರಿಲ್ 16- ಪೇದೆಗಳ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು - 6 ಮಂದಿ ಬಂಧನ
ಏಪ್ರಿಲ್ 16- ಮಾಗಡಿ ತಾಲೂಕಿನ ಸೋಮಕ್ಕಮಠದ ಜಮೀನಿನಲ್ಲಿ ಶ್ರೀಗಂಧ ಕಳವು - ಮೂವರ ಬಂಧನ
ಏಪ್ರಿಲ್ 17 - ರಾಮನಗರ ತಾಲೂಕು ಹರೀಸಂದ್ರದಲ್ಲಿ ಪೊಲೀಸ್ ಬಂಗಾವಲಲ್ಲಿ ತ್ಯಾಜ್ಯ ಘಟಕಕ್ಕೆ ಚಾಲನೆ
ಏಪ್ರಿಲ್ 19- ರಿಕ್ಕಿರೈ ಮೇಲೆ ಶೂಟೌಟ್ - 5 ತನಿಖಾ ತಂಡ ರಚನೆ
ಏಪ್ರಿಲ್ 22- ರಿಕ್ಕಿ ರೈ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ನನ್ನು ವಶ್ಕಕೆ ಪಡೆದು ಪೊಲೀಸರ ವಿಚಾರಣೆ
ಏಪ್ರಿಲ್ 25 - ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರಾಜಕೀಯ ಕಾಳಗ
- ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಿಂದ ಸಿಎಂಗೆ ಪತ್ರ
ಮೇ
ಮೇ 1- ಮಾಜಿ ಸಂಸದ ಡಿ.ಕೆ.ಸುರೇಶ್ ಪತ್ನಿ ಎಂದು ಹೇಳಿಕೊಂಡಿದ್ದ ಮಹಿಳೆ ಪವಿತ್ರ ಜೈಲುಪಾಲು
ಮೇ 2 - ಎಸ್ಸೆಸ್ಸೆಲ್ಸಿ - ರಾಮನಗರ ಜಿಲ್ಲೆಗೆ ಶೇ.63.12ರಷ್ಟು ಫಲಿತಾಂಶ
ಮೇ 8 - ಹರೀಸಂದ್ರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ
ಮೇ 11- ರಾಜ್ಯದಲ್ಲಿ 100 ಕಾಂಗ್ರೆಸ್ ಭವನ ಸ್ಥಾಪಿಸುವ ಉದ್ದೇಶ ಎಂದು ಡಿಕೆಶಿ ಘೋಷಣೆ
ಮೇ 14 - ಬಿಡದಿ ಹೋಬಳಿ ಭದ್ರಾಪುರ ಕಾಲೋನಿಯಲ್ಲಿ ಮಾತು ಬಾರದ ಬಾಲಕಿ ಅನುಮಾನಸ್ಪದ ಸಾವು
ಮೇ 16 - ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬಸವನಪುರದಿಂದ ಡಿಸಿ ಕಚೇರಿವರೆಗೆ ಗ್ರಾಮಸ್ಥರ ಮೆರವಣಿಗೆ
ಮೇ 19- ಮಾಗಡಿ ತಾಲೂಕು ವೈ.ಜಿ.ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರ ದುರ್ಮರಣ
ಮೇ 21 - ಪೊಲೀಸರಿಂದ 19 ಲಕ್ಷ ಮೌಲ್ಯದ ಮಾದಕ ವಸ್ತು ವಶ - ಮೂವರ ಬಂಧನ
ಮೇ 22 - ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ
ಮೇ 25 - ಬಮೂಲ್ ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ, ಮೈತ್ರಿ ಪಕ್ಷಗಳಿಗೆ ಮುಖಭಂಗ
ಮೇ 25 - ಜಿಪಂನಿಂದ 56 ಕೋಟಿ ರು.ತೆರಿಗೆ ವಸೂಲಿ - 2 ವರ್ಷಕ್ಕಿಂತ ಈ ಬಾರಿ ಹೆಚ್ಚು ಕರ ಸಂಗ್ರಹ
ಜೂನ್
ಜೂನ್ 4 - ಯತ್ನಾಳ್ ವಿರುದ್ಧ ಡಿಕೆಶಿ 100 ಕೋಟಿ ಮಾನನಷ್ಟ ಮೊಕದ್ದಮೆ
ಜೂನ್ 6- ಮಾಗಡಿಗೆ 5 ಕೆಪಿಎಸ್ ಶಾಲೆ ಮಂಜೂರು ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಜೂನ್ 9 - ಯುವಕ ಯುವತಿಯನ್ನು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ - ಇಬ್ಬರ ಬಂಧನ
ಜೂನ್ 17 - ಜಿಪಂ ಸಿಇಒ ಕ್ರಮದ ವಿರುದ್ಧ ಶಿಕ್ಷಕರ ಪ್ರತಿಭಟನೆ
ಜೂನ್ 25 - ಮುಂದಿನ ಚುನಾವಣೆಗೆ ರಾಮನಗರದಿಂದ ಸ್ಪರ್ಧೆ ಎಂದ ನಿಖಿಲ್ ಕುಮಾರಸ್ವಾಮಿ
ಜುಲೈ
ಜುಲೈ 3 - ಡಿಕೆಶಿ ತಮ್ಮ ನಡವಳಿಕೆಯಿಂದಲೇ ಸಿಎಂ ಆಗೋದು ಕಷ್ಟ ಎಂದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ
ಜುಲೈ 5 - ಚನ್ನಪಟ್ಟಣ ತಾಲೂಕು ಮುದುಗೆರೆ ಗ್ರಾಮದಲ್ಲಿ ಚಿರತೆ ದಾಳಿಗೆ 17 ಕುರಿಗಳು ಬಲಿ
ಜುಲೈ 10- ಕನಕಪುರ ತಾಲೂಕಿನ ನಾರಾಯಣಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಜುಲೈ 13- ರಾಮನಗರ ತಾಲೂಕು ಜಯಪುರ ಗೇಟ್ ಬಳಿ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಮೂವರ ಸಾವು
ಜುಲೈ 21 - ರಾಮನಗರ ಜಿಲ್ಲೆಯಲ್ಲಿ 185 ವ್ಯಾಪಾರಿಗಳಿಗೆ ಜಿಎಸ್ ಟಿ ತೆರಿಗೆ ನೋಟಿಸ್ ಜಾರಿ
ಜುಲೈ 25- ಚನ್ನಪಟ್ಟಣ ತಾಲೂಕು ಕೃಷ್ಣಾಪುರ ಗ್ರಾಮದಲ್ಲಿ ಪತಿ ಹತ್ಯೆಗೆ 3.5 ಲಕ್ಷ ರುಪಾಯಿಗೆ ಸುಪಾರಿ ಕೊಟ್ಟ ಪತ್ನಿ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದರು.
ಜುಲೈ 30 - ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳನ್ನು ತೆರೆಯಲು ನಿರ್ಧಾರ - ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ಆಗಸ್ಟ್
ಆಗಸ್ಟ್ 1- ರಾಮನಗರ ಜಿಲ್ಲೆಯ ಹಲವೆಡೆ ರಸಗೊಬ್ಬರ ಮಾರಾಟ ಕೇಂದ್ರಗಳ ಮೇಲೆ ಕೃಷಿ, ಕಂದಾಯ, ಪೊಲೀಸ್ ಅಧಿಕಾರಿಗಳ ದಾಳಿ
ಆಗಸ್ಟ್ 3- ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ಡೇ ಕೇರ್ ಘಟಕ ಪ್ರಾರಂಭ
ಆಗಸ್ಟ್ 5 - ಸಾರಿಗೆ ನೌಕರರ ಮುಷ್ಕರ - ಖಾಸಗಿ ಬಸ್ ಗಳ ಸಂಚಾರ
ಆಗಸ್ಟ್ 12- ಜೆಡಿಎಸ್ ಪಕ್ಷ ಸದಸ್ಯತ್ವಕ್ಕೆ ಮಿಸ್ ಕಾಲ್ ನೀಡಿ ಅಭಿಯಾನಕ್ಕೆ ರಾಮನಗರದಲ್ಲಿ ಚಾಲನೆ
ಆಗಸ್ಟ್ 20 - ಚನ್ನಪಟ್ಟಣ ತಾಲೂಕು ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಆರೋಪಿ ನೇಣಿಗೆ ಶರಣು
ಆಗಸ್ಟ್ 23 - ಕನಕಪುರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ನಾಲ್ವರ ಬಂಧನ
ಆಗಸ್ಟ್ 26 - ಬೆಂ.ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಸೀಜ್
ಆಗಸ್ಟ್ 29 - ಸತ್ತೇಗಾಲದಿಂದ ಮಾಗಡಿಯ 44 ಕೆರೆಗಳಿಗೆ ನೀರು ಪೂರೈಕೆ ಮಾಡಲು ಕ್ರಮ ವಹಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ
ಆಗಸ್ಟ್ 30 - ಸಾಹಿತಿ ಡಾ.ಶೈಲೇಶ್ ಕಾಕೋಳು ಸರ್ವಾಧ್ಯಕ್ಷತೆಯಲ್ಲಿ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನ
ಸೆಪ್ಟೆಂಬರ್
ಸೆ.1- ಜಿಲ್ಲಾಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣದಲ್ಲಿ ಡಾ.ಶಶಿ ಅಮಾನತ್ತು
ಸೆ.2- ರಾಮನಗರ ಕಾರಾಗೃಹದಲ್ಲಿ ಮಾರಾಮಾರಿ ನಡೆದ ಕಾರಣ ಐವರು ಮಂಡ್ಯ ಕಾರಾಗೃಹಕ್ಕೆ ಸ್ಥಳಾಂತರ
ಸೆ.8- ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಟರಾಜ್ ಅವರಿಂದ ಮಾಜಿ ಶಾಸಕಿ ಅನಿತಾ ಮತ್ತು ನಿಖಿಲ್ ಪರಿಹಾರ ಕೇಳಿದ ದಾಖಲೆ ಬಿಡುಗಡೆ.
ಸೆ.11 - ಮಾಗಡಿಯಲ್ಲಿ ಪೊಲೀಸ್ ಭದ್ರತೆಯಲ್ಲಿ ಗಾಂಧಿ ಪ್ರತಿಮೆ ಸ್ಥಳಾಂತರ
ಸೆ.12- ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರಿಂದ ಅನಿರ್ತಿಷ್ಟಾವಧಿ ಪ್ರತಿಭಟನೆ ಪ್ರಾರಂಭ
ಸೆ.16- ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ವಿಷ ಸೇವಿಸಿ ಮೂವರು ರೈತರಿಂದ ಆತ್ಮಹತ್ಯೆಗೆ ಯತ್ನ
ಸೆ.18- ರಾಮನಗರದ ರಂಗರಾಯನದೊಡ್ಡಿ ಕೆರೆ ಸೇರಿ ನಾಲ್ಕು ಕೆರೆಗಳಲ್ಲಿ ದೋಣಿ ವಿಹಾರಕ್ಕೆ ಚಾಲನೆ
ಸೆ.19- ಬಿಜೆಪಿ - ದಳ ಎರಡು ಜನ್ಮ ವೆತ್ತಿ ಬಂದರೂ ಬಿಡದಿ ಟೌನ್ ಶಿಪ್ ಯೋಜನೆ ನಿಲ್ಲಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು
ಸೆ.19- ರಾಮನಗರದಲ್ಲಿ ದೇವರಾಜ ಅರಸು ಜಯಂತಿ ಅದ್ಧೂರಿಯಾಗಿ ಆಚರಣೆ
ಸೆ.25 - ರಾಜ್ಯ ರೇಷ್ಮೆ ಮಹಾ ಮಂಡಳಿ ಅಧ್ಯಕ್ಷರಾಗಿ ಎಸ್.ಗಂಗಾಧರ್ ನೇಮಕ
ಸೆ.28 - ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ
ಅಕ್ಟೋಬರ್
ಅ.4- ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಮಹಾರಾಷ್ಟ್ರದಲ್ಲಿ ಬಂಧನ
ಅ.7 - ಬಿಗ್ ಬಾಸ್ ಮನೆ ಇರುವ ಜಾಲಿವುಡ್ ಸ್ಟುಡಿಯೋಗೆ ಜಿಲ್ಲಾಡಳಿತದಿಂದ ಬೀಗ
ಅ.7- ಬಿಡದಿ ಬಳಿಯ ಭೀಮನಹಳ್ಳಿಯ ಶೆಡ್ ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಉಂಟಾದ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರ ಸಾವು
ಅ.8 - ಸುದೀಪ್ ಗೂ ಡಿಕೆಶಿಗೂ ತಂದಿಡೋದು ಬೇಡ ಎಂದು ಶಾಸಕ ಬಾಲಕೃಷ್ಣ ಸಲಹೆ
ಅ.15 - ಮಾಗಡಿಯಲ್ಲಿ ಕೆಂಪೇಗೌಡ ಪ್ರತಿಮೆ ತೆರವುಗೊಳಿಸದಂತೆ ಜೆಡಿಎಸ್ ಪ್ರತಿಭಟನೆ
ಅ.15- ಬಿಡದಿ ಪುರಸಭೆ ಅಧ್ಯಕ್ಷೆಯಾಗಿ ಭಾನುಪ್ರಿಯಾ ಆಯ್ಕೆ
ಅ.25 - ರಾಮನಗರದಲ್ಲಿ ದಾರುಲ್ ಖುರಾನ್ ಕ್ಯಾಂಪಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆ
ಅ.30- ಬಿಡದಿ ಬಳಿಯ ಬೈರಮಂಗಲ ಕ್ರಾಸ್ ನಲ್ಲಿ 7 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿ ಅನಾವರಣ
ಅ.31- ಬೆಂ.ದಕ್ಷಿಣ ಜಿಲ್ಲೆಯ ಎಚ್.ಸಿದ್ದಯ್ಯ ಮತ್ತು ಎಚ್.ಎಂ.ಪರಮಶಿವಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ನವೆಂಬರ್
ನ.3- ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿ ಮುಸ್ಲಿಂ ಉದ್ಯಮಿ ಸೈಯದ್ ಸಾದತ್ ಉಲ್ಲಾ ಸಕಾಫ್ ಅವರಿಂದ 2 ಕೋಟಿ ವೆಚ್ಚದಲ್ಲಿ ಬಸವೇಶ್ವರ ದೇವಾಲಯ ನಿರ್ಮಾಣ
ನ.6- ಬಿಡದಿ ಟೌನ್ ಶಿಪ್ ಯೋಜನೆ ಭೂ ದರ ನಿಗದಿ ವಿರೋಧಿಸಿ ರೈತರ ಪ್ರತಿಭಟನೆ
ನ.7- ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ರೈತರಿಂದ ಘೇರಾವ್
ನ.7- ಕನಕಪುರ ತಾಲೂಕು ಕೂನೂರು ಗ್ರಾಮದಲ್ಲಿ ಎರಡು ಗಂಡಾನೆಗಳ ಸಾವು
ನ.24- ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಕೆ
ಡಿಸೆಂಬರ್
ಡಿ.4- ಮಾಗಡಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದ ರೈತರ ಬಂಧನ ಬಿಡುಗಡೆ
ಡಿ.7- ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ 16 ಕಾಂಗ್ರೆಸ್ ಬೆಂಬಲಿತರ ಗೆಲುವು, ಜೆಡಿಎಸ್ - ಬಿಜೆಪಿ ಮೈತ್ರಿಗೆ ಮುಖಭಂಗ
ಡಿ.12- ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರ ಶಶಾಂಕ್ ರೇವಣ್ಣ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ರಾಜೇಶ್ ಸಾವು
ಡಿ.16- ರಾಮನಗರ ತಾಲೂಕು ಹಾಲಗಹಳ್ಳಿಯಲ್ಲಿ ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆಗೆ ಶರಣು
ಡಿ.18- ಮಾಗಡಿ ಪಟ್ಟಣದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾ*ಚಾರ - ಮೂವರ ಬಂಧನ
ಡಿ.19- ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಭೈರವನ ಎಂಟ್ರಿ
ನಮ್ಮನ್ನು ಅಗಲಿದವರು :
- ಜುಲೈ 14 - ಬಹು ಭಾಷಾ ನಟಿ ಬಿ.ಸರೋಜಾ ದೇವಿ ಇಹಲೋಕ ತ್ಯಜಿಸಿದರು. ಚನ್ನಪಟ್ಟಣ ತಾಲೂಕು ದಶವಾರ ಗ್ರಾಮದವರಾದ ಅವರು, ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಶಾಲೆ ಕಟ್ಟಿಸಿ ಕೊಟ್ಟಿದ್ದರು.
- ಜುಲೈ 15 - ಚನ್ನಪಟ್ಟಣ ತಾಲೂಕಿನ ದಶವಾರದ ತೋಟದಲ್ಲಿ ಬಿ.ಸರೋಜಾ ದೇವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
- ನ.14- ಹಸಿರೇ ಉಸಿರಾಗಿ ಜೀವಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ
- ನ.26- ರಾಮನಗರದ ಖ್ಯಾತ ವೈದ್ಯ ಡಾ.ಕೆ.ಪಿ.ಹೆಗ್ಡೆ ನಿಧನ


